ಹಿರಿಯ ವಕೀಲರಿಂದ ಕಿರಿಯ ವಕೀಲರು ವೃತ್ತಿ ಬಗ್ಗೆ ಕಲಿಯಲಿ: ಬಿಸೇರೊಟ್ಟಿ
ರಾಯಬಾಗ 04: ಹಿರಿಯ ವಕೀಲರಿಂದ ಕಿರಿಯ ವಕೀಲರು ವೃತ್ತಿ ಬಗ್ಗೆ ಸರಿಯಾಗಿ ಕಲಿಯಬೇಕು. ನಿತ್ಯ ನ್ಯಾಯಾಲಯದಲ್ಲಿ ಇದ್ದು ಹಿರಿಯ ವಕೀಲರು ಮಾಡುವ ವಾದಗಳನ್ನು ಆಲಿಸಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಸಲಹೆ ನೀಡಿದರು.ಬುಧವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಿರಿಯ ವಕೀಲರು ಧೈರ್ಯದಿಂದ, ಪ್ರಾಮಾಣಿಕ ಪ್ರಯತ್ನ, ಶ್ರದ್ಧೆಯಿಂದ, ನಿತ್ಯ ಅಧ್ಯಯನದಿಂದ ವೃತ್ತಿಯನ್ನು ಕೈಗೊಂಡರೆ ಯಶಸ್ಸು ದೊರೆಯುತ್ತದೆ. ವಕೀಲ ವೃತ್ತಿಯಲ್ಲಿ ಸಾಕಷ್ಟು ಅವಕಾಶಗಳಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು. ಪಕ್ಷಗಾರರಿಗೆ ಅನ್ಯಾಯ ಆಗದಂತೆ ನೋಡಿಕೊಂಡು ಸರಿಯಾದ ನ್ಯಾಯ ಒದಗಿಸಬೇಕೆಂದು ತಿಳಿಸಿದರು.ಹಿರಿಯ ವಕೀಲರಾದ ಎಲ್.ಬಿ.ಚೌಗುಲೆ ಮಾತನಾಡಿ, ವಕೀಲರು ನಿತ್ಯ ಅಧ್ಯಯನದಲ್ಲಿ ನಿರತರಾಗಬೇಕು, ತಮ್ಮ ಪ್ರಕರಣದ ಬಗ್ಗೆ ಆಳವಾದ ಅಧ್ಯಯನ ಮಾಡಿದಾಗ, ಹೊಸ ಹೊಸ ವಿಷಯ ತಿಳಿಯುತ್ತದೆ. ವಕೀಲರಿಗೆ ಪಕ್ಷಗಾರರೆ ದೇವರು, ಅವರೊಂದಿಗೆ ಗೌರವದೊಂದಿಗೆ ನಡೆದುಕೊಳ್ಳಬೇಕು. ಅವರೊಂದಿಗೆ ಅನುಚಿತವಾದ ಎಂದಿಗೂ ವರ್ತಿಸಬಾರದ ಎಂದರು.ವಕೀಲರಾದ ಆರ್.ಎಚ್.ಗೊಂಡೆ, ಟಿ.ಕೆ.ಶಿಂಧೆ, ಎಸ್.ಬಿ.ಪಾಟೀಲ, ಎಸ್.ಬಿ.ರೆಂಟೆ, ಡಿ.ಎಚ್.ಯಲ್ಲಟ್ಚಿ ಮಾತನಾಡಿದರು. ಪ್ರಧಾನ ದಿವಾಣಿ ನ್ಯಾಯಾಧೀಶೆ ಪ್ರಿಯಾ ಭಟ್ಟಡ, ಸ.ಸ.ಅಭಿಯೋಜಕರಾದ ಮಹಾವೀರ ಗಂಡವ್ವಗೋಳ, ಹನುಮಂತ ಅಚಮಟ್ಟಿ, ವಕೀಲರ ಸಂಘದ ಅಧ್ಯಕ್ಷ ಪಿ.ಎಮ್.ದರೂರ, ಕಾರ್ಯದರ್ಶಿ ಎಸ್.ಬಿ.ಬಿರಾದಾರಪಾಟೀಲ, ಸಹ ಕಾರ್ಯದರ್ಶಿ ಬಿ.ಕೆ.ಶಿಂಗಾಡೆ, ಖಜಾಂಚಿ ಯು.ಎನ್. ಉಮ್ರಾಣಿ, ವಕೀಲರಾದ ಎ.ಬಿ.ಮಂಗಸೂಳೆ, ಆರ್.ಎಸ್.ಶಿರಗಾಂವೆ, ಎಮ್.ಕೆ.ಖೊಂಬಾರೆ, ಪಿ.ಎಮ್.ಪಾಟೀಲ, ವಿ.ಎ.ಮೋರೆ, ಜಿ.ಎಸ್.ಪವಾರ, ಎಸ್.ಬಿ.ಪಾಟೀಲ, ಎಮ್.ಎಮ್.ಚಿಂಚಲಿಕರ, ಎಮ್.ಪಿ.ತೇಲಿ, ಎಮ್.ಎಮ್.ಪಾಟೀಲ, ಬಿ.ಬಿ.ಈಟಿ, ಆರ್.ಎ.ಗೆನ್ನೆನ್ನವರ, ಎ.ಬಿ.ನಿಡವಣಿ, ಎನ್.ಎಸ್.ಒಡೆಯರ, ಎಲ್.ಕೆ.ಖೋತ, ಆರಿ್ಬ.ಕೊರವಿ, ಎಸ್.ಸಿ. ದೀಕ್ಷಿತ, ಎಸ್.ವಿ.ಸಂಗೋಟೆ, ಎಲ್.ಎಚ್.ನಾಗರಮುನ್ನೋಳಿ ಸೇರಿ ಹಿರಿಯ ಮತ್ತು ಕಿರಿಯ ವಕೀಲರು ಇದ್ದರು.
ಫೋಟೊ: 04 ರಾಯಬಾಗ 1ಫೋಟೊ ಶೀರ್ಷಿಕೆ: ರಾಯಬಾಗ: ಪಟ್ಟಣದ ವಕೀಲರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆಯಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಮಾತನಾಡಿದರು. ಪ್ರಧಾನ ದಿವಾಣಿ ನ್ಯಾಯಾಧೀಶೆ ಪ್ರಿಯಾ ಭಟ್ಟಡ, ಮಹಾವೀರ ಗಂಡವ್ವಗೋಳ, ಹನುಮಂತ ಅಚಮಟ್ಟಿ, ಪಿ.ಎಮ್.ದರೂರ ಇದ್ದರು.