ಲೋಕದರ್ಶನ ವರದಿ
ಗದಗ 13: ಹಲವಾರು ವಿಶೇಷತೆಗಳಿಂದ ಕೂಡಿದ ಈ ದೇಹವನ್ನು ವ್ಯಸನಗಳಿಂದ ಹಾಳು ಮಾಡಿಕೊಳ್ಳದಿರಿ ಎಂದು ನರೇಗಲ್ ಹಿರೇಮಠದ ಪೂಜ್ಯಶ್ರೀ ಮಲ್ಲಿಕಾಜರ್ುನ ಶಿವಾಚಾರ್ಯ ಶ್ರೀಗಳು ಹೇಳಿದರು.
ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ಗದಗ ತಾಲ್ಲೂಕು, ಅಖಿಲ ಕನರ್ಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜರುಗಿದ 1392 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿ, ಗೌರವಿತ ಜೀವನ ಇಲ್ಲದಿದ್ದರೆ ವ್ಯಸನಗಳು ಹೆಚ್ಚಾಗುತ್ತವೆ. ವ್ಯಸನಿಗಳಿಗೆ ಸಮಾಜ ಗೌರವ ನೀಡುವದಿಲ್ಲ ಹಿಂದೆ ನೀವುಗಳು ಹೇಗೆ ಇದ್ದಿರಿ ಎಂಬುದು ಮುಖ್ಯವಲ್ಲ ಇಂದಿನಿಂದ ನೀವು ಹೇಗೆ ಬಾಳುತ್ತಿರಿ ಎನ್ನವುದು ಮುಖ್ಯವಾಗಿದೆ. ಮದ್ಯವಜರ್ಿನ ಶಿಬಿರಗಳ ಮೂಲಕ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿರುವ ಧರ್ಮಸ್ಥಳ ಧಮರ್ಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಸಮಾಜ ಸೇವೆಯಿಂದ ಕಲಿಯುವುದು ಸಾಕಷ್ಟಿದೆ ಎಂದು ಹೇಳಿದರು.
ಅಖಿಲ ಕನರ್ಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಮಸ್ವಾಮಿ ವಿ. ಅವರು ಮಾತನಾಡಿ, ಧರ್ಮಸ್ದಳದ ಧಮರ್ಾಧಿಕಾರಿ ವಿರೇಂಧ್ರ ಹೆಗ್ಗಡೆ ಅವರು ಮದ್ಯವರ್ಜನ ಶಿಬಿರ ಮೂಲಕ ಸದೃಡ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರಿಗೆ ಸ್ವಾವಲಂಬಿಯಾಗಿ ಜೀವನ ನಡೆಸಲು 8 ಸಾವಿರ ಕೋಟಿ ರೂಗಳನ್ನು ಭದ್ರತೆ ಇಲ್ಲದೆ ನೀಡಿದ್ದಾರೆ. 25 ಕೋಟಿ ರೂಗಳನ್ನು ನೆರೆ ಸಂತೃಸ್ತರಿಗೆ ನೀಡಿದ್ದಾರೆ. ಅಲ್ಲದೇ, ನಾಡಿನಾದ್ಯಂತ ಕೆರೆಗಳನ್ನು ಹೂಳೆತ್ತುವುದು.ದೇವಸ್ಥಾನಗಳ ಜೀಣರ್ೋದ್ದಾರ ಸೇರಿದಂತೆ ಹಲವಾರು ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ. ಈಗಾಗಲೇ 1391 ಮದ್ಯವರ್ಜನ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಲಕ್ಷಾಂತರ ವ್ಯಸನಿಗಳಿಗೆ ಹೊಸ ಬದುಕನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಹೈದ್ರಾಬಾದ- ಕರ್ನಾಟಕ ಪ್ರಾದೇಶಿಕ ವಿಭಾಗದ ನಿದರ್ೇಶಕ ಪುರುಷೋತ್ತಮ ಪಿ.ಕೆ. ಅವರು ಮಾತನಾಡಿ, ಕುಡಿತವನ್ನು ಬಿಡಲಿಕ್ಕೆ ಅವಕಾಶಗಳು ಕಡಿಮೆ ಆದರೆ, ಈ ಶಿಬಿರದ ಮೂಲಕ ಸೆರೆಮನೆಯಿಂದ ಗುರುಮನೆಗೆ ತೆರಳುತ್ತಿರುವ ನಿಮಗೆ ಹೊರಗಿನ ಜಗತ್ತು ಬದಲಾಗಿಲ್ಲ ಅದೇ ಮನೆ, ಅದೇ ಕುಟುಂಬ, ಅದೇ ಮಿತ್ರರು ನಿಮಗೆ ಸಿಗುತ್ತಾರೆ ಆದರೆ ಬದಲಾಗಿರುವುದು ನೀವು ಇನ್ನುಮುಂದೆ ಸಮಾಜ ನಿಮ್ಮ ಗೌರವಿಸುವದನ್ನು ನೀವು ಕಾಣುಲಿದ್ದಿರಿ ಎಂದು ಹೇಳಿದ ಅವರು ಸೆ. 14 ರಂದು ಧರ್ಮಸ್ಥಳದ ಧಮರ್ಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ಪುನಜರ್ಿವನ ಪಡೆದ ನವಜೀವನ ಜ್ಯೋತಿ ಸದಸ್ಯರುಗಳನ್ನು ಭೇಟಿ ಆಗಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಬಿ.ಅಸೂಟಿ, ಉದ್ಯಮಿಗಳಾದ ಈಶ್ವರಸಾ ಮೆಹರವಾಡೆ, ಚಂದ್ರು ಬಾಳಿಹಳ್ಳಿಮಠ,ನಾಗರಾಜ ಮೆಣಸಗಿ, ಜಯದೇವ ಭಟ್, ಕೃಷ್ಣ ಹಡಪದ, ಎಂ.ಎಸ್.ಪರ್ವತಗೌಡ್ರ, ಬಸವರಾಜ ಹಡಪದ, ರಮೇಶ ಕಲಬುಗರ್ಿ, ಯೋಜನಾಧಿಕಾರಿ ಸುಕೇಶ ಎ.ಎಸ್., ಸ್ವಪ್ನಾ ರಾಯಕರ, ಜಯಶ್ರೀ ಉಗಲಾಟದಮ ಶಿವಲೀಲಾ ಅಕ್ಕಿ, ಉಮಾ ರಾಮನಕೊಪ್ಪ,ಡಾ. ಜಯಲಕ್ಷ್ಮೀ, ಅರುಣಕುಮಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಈ ಮದ್ಯವರ್ಜನ ಶಿಬಿರದಲ್ಲಿ 83 ಶಿಬಿರಾಥರ್ಿಗಳು ಸದುಪಯೋಗವನ್ನು ಪಡೆದುಕೊಂಡರು. ಜಿಲ್ಲಾ ನಿದರ್ೇಶಕ ಶಿವಾನಂದ ಆಚಾರ್ಯ ಅವರು ಸ್ವಾಗತಿಸಿದರು. ಯೋಜನಾಧಿಕಾರಿ ನಾಗೇಶ ವೈ.ಎ ಅವರು ಕಾಶರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕ ಚಂದ್ರಶೇಖರ ಅವರು ವಂದಿಸಿದರು.