ಬೆಳಗಾವಿ, ಮಾ.12: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಯುವ ಸಾಹಿತ್ಯ ಸಾಂಸ್ಕೃತಿಕ ಸಂಘ, ಯರಗಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಜಾನಪದ ಕಲಾ ಉತ್ಸವ -2025ರ ಕಾರ್ಯಕ್ರಮ ಮಾರ್ಚ 9, ರಿಂದ 11 ರವರೆಗೆ ಸವದತ್ತಿ/ಯರಗಟ್ಟಿ, ತಾಲೂಕಿನ ಮಾಡಮಗೇರಿ ಗ್ರಾಮದಲ್ಲಿ ಜರುಗಿತು.
ಯುವ ಮುಖಂಡರಾದ ಸೋಮಪ್ಪಾ ಪೂಜೇರಿ ಮಾತನಾಡಿ ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಜನಪದ ಕಲೆ ಎಂಬುದು ಸರ್ವಕಾಲಕ್ಕೂ ಶ್ರೇಷ್ಠ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಪ್ರಶಸ್ತಿ ಪುರಸ್ಕ್ರತರು ಸಂಗಪ್ಪಾ ಚೂರಿ, ರುದ್ರ್ಪ ಮಾದರ, ಯಮನವ್ವ ಮಾದರ ಹಾಗೂ ಮಾಡಮಗೇರಿ ಗ್ರಾಮದ ಗುರು ಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಡಾ. ಬಾಬು ಜಗಜೀವನ ರಾಮ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ: