ಮುದ್ದೇಬಿಹಾಳ 04: ಪಟ್ಟಣದ ಹುಡ್ಕೋ ಬಡಾವಣೆಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ವಿವಿಐಪಿ ಪ್ರವಾಸಿ ಮಂದಿರದ ಕಟ್ಟಡವನ್ನು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೇದ ನಾಲೈದು ವರ್ಷಗಳಿಂದ ಈ ಕಟ್ಟಡ ನಿರ್ಮಿಸಲಾಗಿದೆ. ಆದರೆ ಕೆಲವು ಕೋಠಡಿಗಳಲ್ಲಿ ಬದಲಾವಣೆ ಮಾಡಬೇಕಿದೆ ಜೊತೆಗೆ ಇತರೆ ರೀತಿಯ ಮೂಲಬೂತ ಸೌಲಭ್ಯಗಳನ್ನು ಕಲ್ಪಿಸಬೇಕಿದೆ ಈ ಹಿನ್ನೇಲೆಯಲ್ಲಿ ತಕ್ಷಣದಲ್ಲಿಯೇ ಬಾಕಿ ಇರುವ ಎಲ್ಲ ಅಲ್ಪಸ್ಪಲ್ಪ ಕೆಲಸಗಳನ್ನು ಮುಗಿಸಿ ಶೀಘ್ರ್ರದಲ್ಲಿಯೇ ಕಟ್ಟಡದ ಉದ್ಘಾಟನೆ ಮಾಡಲಾಗುವುದು ಎಂದರು.
ಈ ವೇಳೆ ಲೋಕೊಪಯೋಗಿ ಇಲಾಖೆಯ ಎಇಇ ಶಿವನಗುತ್ತಿ, ಯುವ ಮುಖಂಡ ಚಿನ್ನು ನಾಡಗೌಡ, ವಿವಿಧ ಅಧಿಕಾರಿಗಳು ಇದ್ದರು.