ಪೋಲಿಸರ ರಕ್ಷಣೆಯೊಂದಿಗೆ ಮಹಾವೀರ ಜಯಂತಿ ಆಚರಣೆ
ಯಮಕನಮರಡಿ 10: ಸ್ಥಳೀಯ 1008 ಜೈನ ಮಂದಿರದಲ್ಲಿ ಪ್ರತಿ ವರ್ಷದ ಪದ್ದತ್ತಿಯಂತೆ ದಿನಾಂಕ 10 ರಂದು ಮಹಾವೀರ ಜಯಂತಿಯನ್ನು ಆಚರಿಸುತ್ತಾ ಬಂದಿರುವುದು ಒಂದು ಸಂಪ್ರದಾಯ ಆದರೇ ಇತ್ತಿಚಿನ ದಿನಗಳಲ್ಲಿ ಸ್ಥಳೀಯ ಜೈನ ಕುಲ ಬಾಂದವರಲ್ಲಿ ಗುಂಪುಗಾರಿಕೆಯಿಂದಾಗಿ ಜಯಂತಿ ಆಚರಣೆಗೆ ಕೆಲ ಗುಂಪಿನವರು ನ್ಯಾಯಾಲಯದಿಂದ ತಡೆಆಜ್ಞೆ ತಂದು ಗ್ರಾಮದಲ್ಲಿ ಹೋಸ ಸಂಪ್ರದಾಯ ಮೂಡಿಸಿದಂತಾಗಿದೆ. ಇದರಿಂದಾಗಿ ಜೈನ ಧರ್ಮವು ಸಾರೀದ ಅಹಿಂಸಾ ಪರಮೋಧರ್ಮ ಎಂಬ ಸಂಕೆತಕ್ಕೆ ಕಪ್ಪು ಚುಕ್ಕಿ ಮೂಡಿದಂತಾಗಿದೆ ಒಂದು ಗುಂಪಿನವರು ವಾಧ್ಯ ಮೇಳದೊಂದಿಗೆ ಮೇರವಣಿಗೆ ಮುಖಾಂತರ ಜಯಂತಿಯನ್ನು ಆಚರಿಸಿದರು ತದನಂತರ ಮತ್ತೊಂದು ಗುಂಪಿನವರು ಶ್ರಾವಕ ಶ್ರಾವಕಿಯರೋಡನೆ ಪಲ್ಲಕ್ಕಿ ಮೇರವಣಿಗೆ ನೇರವೆರಿಸಿದರು. ಇದರಿಂದಾಗಿ ಜೈನ ಧರ್ಮಕ್ಕೆ ಕಳಂಕ ತಂದಂತಾಗಿದೆ ಎಂದು ಜನರು ಮಾತನಾಡುತ್ತಿದ್ದಾರೆ. ಸದರಿ ಜಯಂತಿ ಉತ್ಸವ ಕಾರ್ಯಕ್ರಮಕ್ಕೆ ನ್ಯಾಯಾಲಯದ ಆದೇಶದ ಮೇರೆಗೆ ಸ್ಥಳಿಯ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಶಿವಲಿಂಗ ಢಂಗ ಹಾಗೂ ಸಿಬ್ಬಂದಿ ಇವರ ಸಮ್ಮುಖದಲ್ಲಿ ಕಾರ್ಯಕ್ರಮವು ಕಲ್ಮಶವಾಗಿ ನಡೆಯಿತು.
ಸ್ಥಳಿಯ ಪೋಲಿಸ ಠಾಣೆ ಸಿ ಪಿ ಐ ಜಾವೀದ ಮುಸಾಪಿರಿ ಅವರು ತಮ್ಮ ಸಿಬ್ಬಂದಿಗಳೋಂದಿಗೆ ಸೂಕ್ತ ಬಂದೋಬಸ್ತಿ ವಹಿಸಿ ಯಾವುದೇ ತರಹದ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಂಡರು ಜೋತೆಗೆ ತಾವೆಲ್ಲರೂ ಒಂದೆ ಧರ್ಮದವರಾಗಿ ಶ್ರಾವಕ ಶ್ರಾವಕಿಯರು ಶಾಂತತೆಯನ್ನು ಕಾಪಾಡಿಕೊಂಡು ಜಯಂತಿಯನ್ನು ಆಚರಿಸಬೇಕೆಂದು ತಿಳಿಸಿದರು. ಜೈನ ಧರ್ಮದ ಪ್ರಮುಖ ಹಬ್ಬವಾದ ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತದೆ. ಆ ದಿನವು ಜೈನ ಧರ್ಮದ 24 ನೇ ಮತ್ತು ಕೋನೆಯ ತಿರ್ಥಂಕರರಾದ ಭಗವಾನ್ ಮಹಾವೀರರ ಜನ್ಮದಿನವನ್ನು ನೆನಪಿಗಾಗಿ ಆಚರಿಸಲಾಗುತ್ತದೆ. ಅವರ ಬೋದನೆಗಳಾದ ಅಹಿಂಸೆ, ಸತ್ಯ, ಅಸ್ತೆಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಜೈನ ಧರ್ಮದ ಮುಖ್ಯ ತತ್ವಗಳಾಗಿವೆ. ಈ ತತ್ವಗಳು ಮನುಷ್ಯನ ನೈತಿಕ ಜೀವನಕ್ಕೆ ಬುನಾದಿಯನ್ನು ಹಾಕುತ್ತವೆ. ಇಂತಹ ಪವಿತ್ರ ಧರ್ಮಕ್ಕೆ ಕಳಂಕ ತಂದಿರುವುದು ನೋವಿನ ಸಂಗತಿಯಾಗಿದೆ ಎಮದು ಜನರು ಮಾತನಾಡುತ್ತಿದ್ದಾರೆ.