ಅಂಚೆ ಇಲಾಖೆಯಲ್ಲಿ ಬದಲಾವಣೆಯ ಪರ್ವ ಆರಂಭ: ಹಳ್ಳಿ

ಲೋಕದರ್ಶನ ವರದಿ

ಕೊಪ್ಪಳ 06: ಅನಾದಿ ಕಾಲದಿಂದಲೂ ಭಾರತೀಯ ಅಂಚೆ ಇಲಾಖೆ ಎಂದರೆ ಕೇವಲ ಪತ್ರ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿತ್ತು. ಇತ್ತೀಚೆಗೆ ಅಂಚೆ ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳು ಲಭ್ಯವಿವೆ. ಬ್ಯಾಂಕಿಂಗ್ ಸೇವೆ, ವಿಮಾ ಸೇವೆ, ಇಂಡಿಯಾ ಪೋಸ್ಟ್ ಪೆಮೇಂಟ್ ಬ್ಯಾಂಕ್, ಪಾಸ್ಪೋಟರ್್ ಸೇವೆ, ಆಧಾರ ನೋಂದಣಿ ಸೇವೆ, ರಾಜ್ಯ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಅನೇಕ ಸರಕುಗಳ ಮಾರಾಟ ಹೀಗೆ ಹತ್ತು ಹಲವಾರು ಸೇವೆಗಳನ್ನು ಸಾರ್ವಜನಿಕರಿಗೆ ನೀಡುತ್ತಿದೆ. ಆಧುನಿಕ ತಂತ್ರಜ್ಞಾನಗಳಾದ ಆರ್.ಐ.ಸಿ.ಟಿ., ದರ್ಪಣ ಹೆಸರಿನ ಡಿವೈಸ್ಗಳನ್ನು ಉಪಯೋಗಿಸಿ ನಗರ ಪ್ರದೇಶಗಳಲ್ಲಿ ದೊರೆಯುವ ಎಲ್ಲಾ ಅಂಚೆ ಸೌಲಭ್ಯಗಳು ಇನ್ನು ಮುಂದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಲಭ್ಯವಾಗಲಿವೆ. ಮಹಮ್ಮದನಗರದ ಗ್ರಾಮದ ಎಲ್ಲಾ ಕುಟುಂಬದವರು ಅಂಚೆ ಜೀವ ವಿಮೆ ಹೊಂದುವುದರ ಮೂಲಕ ಉಳಿತಾಯಕ್ಕೆ ಮತ್ತು ಭವಿಷ್ಯದ ಚಿಂತನೆಯ ಬಗ್ಗೆ ಬೇರೆ ಗ್ರಾಮಗಳಿಗೆ ಮಾದರಿಯಾಗಿದ್ದಾರೆ ಎಂದು ಕೊಪ್ಪಳ ಬಜಾರ ಉಪ ಅಂಚೆ ಕಛೇರಿಯ ಉಪ ಅಂಚೆ ಪಾಲಕರಾದ ಜಿ.ಎನ್.ಹಳ್ಳಿ ಹೇಳಿದರು. 

ಅವರು ಕೊಪ್ಪಳ ತಾಲೂಕಿನ  ಮಹಮ್ಮದನಗರದಲ್ಲಿ ಹಮ್ಮಿಕೊಂಡು ಸಂಪೂರ್ಣ ಅಂಚೆ ಜೀವ ವಿಮಾ ಗ್ರಾಮದ ಘೋಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಹುಲಿಗಿಯ ಉಪ ಅಂಚೆ ಪಾಲಕರಾದ ಹೇಮಾವತಿ ಸಾವಂತ, ಅಂಚೆ ನಿರೀಕ್ಷಕರಾದ ಡಿ.ಎಂ.ಶರಣಪ್ಪ, ಅಂಚೆ ಮೇಲ್ವಿಚಾರಕರಾದ ಸೋಮಣ್ಣ, ಕೆ.ಬಿ.ಜೋಶಿ, ಗ್ರಾಮದ ಹಿರಿಯರಾದ ರೂಪ್ಲಾನಾಯಕ, ಕಾಶಯ್ಯಸ್ವಾಮಿ ಗವಿಮಠ, ಸುರೇಶಬಾಬು, ಶಿವಕುಮಾರ ಮಾಣಿಕೊಪ್ಪ, ಸೋಮಪ್ಪ ಗಡ್ಡಿ, ಮರಿಯಾಬಿ, ವೆಂಕಟರತ್ನಂ, ಸಿದ್ಧಮ್ಮ ಬಹದ್ದೂರಬಂಡಿ, ನಾಗರಾಜ, ಹೊನ್ನಪ್ಪಗೌಡ, ಹನುಮರೆಡ್ಡಿ ಬಿಸರಳ್ಳಿ, ಅಮರೇಶ ಬನ್ನಿಕೊಪ್ಪ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಂಪೂರ್ಣ ಅಂಚೆ ಜೀವ ವಿಮಾ ಗ್ರಾಮಕ್ಕಾಗಿ ಶ್ರಮಿಸಿದ ಯಮನೂರಪ್ಪ, ಜಾಪರ್ ಇವರನ್ನು ಸನ್ಮಾನಿಸಲಾಯಿತು. ಬಸವರಾಜ ಜಿ.ಬಿ. ನಿರೂಪಿಸಿದರು. ಶಾಂತಾ ಸಂಗಡಿಗರು ಪ್ರಾಥರ್ಿಸಿದರು. ಶಿವಾನಂದಪ್ಪ ಪಂಥರ ವಂದಿಸಿದರು.