ಕಾನೂನನ್ನು ಗೌರವಿಸಿ ನಮ್ಮ ಕರ್ತವ್ಯಗಳ ಗಮನ ಕೊಡಿರಿ : ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ
ಶಿಗ್ಗಾವಿ 04:ಕಾನೂನನ್ನುಗೌರವಿಸುವ ಮೂಲಕ ನಾವು ನಮ್ಮ ಕರ್ತವ್ಯಗಳ ಬಗ್ಗೆ ಹೆಚ್ಚಿನ ಗಮನ ಕೊಟ್ಟು, ವಿಶ್ವಾಸದೊಂದಿಗೆ, ಹಿರಿಯರ ಸನ್ಮಾರ್ಗದಲ್ಲಿ ನಡೆದರೆ ವೃತ್ತಿಜೀವನ ಯಶಸ್ವಿಯಾಗಲು ಸಾಧ್ಯಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜರವರು ಹೇಳಿದರು.
ಪಟ್ಟಣದತಾಲೂಕ ನ್ಯಾಯವಾದಿಗಳ ಸಂಘದಿಂದ ನಡೆದ ವಕೀಲರ ದಿನಾಚರಣೆಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದಅವರು ಮನುಷ್ಯತನ್ನಜೀವನದಲ್ಲಿತಪ್ಪು ಪಡುವದು ಸಹಜ. ತಪ್ಪುಗಳು ಗೊತ್ತಿದ್ದರೂ ಪದೇ ಪದೇ ಪುನರಾವರ್ತನೆಗೊಳಿಸದೆ, ಮಾಡಿದತಪ್ಪನ್ನು ಪರಿವರ್ತನೆ ಮಾಡಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕುಅಂದಾಗ ಮಾತ್ರ ವೃತ್ತಿಜೀವನ ಸಾರ್ತಕವಾಗಬಲ್ಲದುಎಂದರು.
ಕಾನೂನಿನ ಮೇಲೆ ಜನರಿಗೆ ನಂಬಿಕೆ ಉಳಿಯಬೇಕಾದರೆ, ಸಾಮಾನ್ಯರಿಗೆಅರ್ಥವಾಗುವಂತೆಕನ್ನಡ ಭಾಷೆಯನ್ನು ಹೆಚ್ಚು ಬಳಕೆ ಮಾಡಿಕೊಳ್ಳುವ ಮೂಲಕ ನಮ್ಮಕನ್ನಡ ಭಾಷೆಗೆ ಹೆಚ್ಚಿನಗೌರವವನ್ನುಕೊಡುವ ಕೆಲಸವಾಗಬೇಕು.ಕರ್ತವ್ಯದಜೊತೆಗೆ ನಾಡು ನುಡಿ ನಮ್ಮಧರ್ಮರಕ್ಷಣೆಯು ಬಹಳ ಪ್ರಾಮುಖ್ಯವಾಗಿದ್ದು ಇಂದಿನ ಯುವ ವಕೀಲರು ವೈಯಕ್ತಿಕ ವಿಷಯಗಳನ್ನು ವೃತ್ತಿಯಲ್ಲಿ ಬಳಸದೆ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿತಾಲೂಕು ನ್ಯಾಯವಾದಿಗಳ ಸಂಘದಿಂದ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜರವನ್ನು ಸನ್ಮಾನಿಸಿ ಗೌರವಿಸಲಾಯಿತು.ಜೊತೆಗೆ ವಕೀಲಿ ವೃತ್ತಿಯಲ್ಲಿ 25 ವರ್ಷ ಪೂರೈಸಿದ ಎಸ್ ಕೆ ಜೋಶಿ ಹಾಗೂ ಎಮ್‌ಎನ್‌ಕ್ಯಾಲಕೊಂಡಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ವಕೀಲರಾದಎಫ್‌ಎಸ್‌ಕೋಣನವರ, ಜಿ ಐ ಸಜ್ಜನರ ಪ್ರಸ್ತಾವಿಕವಾಗಿ ಮಾತನಾಡಿದರು.
ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಅಧ್ಯಕ್ಷ ಸುನಿಲ ಎಸ್ ತಳವಾರ, ದಿವಾಣಿ ನ್ಯಾಯಾಧೀಶೆ ಅಶ್ವಿನಿ ಚಂದ್ರಕಾಂತ, ತಾಲೂಕು ನ್ಯಾಯವಾದಿಗಳ ಸಂಘದಅಧ್ಯಕ್ಷಎಫ್. ಬಿ.ಗಂಜಿಗಟ್ಟಿ, ಆರ್.ಯು.ಕುಬಸದ, ಸರ್ಕಾರಿಅಭಿಯೋಜಕಎನ್. ಎಂ.ಮಲ್ಲಾಡದ ಹಾಗೂ ಮೀರಾಬಾಯಿಉದಗಟ್ಟಿ ಸೇರಿದಂತೆ ಹಿರಿಯ ಹಾಗೂ ಹಿರಿಯ ಮಹಿಳಾ ನ್ಯಾಯವಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಎಂಜಿ ವಿಜಾಪುರ ಸ್ವಾಗತಿಸಿ.ಬಿಪಿ ಗುಂಡಣ್ಣನವರ ನಿರೂಪಿಸಿ ಜಿಬಿ ವಾಲ್ಮೀಕಿ ವಂದಿಸಿದರು.