ಬೀಳಗಿಯಲ್ಲಿ ಭಗವಾನ ಮಹಾವೀರ ಜಯಂತಿ ಆಚರಣೆ
ಬೀಳಗಿ 10: ಭಾರತ ಹಲವು ಧರ್ಮಗಳ ಬೀಡು ಅದರಲ್ಲಿ ಜೈನ ಧರ್ಮವು ಪ್ರಮುಖವಾಗಿದ್ದು ಅಹಿಂಸಾವಾದಿಗಳಾಗಿರುವ ಇವರು ತ್ಯಾಗ, ಪ್ರೀತಿ, ಮಮತಾಮಾಯಿ ಗುಣ ಹೊಂದಿರುವರು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದೇವಿಂದ್ರ ಧನಪಾಲ ಹೇಳಿದರು.
ಪಟ್ಟಣದ 1008 ಪಾರ್ಶ್ವನಾಥ ದಿಗಂಬರ ಜೈನಮಂದಿರದಲ್ಲಿ ಏರಿ್ಡಸಿದ 2624 ನೇ ಭಗವಾನ ಮಹಾವೀರ ಜಯಂತ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾವೀರರು ಅವರ 30ನೇ ವಯಸ್ಸಿನಲ್ಲಿ ಸಿಂಹಾಸನವನ್ನು ತ್ಯಾಜಿಸಿ ಆಧ್ಯಾತ್ಮಿಕತೆಯ ಮಾರ್ಗವನ್ನು ಅರಿಸಿಕೊಂಡವರು. ಇವರ ಜಯಂತಿಯನ್ನು ವಿಶ್ವದಾಧ್ಯಂತ ಆಚರಿಸುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿ ತಹಶೀಲ್ದಾರ್ ವಿನೋದ ಹತ್ತಳ್ಳಿ ಮಾತನಾಡಿ, ಕನ್ನಡದ ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ಹಲವಾರು ಕೊಡುಗೆ ನೀಡಿ ಈ ಕ್ಷೇತ್ರಗಳಿಗೆ ಭದ್ರ ಬುನಾದಿ ಹಾಕಿದವರು ಜೈನ ಸಮುದಾಯದವರು. ಜೈನ ಸಮುದಾಯಕ್ಕೆ ಸೇರಿದ ರತ್ನತ್ರಯರಲ್ಲಿ ಒಬ್ಬರಾದ ಕವಿ ಚಕ್ರವರ್ತಿ ರನ್ನ ನಮ್ಮ ಜಿಲ್ಲೆಯವರು ಎನ್ನುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಯ ಬೆಳಗಾವಿ ವಿಭಾಗಿಯ ಸಂಚಾಲಕ ಮಾಹಾದೇವ ಹಾದಿಮನಿ, ಸಿಪಿಐ ಎಚ್ ಜಿ ಸಣಮನಿ
ಮಾತನಾಡಿದರು.
ಜೈನ ಮಂದಿರದ ಎದುರು ಮಾನಸ್ತಂಭ ನಿರ್ಮಾಣವಾದಾಗ ಜೈನ ಮಂದಿರ ಪೂರ್ಣವಾಗುತ್ತದೆ. ಮಾನಸ್ತಂಭದ ನಿರ್ಮಾಣಕ್ಕೆ ಸರಕಾರದಿಂದ ಸಹಾಯ ಸಹಕಾರ ನೀಡಬೇಕು ಎಂದು ಸಮಾಜದ ಮುಖಂಡರು ಅಧಿಕಾರಿಗಳಿಗೆ ವಿನಂತಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುತ್ತು ಬೊರ್ಜಿ, ರಾಜು ಜಡ್ರಾಂಕುಂಟಿ, ಭರತರಾಜ ಬೀಳಗಿ, ಆರ್.ಡಿ.ಅಣ್ಣಿಗೇರಿ, ಚಂದ್ರನಾಥ ಕೊಪ್ಪದ, ಅಜೀತ ಕೊಪ್ಪದ, ಎಸ್.ಸಿ.ಬಾಳಿಕಾಯಿ,
ಲೋಹಿತ ಕೊಪ್ಪದ, ಸುನಿಲಕುಮಾರ ರಾವನ್ನವರ, ಶಿಕ್ಷಕ ಎಮ್ ಆರ್ ಕಲ್ಗುಡಿ ಇತರರು ಇದ್ದರು.