ರಾಷ್ಟ್ರೀಯ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಡಾ.ಪ್ರಭಾಕರ ಕೋರೆ ಅಭಿನಂದನೆ
ಬೆಳಗಾವಿ 1: ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಎನ್ಸಿಸಿ ಕೆಡೆಟ್ ಆಕಾಶ ಗುಡಗೇನಟ್ಟಿ ಕೇರಳದಲ್ಲಿ ಜರುಗಿದ 33ನೇ ಜಿ.ವಿ. ಮವಲಂಕರ್ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಫ್ ಜೂನಿಯರ್ ಹಾಗೂ ಸೀನಿಯರ್ ಎರಡು ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗಳಿಸುವ ಮೂಲಕ ರಾಷ್ಟ್ರೀಯ ಸಾಧನೆ ಮಾಡಿದ್ದರೆ.
ಎನ್ಸಿಸಿ ಕೆಡೆಟ್ ಧೀರಜ್ ಭಾವಿಮನೆ ನವದೆಹಲಿಯಲ್ಲಿ ಜರುಗಿದ್ದ ರಾಷ್ಟ್ರೀಯ ಸೈನಿಕ ಶಿಬಿರದಲ್ಲಿ ಪಾಲ್ಗೊಂಡಿದ್ದ. ಅಂತೆಯೇ ಶಶಾಂಕ ಪಾಟೀಲ ಭುವನೇಶ್ವರದ ಕಳಿಂಗ ವಿವಿದಲ್ಲಿ ಜರುಗಿದ ಅಂತರ್ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ 74.58 ಮೀ.ಜಾವಲಿನ್(ಭರ್ಚಿ)ಎಸೆಯುವ ಮೂಲಕ ಬೆಳ್ಳಿ ಪದಕವನ್ನು ಪಡೆದುಕೊಂಡು ರಾಷ್ಟ್ರೀಯ ಸಾಧನೆ ಮಾಡಿದ್ದಾನೆ. ಈ ಮೂವರು ವಿದ್ಯಾರ್ಥಿಗಳಿಗೆ ಕೆಎಲ್‌ಇ ಡಾ.ಪ್ರಭಾಕರ ಕೋರೆ ಅವರು ಪ್ರಧಾನ ಕಚೇರಿಯಲ್ಲಿ ಅಭಿನಂದಿಸಿ ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಪ್ರಾ.ಡಾ.ಎಚ್.ಎಸ್.ಮೇಲಿನಮನಿ, ಎನ್ಸಿಸಿ ಅಧಿಕಾರಿ ಮೇಜರ್ ಡಾ.ಮಹೇಶ ಗುರನಗೌಡರ, ದೈಹಿಕ ನಿರ್ದೇಶಕರಾದ ಡಾ.ಸಿ.ರಾಮರಾವ್, ಅಥ್ಲೇಟಿಕ್ ತರಬೇತುದಾರ ಸಂಜೀವಕುಮಾರ ನಾಯ್ಕ ಉಪಸ್ಥಿತರಿದ್ದರು.