ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ: 20 ಸಾವಿರ ಕೋಟಿ ರೂ.ಕ್ರಿಯಾಯೋಜನೆ: ಡಿಸಿ

 

ಬಳ್ಳಾರಿ04: ಜಿಲ್ಲೆಯಲ್ಲಿನ ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾಡಳಿತ 20 ಸಾವಿರ ಕೋಟಿ ರೂ.ಕ್ರಿಯಾಯೋಜನೆಯನ್ನು ರೂಪಿಸಿ ಕೆಎಂಇಆರ್ಸಿಗೆ ಸಲ್ಲಿಸುತ್ತಿದ್ದು, ಜನೋಪಯೋಗಿ ಯೋಜನೆಗಳಿರುವ ಈ ಕ್ರಿಯಾಯೋಜನೆಗೆ ಫೆಮಿ ಯಾವುದೇ ರೀತಿಯ ಆಕ್ಷೇಪಣೆ ಮಾಡದೇ ಬೆಂಬಲಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲೆಯ ಶಾಸಕರು ಮತ್ತು ಫೆಮಿ(ಗಣಿ ಕಂಪನಿಗಳ ಫೆಡರೇಶನ್) ಪ್ರತಿನಿಧಿಗಳೊಂದಿಗೆ ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಅಂತಿಮ ಕ್ರಿಯಾಯೋಜನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕುಡಿಯುವ ನೀರು ಸರಬರಾಜುಗೆ 4253 ಕೋಟಿ ರೂ., ಆರೋಗ್ಯ ಕ್ಷೇತ್ರಕ್ಕೆ 1782 ಕೋಟಿ ರೂ, ಶಿಕ್ಷಣಕ್ಕೆ 2927 ಕೋಟಿ ರೂ., ಕೌಶಲ್ಯ ಅಭಿವೃದ್ಧಿಗೆ 806 ಕೋಟಿ ರೂ., ಪರಿಸರ-1534,ಕೃಷಿ ಸಂಬಂಧಿತ 2317 ಕೋಟಿ ರೂ. ಮೂಲಸೌಕರ್ಯ 3538 ಕೋಟಿ ರೂ. ಸೇರಿದಂತೆ ವಿವಿಧ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗಾಗಿ 20 ಸಾವಿರ ಕೋಟಿ ರೂ.ಗಳ ಕ್ರಿಯಾಯೋಜನೆಯನ್ನು ಜಿಲ್ಲಾಡಳಿತ ರೂಪಿಸಿದೆ ಎಂದು ವಿವರಿಸಿದ ಅವರು, ವಿವಿಧ ಕ್ಷೇತ್ರಗಳಿಗೆ ನೀಡಲಾಗಿರುವ ಅಂಕಿ-ಅಂಶಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಯಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ 20 ಸಾವಿರ ಕೋಟಿ ರೂ.ಕ್ರಿಯಾಯೋಜನೆ ರೂಪಿಸಿ ಕೆಎಂಇಆರ್ಸಿಗೆ ಸಲ್ಲಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಆ.4ರಂದು ಬೆಳಗ್ಗೆ 10ಕ್ಕೆ ಕೆಎಂಇಆರ್ಸಿ ಸಭೆ ನಡೆಯಲಿದ್ದು,ಫೆಮಿ ಪ್ರತಿನಿಧಿಗಳು ಮತ್ತು ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಜಿಲ್ಲೆಯ ಎಲ್ಲ ಬೇಡಿಕೆಗಳನ್ನು ಈ ಕ್ರಿಯಾಯೋಜನೆಯಲ್ಲಿ ಸೇರಿಸಲಾಗಿದ್ದು,ಇದನ್ನು ಸರಕಾರದ ಮುಂದಿಡಲಾಗುವುದು. ಸರಕಾರ ಜನರಿಗೆ ಅಗತ್ಯ ಮತ್ತು ಅವಶ್ಯವಾಗಿರುವಂತ ಪ್ರಮುಖವಾದವುಗಳ ಕ್ರಿಯಾಯೋಜನೆ ಆದ್ಯತೆ ಮೇಲೆ ಆಯ್ಕೆ ಮಾಡಿಕೊಳ್ಳಲಿದೆ ಎಂದರು.

