ಗುತ್ತಿಗೆದಾರರು ಕಳಪೆ ಕಾಮಗಾರಿಗಳನ್ನು ಆರೋಪಿಸಿ ಕರ್ನಾಟಕ ರಕ್ಷಣಾ ಜಿಲ್ಲಾಧ್ಯಕ್ಷ ಪುರಸಭೆ ಅಧ್ಯಕ್ಷರಿಗೆ ಮನವಿ

Karnataka defense district chairman appealed to the municipal chairman alleging poor works by the co

ಗುತ್ತಿಗೆದಾರರು ಕಳಪೆ ಕಾಮಗಾರಿಗಳನ್ನು ಆರೋಪಿಸಿ  ಕರ್ನಾಟಕ ರಕ್ಷಣಾ   ಜಿಲ್ಲಾಧ್ಯಕ್ಷ  ಪುರಸಭೆ ಅಧ್ಯಕ್ಷರಿಗೆ ಮನವಿ 

ಬ್ಯಾಡಗಿ 04: ಪಟ್ಟಣದಲ್ಲಿ ನಡೆದಿರುವ ಯುಜಿಡಿ ಹಾಗೂ ಕುಡಿಯುವ ನೀರಿನ 24*7  ಅಭಿವೃದ್ಧಿ ಕಾಮಗಾರಿಗಳು ಕುಂಟುತ್ತಾ ಸಾಗಿದ್ದು,  ಗುತ್ತಿಗೆದಾರರು ಕಳಪೆ ಕಾಮಗಾರಿಗಳನ್ನು ನಿರ್ವಹಿಸಿದ್ದಾರೆಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಹನುಮಂತಪ್ಪ ಬೋವಿ  ಪುರಸಭೆ ಅಧ್ಯಕ್ಷರಿಗೆ ಮನವಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು. 

ಅವರು ಸ್ಥಳೀಯ ಪುರಸಭೆಯ ಸಭಾಂಗಣದ ಎದುರು ತಾಲೂಕಾ ರಕ್ಷಣಾ ವೇದಿಕೆಯ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.  ಪಟ್ಟಣದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳಲ್ಲಿ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿರುವುದು ಕಂಡು ಬರುತ್ತಿವೆ. ಅಂತಹ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೇ, ಮುಂದೆ ಅಂಥವರಿಗೆ ಯಾವುದೇ ಕಾಮಗಾರಿ ನೀಡಬಾರದೆಂದು ತಾಕಿತು ಮಾಡಿದರು.ಪುರಸಭೆಯ ವಿವಿಧ ಬಡಾವಣೆಗಳಲ್ಲಿ ನಡೆದಿರುವ ಯುಜಿಡಿ  ಹಾಗೂ ಶುದ್ದ ಕುಡಿಯುವ ನೀರಿನ ಕಾಮಗಾರಿಗಳು ಕಳಪೆಯಾಗಿವೆ ಬೇಕಾ ಬಿಟ್ಟಿಯಾಗಿ ಕೆಲಸ ಮಾಡಿ ಸರ್ಕಾರದ ಹಣವನ್ನು ಅಪವ್ಯಯ ಮಾಡುತ್ತಿದ್ದಾರೆ. ಪುರಸಭೆ ಚುನಾಯಿತ ಸದಸ್ಯರು ಹಾಗೂ ಅಧಿಕಾರಿಗಳು ಆ ಬಗ್ಗೆ ಗಮನ ಹರಿಸಿ, ಮುಲಾಜಿಲ್ಲದೇ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ತಾಕೀತು ಮಾಡಿದರು.ಕೆಲವೊಂದು ಕಡೆ ಯುಜಿಡಿ ಪೈಪುಗಳನ್ನು ಚರಂಡಿಯ ಮಧ್ಯದಲ್ಲಿ ಹಾಕಲಾಗಿದ್ದು, ಅವುಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿದರು. ಈ ಹಿಂದೆ ಪಟ್ಟಣಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ 2023 ರೊಳಗೆ ಕಾಮಗಾರಿ ಅಂತಿಮಗೊಳಿಸುವಂತೆ ಎಚ್ಚರಿಕೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಯುಜಿಡಿ ಹಾಗೂ ಕುಡಿಯುವ ನೀರಿನ ಸಂಪೂರ್ಣ ಕಾಮಗಾರಿಯನ್ನು ಪುರಸಭೆಯ ಆಡಳಿತ ಮಂಡಳಿಯವರು ಪರೀಶೀಲನೆ ಮಾಡಿ ಕಾಮಗಾರಿ ಶಿಸ್ತು ಬದ್ಧವಾಗಿ ಮುಕ್ತಾಯವಾಗಿದ್ದಲ್ಲಿ ಮಾತ್ರ ಬಿಲ್ ಪಾವತಿಸುವಂತೆ ಕಿಡಿಕಾರಿದರು.ಈ ಸಂಧರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಶಿವರಾಜ ಅಂಗಡಿ, ಬಸಣ್ಣ ಛತ್ರದ ಮುಖ್ಯಾಧಿಕಾರಿ ವಿನಯಕುಮಾರ್ ಹೊಳಿಯಪ್ಪಗೋಳ,  ಕರವೇ ಪದಾಧಿಕಾರಿಗಳಾದ ಮಾದೇವಪ್ಪ ಹೇಡಿಗೊಂಡ,  ಮಾಲತೇಶ ಹೆಬಸೂರ,ರಮೇಶ್ ಸುಂಕದ ಮೌಲಾಲಿ ಏರಿಮನೆ, ಮಂಜುನಾಥ್ ಲುಕೊಂಡೆ, ಯುವರಾಜ್ ನವಲಗುಂದ ಅಶೋಕ್ ಗದಗ, ಕೃಷ್ಣ ಚಾವಡಿ,  ಸುರೇಶ ಕುಂಗ್ಲಿ,  ಪಕೀರ​‍್ಪ ಮ್ಯಾಗೇರಿ,  ದರ್ಶನ್ ಬೋವಿ, ಬಸಪ್ಪ ಕೊಡಬಾಳ, ಕಿರಣ್ ಕೂಡಬಾಳ, ಮಾಲತೇಶ್ ಓಲೆಕಾರ, ಲಕ್ಷ್ಮಣ ಕಟಗಿ, ಚಂದ್ರು ಕರ್ಜಗಿ, ಕುಮಾರ ಮಂಚಿಕೊಪ್ಪ, ಗೀರೀಶ ವಡ್ಡರ, ರತ್ನಮ್ಮ ಸಂಗಪ್ಪನವರ, ಶೋಭಾ ಹೂಗಾರ, ದ್ಯಾಮವ್ವ ಮಾದಣ್ಣನವರ, ಮೀನಾಕ್ಷಮ್ಮ ಮುದುಕಮ್ಮನವರ, ಬಸಮ್ಮ ಸಾವೂರ, ವಿದ್ಯಾ ಕಾಡಮ್ಮನವರ, ಪಾರಮ್ಮ ಚೂರಿ, ಶಿಲ್ಪಾ ಹೂಗಾರ, ಪುನೀತ ಸಣ್ಣನೀಲಪ್ಪನವರ,  ಪರಮೇಶ್ ದೆಸಿ ಇದ್ದರು.