ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಣೆ

Distribution of certificate to the Director of Primary Agricultural Co-operative Society

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಣೆ                                                 

ಕಂಪ್ಲಿ 01 : ತಾಲೂಕಿನ ದೇವಲಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಯ್ಕೆಗೊಂಡ ನಿರ್ದೇಶಕರಗೆ ಪ್ರಮಾಣ ಪತ್ರ ವಿತರಿಸಿದರು ಸ್ಥಾನಗಳಿಗೆ ಜಿದ್ದಾಜಿದ್ದಿನ ಚುನಾವಣೆಗೆ ಸಾಕ್ಷಿಯಾಯಿತು. ಇಲ್ಲಿನ ಸಂಘದ 12 ಸ್ಥಾನಗಳಿಗೆ 25 ಜನ ನಾಮಪತ್ರ ಸಲ್ಲಿಸಿದ್ದರು. ಇದರಿಂದ ಚುನಾವಣೆ ಪ್ರಕ್ರಿಯೆ ನಡೆಯಿತು. ಈ ಚುನಾವಣೆಯಲ್ಲಿ ಮತದಾರರು ಸರದಿ ಸಾಲಿನಲ್ಲಿ ನಿಂತು ಮತದಾನ ಚಲಾಯಿಸಿದರು. ಸಣ್ಣಪುಟ್ಟ ಘಟನೆಗಳು ಹೊರತುಪಡಿಸಿದರೆ, ಶಾಂತಿಯುತವಾಗಿ ಚುನಾವಣೆ ನಡೆಯಿತು. ಗೌಡ್ರುಸಿದ್ದಪ್ಪ, ಗೊರವರ ಹನುಮಂತಪ್ಪ, ಸಂಗಟಿ ಹನುಮಂತಪ್ಪ, ಗೌಡ್ರು ಷಣ್ಮುಕಪ್ಪ, ರಮೇಶ ಪೂಜಾರಿ, ವಡ್ರು ಮುಕ್ಕಣ್ಣ, ಕೆ.ಮಹಾದೇವಪ್ಪ, ಗೌಡ್ರು ಮಲ್ಲಿಕಾರ್ಜುನ, ಕಾರಿಗನೂರು ಹನುಮಂತಪ್ಪ, ಕುರಿ ವಿಶ್ವನಾಥ, ಗೌಡ್ರುಮಲ್ಲಮ್ಮ, ಗುಬಾಜಿಶಿಲ್ಪಮ್ಮ ರಾಮಾಂಜಿನಿ ಇವರು ಜಯಗಳಿಸಿ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ. ಒಟ್ನಲ್ಲಿ ರಿರ್ಟನಿಂಗ್ ಅಧಿಕಾರಿ ರೇವಣ್ಣ, ಪಿಆರ್‌ಒಗಳಾದ ಹೆಚ್‌.ಪಿ.ಸೋಮಶೇಖರ,. ಈ ಸಂದರ್ಭದಲ್ಲಿ ಸೊಸೈಟಿ ಮುಖ್ಯಕಾರ್ಯನಿರ್ವಾಹಕ ಕುಮಾರ ಮುಖಂಡರಾದ ಜಿ ಮರೇಗೌಡ್ರು ಗೌಡ್ರುಅಂಜಿನಪ್ಪ ವೀರೇಶಗೌಡ ಲಿಂಗನಗೌಡ  ಗೋಲ್ಲರ ಜಂಭಯ್ಯ ಸೇರಿದಂತೆ ಅನೇಕ ಗ್ರಾಮಸ್ಥರು ಇದ್ದ್ರು ಸಿಬ್ಬಂದಿಗಳು ಹಾಗೂ ಕುಡತಿನಿ ಪೊಲೀಸರು ಇದ್ದರು. 

ಜ01ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಯ್ಕೆಗೊಂಡ ನಿರ್ದೇಶಕರಗೆ ಪ್ರಮಾಣ ಪತ್ರ ವಿತರಿಸಿದರು