*ಫೆಮಿ ಆಕ್ಷೇಪಣೆ ಸಲ್ಲಿಸದಿರಲಿ: ಜಿಲ್ಲಾಡಳಿತ ರೂಪಿಸುವ ಕ್ರಿಯಾಯೋಜನೆ ಜಾರಿಗೆ ಬಂದರೇ ಜನರು ನೆಮ್ಮದಿಯಿಂದ ಬದುಕು ಸಾಗಿಸಲು ಸಾಧ್ಯ ಎಂಬುದನ್ನು ಸಭೆಯಲ್ಲಿ ಹಾಜರಿದ್ದ ಫೆಮಿ ಪ್ರತಿನಿಧಿಗಳಿಗೆ ವಿವಿಧ ಉದಾರಣೆಗಳನ್ನು ನೀಡುವುದರ ಮೂಲಕ ವಿವರಿಸಿದ ಡಿಸಿ ರಾಮ್ ಪ್ರಸಾತ್ ಮನೋಹರ್ ಅವರು, ಜನರು ನೆಮ್ಮದಿಯಿಂದ ಜೀವನ ಸಾಗಿಸದಿದ್ದರೇ ಜನರು ಬೀದಿಗಿಳಿದು ಹೋರಾಟ ಮಾಡಲಿದ್ದಾರೆ. ಅಂತಹ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ತಮ್ಮ ಗಣಿ ಕಂಪನಿಗಳು ನಡೆಸುವುದು ಕಷ್ಟಕರ. ತಾವು ನಮ್ಮೊಂದಿಗೆ ಸಕರಾತ್ಮಕವಾಗಿ ಸ್ಪಂದಿಸಿ ಮತ್ತು ಅನಗತ್ಯ ಆಕ್ಷೇಪಣೆಯನ್ನು ಮಾಡದಿರಿ ಎಂದರು.

ಗಣಿಕಂಪನಿಗಳು ನೀಡುವ ಸೆಸ್ನ ಹಣವನ್ನು ಅತ್ಯಂತ ಸಮರ್ಪಕವಾಗಿ ಯಾವ ಉದ್ದೇಶಕ್ಕೆ ಬಳಸಬೇಕೋ ಅದೇ ಉದ್ದೇಶಕ್ಕೆ ಬಳಸಲಾಗುವುದು; ಇದರಲ್ಲಿ ಯಾವುದೇ ರೀತಿಯ ಸಂದೇಹ ಬೇಡ ಎಂದರು. ಜಿಲ್ಲೆಯ ಶಾಸಕರು ಮತ್ತು ಫೆಮಿ ಪ್ರತಿನಿಧಿಗಳು ಈ ಕ್ರಿಯಾಯೋಜನೆಗೆ ಬೇಗ ಗ್ರೀನ್ಸಿಗ್ನಲ್ ಕೊಡಿಸಿ ಎಂದು ಅವರು ಮನವಿ ಮಾಡಿದರು.

ಜಿಲ್ಲಾ ಖನಿಜ ನಿಧಿ ಹಣವನ್ನು ಶಿಕ್ಷಣಕ್ಕೆ ಬಳಸುತ್ತಿರುವ ಪರಿಣಾಮ ನಮ್ಮ ಜಿಲ್ಲೆ ರಾಜ್ಯದಲ್ಲಿ ಟಾಪ್ 10ರೊಳಗೆ ಇದೆ ಎಂದು ತಿಳಿಸಿದ ಡಿಸಿ ರಾಮ್ ಪ್ರಸಾತ್ ಅವರು, ಸೋಶಿಯೋ-ಎಕಾನಮಿಕ್ ಪ್ರೊಜೆಕ್ಟ್ಗಳಿಗೆ ಆಕ್ಷೇಪಣೆ ಸಲ್ಲಿಸುತ್ತಾ ಕುಳಿತರೇ ಮುಂದಿನ ದಿನಗಳಲ್ಲಿ ಗಣಿ ಕಂಪನಿಗಳಿಗೆ ಸಮಸ್ಯೆಯಾಗಲಿದೆ ಎಂಬುದನ್ನು ವಿವಿಧ ಉದಾರಣೆಗಳನ್ನು ನೀಡುವುದರ ಮೂಲಕ ತಿಳಿಹೇಳಿದರು.

ನಮ್ಮ ಕ್ರಿಯಾಯೋಜನೆಯಲ್ಲಿ ಇಂಡಿಯನ್ ಇನಿಸ್ಟಿಟ್ಯೂಟ್ ಮೈನಿಂಗ್, ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಪ್ರತಿ ತಾಲೂಕಿಗೆ 3 ಸಾವಿರ ಮನೆಗಳ ನಿಮರ್ಾಣ ಸೇರಿದಂತೆ ಅನೇಕ ಯೋಜನೆಗಳನ್ನು ಸೇರಿಸಿಕೊಳ್ಳಲಾಗಿದೆ ಎಂದರು.

   ಶಾಸಕರಾದ ಜಿ.ಸೋಮಶೇಖರರೆಡ್ಡಿ, ಎನ್.ಗಣೇಶ, ಭೀಮಾನಾಯ್ಕ, ಸೋಮಲಿಂಗಪ್ಪ, ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಅನೂಜ್, ಚಿನ್ಮಯಿ ಸೇರಿದಂತೆ ಫೆಮಿ(ಗಣಿ ಕಂಪನಿಗಳ ಒಕ್ಕೂಟ)ಯ ಐದು ಜನ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು,ತಮ್ಮ ಸಲಹೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಪ್ರೋಬೆಷನರಿ ಐಎಎಸ್ ಅಧಿಕಾರಿ ನಂದಿನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿದರ್ೇಶಕ ಮಹಾವೀರ್ ಮತ್ತಿತರರು ಇದ್ದರು.