ಪಟ್ಟಣದ ಎಸ್.ಬಿ.ಎಸ್ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಾನಿಧ್ಯವಹಿಸಿ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಆಶಿರ್ವಚನ
ಮುಂಡರಗಿ 04 : ವೈದ್ಯಕೀಯ ಕ್ಷೇತ್ರದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ನಿಷ್ಕಲ್ಮಶ ಮನಸ್ಸಿನಿಂದ ಶಿಕ್ಷಣ ಪಡೆಯುವುದರ ಜೊತೆಗೆ ನಿಮ್ಮ ವೈಧ್ಯಕೀಯ ಸೇವೆ ಪ್ರತಿ ಭಾಗದ ಜನರಿಗೆ ಸಿಗುವಂತಾಗಲಿ ಎಂದು ಮರುಳಾರಾಧ್ಯ ಶಿವಾಚಾರ್ಯ ಹೇಳಿದರು.
ಪಟ್ಟಣದ ಎಸ್.ಬಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದ ಧನ್ವಂತರಿ ಸಭಾಂಗಣದಲ್ಲಿ ಜರುಗಿದ 2024-25ನೇ ಸಾಲಿನ 1ನೇ ವೃತ್ರಿಪರ ಬಿಎಎಂಎಸ್ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಸಾನಿದ್ಯವಹಿಸಿ ಆಶಿರ್ವಚನ ನೀಡಿದರು.
ಇಂದಿನ ವಿದ್ಯಾರ್ಥಿಗಳು ತಮ್ಮ ವೈಧ್ಯಕೀಯ ವೃತ್ತಿಪರ ಪದವಿ ಮುಗಿದ ನಂತರ ತಮ್ಮಲ್ಲಿ ಬರುವ ಎಲ್ಲಾ ರೋಗಿಗಳನ್ನು ವೈಧ್ಯಕೀಯ ಸೇವಾ ಮನೋಭಾವನೆಯಿಂದ ಕಂಡಾಗ ಮಾತ್ರ ರೋಗಿಗಳು ನಿಮ್ಮನ್ನು ದೇವರೆಂದು ಕಾಣುತ್ತಾರೆ. ಹಾಗೂ ಎಲ್ಲಾ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನದ ಕನಸ್ಸು ನನಸಾಗಬೇಕಾದರೆ, ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಶ್ರಮಿಸಬೇಕು ಅಂದಾಗ ತಮ್ಮ ಫಲಿತಾಂಶದ ಶ್ರೇಣಿಯನ್ನು ವೃದ್ಧಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್.ಬಿ.ಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಗುರುಮೂರ್ತಿಸ್ವಾಮಿ ಇನಾಮದಾರ ಮಾತನಾಡಿ, ಆದುನಿಕ ಯುಗದ ಇಂದಿನ ವಿದ್ಯಾರ್ಥಿಗಳು ದೂಮಪಾನ, ಮಧ್ಯಪಾನದ ದುಶ್ಚಟಗಳಿಂದ ಮುಕ್ತರಾಗಿ ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳುವಲ್ಲಿ ಗಮನ ಹರಿಸುವುದರ ಜೊತೆಗೆ ಗುರಿ ಸಾಧನೆಯತ್ತ ಮುನ್ನುಗ್ಗಬೇಕು. ಆ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ನೀಡಬೇಕು. ಅಂದಾಗ ನಿಮ್ಮ ಮಕ್ಕಳು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಹಾಗೂ ಹರಪನಹಳ್ಳಿಯ ಟಿ.ಎಂ.ಚಂದ್ರಶೇಖರಯ್ಯ ಇವರು ತಮ್ಮ ಸರಳ ಜೀವನವನ್ನು ಅನುಭವಿಸಿ ಈ ನಾಡಿನ ಶಿಕ್ಷಣಕ್ಕೆ ಒತ್ತು ಕೊಡುವ ದೃಷ್ಟಿಯಿಂದ ಸುಮಾರು 85 ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾದ ಕೊಡುಗೆ ನೀಡಿರುವುದನ್ನು ಪರಿಗಣಿಸಿದ ಕರ್ನಾಟಕ ಸರ್ಕಾರ ನವೆಂಬರ್.1 ರಂದು ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು ಸಂತಸದ ಸಂಗತಿ ಎಂದರು.
ಈ ವೇಳೆ ಅಥಿತಿಗಳಾದ ತಾಲೂಕು ಆರೋಗ್ಯ ಇಲಾಖೆ ವೈಧ್ಯಾಧಿಕಾರಿ ಡಾ.ಲಕ್ಷ್ಮಣ್ಣ ಪೂಜಾರ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ಅಜ್ಞಾನವನ್ನು ಒಪ್ಪಿಕೊಂಡು ಸುಜ್ಷಾನದ ಅರಿವು ಎಲ್ಲರಲ್ಲೂ ಮೂಡಬೇಕು. ನೂತನ ವಿದ್ಯಾರ್ಥಿಗಳು ತಮ್ಮ ಸವಾಲನ್ನು ಸ್ವೀಕರಿಸಿ ಗುರಿ ಸಾಧನೆ ಮಾಡಲು ಮೂಲಕ ತಂದೆ ತಾಯಿಯ ಬಯಕೆಗಳನ್ನು ತೀರಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಬೇಕು ಎಂದರು.ಈ ಸಂಸ್ಥೆಯ ಕಾರ್ಯದರ್ಶಿ ಡಾ.ಸಿದ್ದಲಿಂಗಯ್ಯ ಇನಾಮದಾರ ಮಾತನಾಡಿ, ಈ ಕಾಲೇಜಿನ ಶೈಕ್ಷಣಿಕ ಗುಣಮಟ್ಟದ, ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳು ಹಾಗೂ ವಸತಿ ಗೃಹಗಳಲ್ಲಿನ ಸೌಲಭ್ಯಗಳು, ಮತ್ತು ಇಲ್ಲಿನ ಕ್ರೀಡಾ ಸೌಲಭ್ಯಗಳ ಕುರಿತು ಧ್ಯೇಯೋದ್ದೇಶಗಳನ್ನು ವಿವರಿಸಿದರು.ಈ ವೇಳೆ ಕಾಲೇಜಿನ ಸಿಬ್ಬಂದಿಗಳು ಹಾಗೂ ದ್ವೀತಿಯ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು 2024-25ನೇ ಸಾಲಿನ 1ನೇ ವೃತ್ರಿಪರ ಬಿಎಎಂಎಸ್ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.ಸಂಸ್ಥೆಯ ಉಪಾಧ್ಯಕ್ಷೆ ವಿನೋಧಾದೇವಿ ಇನಾಮದಾರ, ಪ್ರಾಚಾರ್ಯ ಡಾ.ಎಸ್.ಆರ್.ಜಾಹಗೀರದಾರ, ಉಪ ಪ್ರಾಚಾರ್ಯ ಡಾ.ಕಾಮರಾಜ.ಎನ್, ಅನ್ವರ್ ಗಡಾದ, ಹಾಗೂ ಕಾಲೇಜಿನ ಎಲ್ಲ ವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿ, ಪ್ರಥಮ ವರ್ಷದ ವಿದ್ಯಾರ್ಥಿಗಳು ಮತ್ತು ಪಾಲಕರು ಪಾಲ್ಗೊಂಡಿದ್ದರು.