ಬೆಳಗಾವಿ : ತಾನು ಪ್ರೀತಿಸುತಿದ್ದ ಪ್ರೇಯಸಿಯು ಮದುವೆ ಆಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರೇಯಸಿಯ ಕುತ್ತಿಗೆ ಕೋಯ್ದು ಬರ್ಬರ ಹತ್ಯೆ ಮಾಡಿದ ಪಾಗಲ್ ಪ್ರೇಮಿಯೋರ್ವ ಬಳಿಕ ತಾನೂ ಕುತ್ತಿಗೆ ಕೊಯ್ದುಕೊಂಡ ಮೃತಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ನಗರದ ನಾಥ್ ಪೈ ವೃತ್ತದ ಮನೆಯಲ್ಲಿ ದಾರುಣ ಘಟನೆ ನಡೆದಿದ್ದು,ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ಪ್ರಶಾಂತ ಕುಂಡೇಕರ್ (29) ಎಂಬಾತನಿಂದ ಈ ಕೃತ್ಯ ನಡೆದಿದೆ.
ನಾಥ್ ಪೈ ವೃತ್ತದ ನಿವಾಸಿ ಐಶ್ವರ್ಯ ಮಹೇಶ ಲೋಹಾರ್ (18) ದಾರುಣ ಹತ್ಯೆ ಯಾಗಿರುವ ಯುವತಿಯಾಗಿದ್ದಾಳೆ.ಪೇಂಟರ್ ಆಗಿ ಕೆಲಸ ಮಾಡಿಕೊಂಡಿದ್ದ ಪ್ರಶಾಂತ ಕುಂಡೇಕರ್ ಈತ ಕಳೆದ ಒಂದೂವರೆ ವರ್ಷದಿಂದ ಐಶ್ವರ್ಯ ಅವಳನ್ನು ಪ್ರೀತಿಸುತ್ತಿದ್ದನು ಎನ್ನಲಾಗಿದೆ.
ತಮ್ಮ ಪ್ರೀತಿಯ ವಿಚಾರ ಐಶ್ವರ್ಯ ತಾಯಿ ಮುಂದೆ ಹೇಳಿದ್ದ ಪ್ರಶಾಂತಗೆಮದುವೆ ಈಗಲೇ ಬೇಡ, ನಿನ್ನ ಕಾಲ ಮೇಲೆ ನೀನು ನಿಲ್ಲುವಂತೆ ಬುದ್ಧಿವಾದ ಐಶ್ವರ್ಯ ತಾಯಿ ಹೇಳಿದ್ದಳು.
ಆದರೆ ಬುಧವಾರ ನಾಥ್ ಪೈ ವೃತ್ತದಲ್ಲಿರುವ ಐಶ್ವರ್ಯ ಅವಳ ಚಿಕ್ಕಮ್ಮಳ ಮನೆಯಲ್ಲಿ ಸೇರಿದ್ದ ಇಬ್ಬರು.ವಿಷದ ಬಾಟಲಿ ಸಮೇತ ಐಶ್ವರ್ಯ ಚಿಕ್ಕಮ್ಮನ ಮನೆಗೆ ಬಂದಿದ್ದ ಪ್ರಶಾಂತ ಈತ ಮದುವೆಗೆ ನಿರಾಕರಿಸಿದ ಐಶ್ವರ್ಯಗೆ ಒತ್ತಾಯಪೂರ್ವಕ ವಿಷ ಕುಡಿಸಲು ಪ್ರಶಾಂತ ಮುಂದಾಗಿದ್ದನು.
ಆಗ ಜೇಬಿನಲ್ಲಿದ್ದ ಚೂರಿಯಿಂದ ಐಶ್ವರ್ಯ ಕುತ್ತಿಗೆಗೆ ಹಾಕಿರುವ ಪ್ರಶಾಂತ ತೀವ್ರ ರಕ್ತ ಸ್ರಾವದಿಂದ ಐಶ್ವರ್ಯ ಸಾವನಪ್ಪುತ್ತಿದ್ದಂತೆ ಕಂಗಾಲಾದ ಪ್ರಶಾಂತ ಈತ ಬಳಿಕ ತಾನೂ ಚೂರಿಯಿಂದ ಕುತ್ತಿಗೆಗೆ ಹಾಕಿಕೊಂಡು ಮೃತಪಟ್ಟ ಪಾಗಲ್ ಪ್ರೇಮಿ.
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದೀಶ್. ಮಾರ್ಕೆಟ್ ವಿಭಾಗದ ಎಸಿಪಿ ಸಂತೋಷ ಸತ್ಯನಾಯಿಕ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಬೆಳಗಾವಿಯ ಶಹಾಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಈ ಘಟನೆ ನಡೆದಿದೆ.