ಕಾರವಾರ 08: ಸಾಗರ ಕವಚ ಅಣುಕು ಕಾರ್ಯಾಚರಣೆ ಮಂಗಳವಾರ ಆರಂಭವಾಗಿದ್ದು, ಕಾರವಾರ ಸಮೀಪದ ಅರಬ್ಬೀ ಸಮುದ್ರದಲ್ಲಿ ಲಕ್ಷ್ಮೀನಾರಾಯಣ ಹೆಸರಿನ ಬೋಟ್ ನಲ್ಲಿ ಅಕ್ರಮವಾಗಿ ಸ್ಪೋಟಕ ಸಾಗಿಸುತ್ತಿದ್ದ ರೆಡ್ ಟೀಮನ್ನು ಬ್ಲೂಟೀಮ್ ಕರಾವಳಿ ಕಾವಲು ಪಡೆಯ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಗರ ಕವಚ ಕಾರ್ಯಾಚರಣೆ ಮೊದಲ ದಿನವೇ ಪೊಲೀಸರಿಗೆ ಯಶಸ್ಸು ದೊರೆತಂತಾಗಿದೆ. ಕಾರವಾರ ಮೀನುಗಾರಿಕೆ ಬಂದರು ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಸಹ ಸಾಗರ ಕವಚ ಕಾರ್ಯಾಚರಣೆ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಎರಡು ಕಾರ್ಯಾಚರಣೆ ಯಶಸ್ವಿಯಾಗಿವೆ. ಆದರೆ ಕ್ರಿಮ್ಸ ಆಸ್ಪತ್ರೆ ಗಾರ್ಡನ್ ಬಳಿ ಬಾಂಬ್ ಇಟ್ಟ ವ್ಯಕ್ತಿಯನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಮೆಡಿಕಲ್ ಕಾಲೇಜು ಆಸ್ಪತ್ರೆ ಬಳಿ ರೆಡ್ ಟೀಮ್ ವ್ಯಕ್ತಿಯೊಬ್ಬ ಬಾಂಬ್ ಇರುವ ಚೀಲ ಇಟ್ಟು ಪರಾರಿಯಾಗಿ, ರೆಡ್ ಟೀಮ್ ಲೀಡರ್ ಗೆ ಮಾಹಿತಿ ನೀಡಿದ್ದಾನೆ. ನಂತರ ಸಾಹರ ಕವಚ ಪೊಲೀಸ ಸಿಬ್ಬಂದಿ ನಕಲಿ ಮಾದರಿ ಬಾಂಬ್ ಇರುವ ಚೀಲವನ್ನು ವಶಕ್ಕೆ ಪಡೆದಿದೆ. ಆದರೆ ಆ ವ್ಯಕ್ತಿಯನ್ನು ಬಂಧಿಸುವಲ್ಲಿ ವಿಫಲವಾಗಿದೆ. ತದಡಿಯಲ್ಲಿ ಸಹ ದುಷ್ಕರ್ಮಿಗಳನ್ನು ಸಾಗರ ಕವಚ ಸಿಬ್ಬಂದಿ ಬಂಧಿಸಿದ್ದಾರೆ.
ಸಾಗರ ಕವಚ ನಾಳೆ ಸಹ ಮುಂದುವರಿಯಲಿದೆ. ವರ್ಷದಲ್ಲಿ ಒಮ್ಮೆ ಸಾಗರ ಕವಚ ಕಾರ್ಯಾಚರಣೆ ನಡೆಸುತ್ತಾ ಬರಲಾಗುತ್ತಿದೆ.