ಗುಲಬರ್ಗಾ ವಿಶ್ವವಿದ್ಯಾಲಯ ಸ್ನಾತಕೋತ್ತರ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಪ್ರೊ. ಎಚ್‌.ಟಿ. ಪೋತೆ

Prof. H.T. Pote elected as President of Gulbarga University Postgraduate Teachers Association

ಗುಲಬರ್ಗಾ 12: ದಿ. 12.03.2025 ರಂದು ಗಣಿತ ಅಧ್ಯಯನ ವಿಭಾಗದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಸ್ನಾತಕೋತ್ತರ ಶಿಕ್ಷಕರ ಸಂಘದ ಸಾಮಾನ್ಯ ಸಭೆ ಜರುಗಿತು.  

ಸಭೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಸ್ನಾತಕೋತ್ತರ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ಪ್ರಾಧ್ಯಾಪಕರು ಹಾಗೂ ನಿರ್ದೇಶಕರಾದ ಪ್ರೊ. ಎಚ್‌.ಟಿ. ಪೋತೆಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅದೇ ರೀತಿ ಜೀವತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ. ಆನಂದ ನಾಯ್ಕ, ಕಾರ್ಯದರ್ಶಿಗಳಾಗಿ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಡಾ. ಹಣಮಂತ ಜಂಗೆಯವರು ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು.  

ಪ್ರೊ. ಚಂದ್ರಕಾಂತ ಕೆಳಮನಿ, ಡಾ. ದೇವಿದಾಸ ಮಾಲೆ, ಡಾ. ಅಂಬರೀಶ ಅಂಬಲಗಿ, ಪ್ರೊ. ಸುಲೋಚನಾ ಸಿ., ಪ್ರೊ. ಪರಮಜ್ಯೋತಿ ಅವರು ಕಾರ್ಯಕಾರಿ ಮಂಡಳಿ ಸದಸ್ಯರಾಗಿ ನೇಮಕಗೊಂಡರು. ಪ್ರೊ. ಲಕ್ಷ್ಮಣ ರಾಜನಾಳಕರ್ ಮತ್ತು ಪ್ರೊ. ಎನ್‌.ಬಿ. ನಡುವಿನಮನಿ ಅವರು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.