ಮಾ. 5 ರಂದು ಗಾನಯೋಗಿ ಪಂಚಾಕ್ಷರಿ ಸಂಗೀತ ಪರಂಪರೆ ಉತ್ಸವ ಪಂಚಾಕ್ಷರಿ ಗದಗ ರಾಷ್ಟ್ರೀಯ ಘರಾನಾ ಸಮ್ಮೇಳನ

Ma. Ganayogi Panchakshari Music Heritage Utsav Panchakshari Gadag National Gharana Conference on 5

ಮಾ. 5 ರಂದು ಗಾನಯೋಗಿ ಪಂಚಾಕ್ಷರಿ ಸಂಗೀತ ಪರಂಪರೆ ಉತ್ಸವ ಪಂಚಾಕ್ಷರಿ ಗದಗ ರಾಷ್ಟ್ರೀಯ ಘರಾನಾ ಸಮ್ಮೇಳನ 

ಗದಗ 04 : ನಗರದ ಅಡವೀಂದ್ರ ಸ್ವಾಮಿಗಳ ಮಠದಲ್ಲಿ ಶಿಷ್ಯ-ಪ್ರಶಿಷ್ಟರ ಸಂಘಟನೆಯಾದ ಗುರು ಪಂಚಾಕ್ಷರಿ ಸೇವಾ ಸಮಿತಿಯು  ಗಾನಯೋಗಿ ಪಂಚಾಕ್ಷರಿ ಸಂಗೀತ ಪರಂಪರಾ ಉತ್ಸವ, ಪಂಚಾಕ್ಷರಿ ಗದಗ ರಾಷ್ಟ್ರೀಯ ಘರಾನಾ ಸಮ್ಮೇಳನವನ್ನು  ಇದೇ  5 ರಂದು ಸಂಜೆ 4 ರಿಂದ ರಾತ್ರಿ 9-30 ಗಂಟೆಯವರೆಗೆ ಆಚರಿಸಲಿದೆ. ಮಾ. 5 ರಂದು  ಬುಧವಾರ ನಡೆಯವ ಗಾನಯೋಗಿ ಪಂಚಾಕ್ಷರಿ ಸಂಗೀತ ಪರಂಪರಾ ಉತ್ಸವ, ಪಂಚಾಕ್ಷರಿ ಗದಗ ರಾಷ್ಟ್ರೀಯ ಘರಾನಾ, ಗುರು ಕುಮಾರ ಪಂಚಾಕ್ಷರಿ ಸಮ್ಮಾನ-2025 ರಂದು ನಡೆಯುವ ಸಮಾರಂಭದಲ್ಲಿಅಂತರಾಷ್ಟ್ರೀಯ ಖ್ಯಾತ ಸಂಗೀತಗಾರರಾದ ಪದ್ಮಶ್ರೀ ಡಾ. ಎಂ. ವೆಂಕಟೇಶಕುಮಾರ, ಹಿರಿಯ ಪ್ರಸಿದ್ಧ ಸಂಗೀತಗಾರರಾದ ಡಾ. ಸಿದ್ರಾಮಯ್ಯ ಮಠಪತಿ-ಗಾಯನ, ಡಾ. ನಾರಾಯಣ ಅಕ್ಕಸಾಲಿ ಹಾಗೂ ಡಾ. ಗುರುಬಸವ ಮಹಾಮನಿ ಅವರಿಂದ  ವಾಯಲಿನ್  ಜುಗಲ್‌ಬಂದಿ, ಡಾ.ಶಿವಬಸಯ್ಯ ಗಡ್ಡದಮಠ- ಗಾಯನ, ಕುಮಟಾದ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತದಲ್ಲಿ“ಎ''ಗ್ರೇಡ ಕಲಾವಿದೆಯಾದ ಶ್ರೀಮತಿ ರೇಷ್ಮಾ ಭಟ- ಗಾಯನ, ಧಾರವಾಡದ ಪ್ರಸಿದ್ಧ ತಬಲಾವಾದಕರಾದ  ಶ್ರೀಧರ ಮಾಂಡ್ರೆ  ಅವರಿಂದ ತಬಲಾ ಸೋಲೋ, ಪ್ರಸಿದ್ಧ ಯುವ ಬಾನ್ಸುರಿ ವಾದಕಿ ವಿಜಯಪುರದ ಕೃತಿಕಾ ಜಂಗಿನಮಠ ಅವರಿಂದ  ಬಾನ್ಸುರಿವಾದನ,  ಧಾರವಾಡ ಆಕಾಶವಾಣಿ  ಎ''ಗ್ರೇಡ್ ತಬಲಾವಾದಕರಾದ ಪಂ.ಶರಣಕುಮಾರ ಗುತ್ತರಗಿ ತಬಲಾ, ಪ್ರೊ. ಮೃತ್ಯುಂಜಯ ಮಠದ ತಬಲಾ, ಡಾ. ಹನುಮಂತ ಕೊಡಗಾನೂರ ತಬಲಾ, ಭೀಮಾಶಂಕರ ಬಿದನೂರು  ಅವರ ತಬಲಾ ಸಾಥ ನೀಡುವರು. ಧಾರವಾಡದ ಯುವಹಾರ್ಮೋನಿಯಂ ವಾದಕ ಬಸವರಾಜ ಹಿರೇಮಠ ಹಾಗೂ ಸುಕ್ರಸಾಬ ಮುಲ್ಲಾ ಹಾರ್ಮೋನಿಯಂ ಸಾಥ್ ನೀಡುವರು  ಗುರು ಪಂಚಾಕ್ಷರಿ ಸೇವಾ  ಸಮಿತಿ ಕಾರ್ಯದರ್ಶಿ ಎಂ. ಎಂ. ಶಿರೋಳಮಠ ಅವರು ತಿಳಿಸಿದ್ದಾರೆ.