ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಿ: ಡಾ. ಪ್ರಭುಗೌಡ

Teach culture along with education: Dr. Prabhugowda

ದೇವರಹಿಪ್ಪರಗಿ 12: ಮಕ್ಕಳಿಗೆ ಕೇವಲ ಅಕ್ಷರ ಕಲಿಸಿದರೆ ಸಾಲದು, ಸಂಸ್ಕೃತಿ, ಸಂಸ್ಕಾರ ಬೆಳೆಸಿದಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪಗೊಂಡು ಸಮಾಜಮುಖಿಯಾಗಿ ಬದುಕಲು ಸಾಧ್ಯ ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಪ್ರಭುಗೌಡ (ಲಿಂಗದಳ್ಳಿ) ಚಬನೂರ ಹೇಳಿದರು.

ತಾಲೂಕಿನ ಯಾಳವಾರ ಗ್ರಾಮದ ಸಂಸ್ಕಾರಧಾಮ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 13ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಂಸ್ಕಾರ ಉತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು,ಮಕ್ಕಳಿಗೆ ಅಕ್ಷರದೊಂದಿಗೆ ಹುಟ್ಟಿನಿಂದಲೇ ಸಂಸ್ಕಾರವನ್ನು ಕಲಿಸಿದರೆ ಮುಂದೆ ಅವರು ದೊಡ್ಡವರಾಗಿ ದೇಶಕ್ಕೆ ಉತ್ತಮ ಪ್ರಜೆಗಳಾಗುತ್ತಾರೆ. ಈ ನಿಟ್ಟಿನಲ್ಲಿ ಸಂಸ್ಕಾರ ಧಾಮ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯ,ಆಧುನಿಕ ಭರಾಟೆಯಲ್ಲಿ ಮಕ್ಕಳು ದಾರಿ ತಪ್ಪುತ್ತಿದ್ದಾರೆ, ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ಕಲಿಸುವುದು ಪಾಲಕರ ಜವಾಬ್ದಾರಿಯಾಗಿದೆ. ಇಂದಿನ ಜಗತ್ತಿನಲ್ಲಿ ದುರಾಚಾರಗಳು ಹೆಚ್ಚಾಗಲು ಸಂಸ್ಕಾರ ಇಲ್ಲದ ವಿದ್ಯಾವಂತರು ಕಾರಣ ಎನ್ನಲಾಗುತ್ತಿದೆ, ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಸಂಸ್ಕಾರ ಕಲಿಸುವ ಜವಾಬ್ದಾರಿ ಪೋಷಕರ ಹಾಗೂ ಶಿಕ್ಷಕರ ಮೇಲಿದೆ ಎಂದರು.ವಿಶೇಷ ಉಪನ್ಯಾಸಕರಾಗಿ ಸೋಮನಗೌಡ ಥಬ್ಬಣ್ಣವರ ಹಾಗೂ ಗುರುನಾಥ ಮಾಸ್ತರ ಮುರಡಿ ಅವರು ಮಾತನಾಡಿ ಮಕ್ಕಳಿಗೆ ಸಂಸ್ಕಾರ ಇಲ್ಲದಿದ್ದರೆ ಪಡೆದ ಶಿಕ್ಷಣಕ್ಕೆ ಬೆಲೆ ಇಲ್ಲ ಎಂದು ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪಾಲಕರು ಹಾಗೂ ಶಿಕ್ಷಕರ ಪಾತ್ರದ ಕುರಿತು ಉಪನ್ಯಾಸ ನೀಡಿ, ಈ ನಿಟ್ಟಿನಲ್ಲಿ ಸಂಸ್ಕಾರ ಧಾಮ ಶಾಲೆ ಒಳ್ಳೆಯ ಶಿಕ್ಷಣ ನೀಡುತ್ತಿದೆ ಎಂದು ಶ್ಲಾಘಿಸಿದರು .ಸಂಸ್ಥೆಯ ಅಧ್ಯಕ್ಷರಾದ ಎಸ್‌.ಕೆ.ಪಟ್ಟೇದ ಅವರು ಸಂಸ್ಥೆ ನಡೆದ ಬಂದ ದಾರಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಗಣ್ಯರನ್ನು ಸ್ವಾಗತಿಸಿದರು.ಕಾರ್ಯಕ್ರಮದ ಸಾನ್ನಿಧ್ಯವನ್ನು ಯಾಳವಾರ ಹಿರೇಮಠದ ವೇ.ಮೂ ಶ್ರೀ ಬಸಯ್ಯ ಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷರಾದ ದೇವೇಂದ್ರ ಬಡಿಗೇರ ವಹಿಸಿದ್ದರು.ಸಂದರ್ಭದಲ್ಲಿ ಸಂಸ್ಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಯಮನಪ್ಪ ಬೂದಿಹಾಳ (ಶಿಕ್ಷಣ ಕ್ಷೇತ್ರ), ಸಂಗಮೇಶ ಕೆರೆಪ್ಪಗೋಳ (ಸಾಹಿತ್ಯ ಕ್ಷೇತ್ರ), ಮಲ್ಲಿಕಾರ್ಜುನ ಪಟ್ಟಣಶೆಟ್ಟಿ (ಪತ್ರಿಕಾರಂಗದ ಕ್ಷೇತ್ರ), ರಾಘವೇಂದ್ರ ಉಮ್ಮರಗಿ (ರಂಗಭೂಮಿ ಕ್ಷೇತ್ರ), ಕಾಶಿನಾಥ ಪೂಜಾರಿ (ಜಾನಪದ ಕ್ಷೇತ್ರ) ಹಾಗೂ ಗುರುನಾಥ ಮಾಸ್ತರ್ ಮುರುಡಿ (ಹಾಡಕಿ ಕ್ಷೇತ್ರ) ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಸಂಸ್ಕಾರ ಉತ್ಸವದಲ್ಲಿ ಮಕ್ಕಳ ಕಲರವ  ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಇದೇ ಸಂದರ್ಭದಲ್ಲಿ ಮುಖಂಡರುಗಳಾದ ರಾಜುಗೌಡ ನಾಡಗೌಡ್ರ, ಸಾಹೇಬಗೌಡ ದೊಡಮನಿ, ಸೋಮನಗೌಡ ಕೆಮಶೆಟ್ಟಿ, ಆರ್‌.ಎಸ್‌.ಪಾಟೀಲ, ಚನ್ನಪ್ಪಗೌಡ ಪಾಟೀಲ, ಸಾಹೇಬಗೌಡ ಉತ್ನಾಳ, ಬಿ.ಆರ್‌.ಪಾಟೀಲ, ವೆಂಕನಗೌಡ ಮೂಲಿಮನಿ, ಎಸ್‌.ಎಸ್‌.ಪಾಟೀಲ, ಹಣಮಂತ್ರಾಯಗೌಡ ಬಿರಾದಾರ, ಸಿದ್ದಣ್ಣ ಕೆರೆಪ್ಪಗೋಳ, ಶರಣು ಪೂಜಾರಿ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು, ಪಾಲಕರು,ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.