ಕಾರವಾರ 12: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸಾವಂತವಾಡ ಮಜಿರೆಯಲ್ಲಿ42.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಜಿಲ್ಲೆಯಲ್ಲಿ ದಾಖಲಾದ ಅತೀ ಉಷ್ಣಾಂಶ. ಈಚೆಗೆ ಘಾಡಸಾಯಿಯಲ್ಲಿ 41 ಡಿಗ್ರಿ ಸೆಲ್ಸಿಯಸ್ ಅತೀ ಹೆಚ್ಚು ಉಷ್ಣಾಂಶ ದಾಖಲಾಗಿತ್ತು. ಈ ದಾಖಲೆಯನ್ನು ಸಾವಂತವಾಡ ಬುಧುವಾರಮುರಿದಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೋಶ ಮಾಹಿತಿ ನೀಡಿದೆ.
ಮೆಟ್ರೋಲಾಜಿ ಇಲಾಖೆಯ ಮಾಹಿತಿ ಆಧರಸಿ ಜಿಲ್ಲೆಯಲ್ಲಿ ಅತೀ ಹೆಚ್ಚು ಉಷ್ಣಾಂಶ ದಾಖಲಾದ ಊರುಗಳ ಮಾಹಿತಿ ದಿನವೂ ಬಿಡುಗಡೆಯಾಗುತ್ತಿದೆ. ಅಧಿಕ ಉಷ್ಣಾಂಶ ಇನ್ನೂ ಐದು ದಿನ ಮುಂದುವರಿಯಲಿದೆ. ಬಿಸಿ ಗಾಳಿ ಸಹ ಇರಲಿದೆ. ಮಧ್ಯಾಹ್ನ 12 ರಿಂದ 3 ಗಂಟೆತನಕ ಬಿಸಿಲಿನಲ್ಲಿ ಹೆಚ್ಚು ಓಡಾಡದಂತೆ ಜನತೆಗೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಜಿಲ್ಲೆಯ ಇತರೆಡೆ ದಾಖಲಾದ ಉಷ್ಣಾಂಶ ಇಂತಿದೆ :ಮುಂಡಗೋಡ ಪಾಳ ಗ್ರಾಮದಲ್ಲಿ 40.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕಾರವಾರ ತಾಲೂಕಿನ ಘಾಡಸಾಯಿ ಗ್ರಾಮದಲ್ಲಿ 43.3 , ಕಿನ್ನರ ಗ್ರಾಮದಲ್ಲಿ 41.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.ಹಳಿಯಾಳ ಮುರ್ಕಾವಾಡ ಗ್ರಾಮದಲ್ಲಿ 39.2,ಸಂಬ್ರಾಣಿ ಗ್ರಾಮದಲ್ಲಿ 39 ಡಿಗ್ರಿ ಸೆಲ್ಸಿಯಸ್ , ದಾಂಡೇಲಿ 38.2 , ಮಿರ್ಜಾನ್ ದಲ್ಲಿ 40.7, ಉಂಬಳಮಣಿಯಲ್ಲಿ 38.3, ಭಟ್ಕಳದಲ್ಲಿ 38.3, ಅಂಕೋಲಾದಲ್ಲಿ40.5 , ಬೇಲೇಕೇರಿ, ಅವರ್ಸಾದಲ್ಲಿ ತಲಾ 40.2, ಅಂಕೋಲಾ ಒನ್ ನಲ್ಲಿ 39.5, ಬಳಲೆ ಯಲ್ಲಿ 39.2ಉಷ್ಣಾಂಶ ದಾಖಲಾಗಿದೆ. ಹಳ್ಳಿಗಳ ಜನರು ಸಹ ಬಿಸಿಲ ಬೇಗೆಯಿಂದ ತತ್ತರಿಸಿದರು.