ವಿದ್ಯಾರ್ಥಿಗಳನ್ನು ಉತ್ತಮ ಸುಸಂಸ್ಕೃತರನ್ನಾಗಿ ರೂಪಿಸಬೇಕು: ಐಹೊಳೆ

Students should be made well cultured: Aihole

ರಾಯಬಾಗ 04: ಹೆಣ್ಣು ಮಕ್ಕಳು ಶಿಕ್ಷಣ ಪಡೆದರೆ ಕುಟುಂಬ ಮತ್ತು ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವೆಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು. 

ಬುಧವಾರ ಪಟ್ಟಣದ ಡಾ.ಬಾಬು ಜಗಜ್ಜೀವನ್‌ರಾಮ ಭವನದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಂಸ್ಕೃತಿಕ, ಕ್ರೀಡಾ, ಎನ್‌.ಎಸ್‌.ಎಸ್, ಸ್ಕೌಟ್ಸ್‌ ಮತ್ತು ಗೈಡ್ಸ್‌ ಹಾಗೂ ವಿವಿಧ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿರುತ್ತಿರುವುದು ಸಂತೋಷ ವಿಷಯ. ಉಪನ್ಯಾಸಕರು ಒಳ್ಳೆಯ ಬೋಧನೆ ಜೊತೆಗೆ ವಿದ್ಯಾರ್ಥಿಗಳನ್ನು ಉತ್ತಮ ಸುಸಂಸ್ಕೃತರನ್ನಾಗಿ ರೂಪಿಸಬೇಕೆಂದರು.  

ಪ್ರಾಚಾರ್ಯ ರಾಜಕುಮಾರ ಕಾಗೆ ಅಧ್ಯಕ್ಷತೆಯನ್ನು ವಹಿಸಿದ್ದರು. ಹಾರೂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಪ್ರಾಚಾರ್ಯ ಡಾ.ಎಲ್‌.ಬಿ.ಬನಶಂಕರಿ, ಡಾ.ವಿವೇಕಾನಂದ ಮಾನೆ, ಡಾ.ಶಂಕರ ರಾಠೋಡ, ಸಂತೋಷ ಸಮಾಜೆ, ಡಾ.ವಿಜಯಲಕ್ಷ್ಮಿ, ಡಾ.ಉತ್ತಮ ಕಾಂಬಳೆ, ಎಮ್‌.ಎಸ್‌.ಯಾದವಾಡೆ, ಡಾ.ಪ್ರಸಾದ ಆರ್‌.ಎ, ಅಜೀಜ ಸನದಿ, ಡಾ.ರವಿ  ಎಮ್‌.ವಿ, ಮನೋಜಕುಮಾರ ಕಾಂಬಳೆ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.