ಹೂವಿನಹಡಗಲಿ 04; ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮತ್ತು ಮೈಸೂರು ಸ್ಕೂಲ್ ಆಫ್ ಆರ್ಕಿಟೆಕ್ಟರ್, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ "ವಿಶ್ವ ಪರಂಪರೆ ಸಪ್ತಾಹದ" ಪ್ರಯುಕ್ತ ವಿಶ್ವ ಪರಂಪರೆ ತಾಣಗಳ ಬಗ್ಗೆನ. 22, ಮತ್ತು 23 ರಂದು ರಾಜ್ಯ ಮಟ್ಟದ ಛಾಯಾಗ್ರಹಣ ಸ್ಪರ್ಧೆ ಮೈಸೂರಿನಲ್ಲಿ ನಡೆಯಿತು.
ಈ ಸ್ಪರ್ಧೆಯಲ್ಲಿ ಹಡಗಲಿ ತಾಲೂಕಿನ ವಿಕೆಕೆ ಕೆಪಿಎಸ್ ಪ್ರೌಢಶಾಲಾ ವಿಭಾಗ ಹಿರೇಹಡಗಲಿಯ ಕನ್ನಡ ಶಿಕ್ಷಕ, ಪಕ್ಷಿ ತಜ್ಞ ಸೋಮೇಶಪ್ಪ ಸಿ ಎನ್ ಇವರು ತೆಗೆದ ಹಂಪಿಯ ವಿಜಯವಿಠಲ ದೇವಾಲಯದ ಸಂಗೀತದ ಸ್ವರಗಳನ್ನು ಹೊರಡಿಸುವ ಕಲ್ಲಿನ ಕಂಬದ ನಯನ ಮನೋಹರವಾದ ಛಾಯಾಚಿತ್ರ ಪ್ರಥಮ ಸ್ಥಾನವನ್ನು ಪಡೆದಿದೆ ಎಂದು ಶಿಕ್ಷಕ ಸೋಮೇಶಪ್ಪ ತಿಳಿಸಿದ್ದಾರೆ.