07 ರಂದು ರೈತ ಸಂಘಗಳಿಂದ ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆ ಸಭೆ
ಹೊಸಪೇಟೆ, ವಿಜಯನಗರ 04: ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯನಗರ ಜಿಲ್ಲೆ ವತಿಯಿಂದ ನವ ಕರ್ನಾಟಕ ನಿರ್ಮಾಣ ಆಂದೋಲನ (ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆ) ಕಾರ್ಯಕ್ರಮವನ್ನು ಜಾತಾ ಮೂಲಕ ದಿನಾಂಕ : 07 ರಂದು ಶುಕ್ರವಾರ, ಬೆಳಿಗ್ಗೆ 10.30ಕ್ಕೆ ಪಂಪಕಲಾ ಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಸಭೆ ಕರೆಯಲಾಯಿತು. ಈ ಕಾರ್ಯಕ್ರಮದಲ್ಲಿ ಸಣ್ಣಕ್ಕಿ ರುದ್ರ್ಪ ತಾಲೂಕು ಅಧ್ಯಕ್ಷರು ಮಾತನಾಡಿ ಈ ಹಿಂದೆ ಬಿ.ಜೆ.ಪಿ. ಸರ್ಕಾರ ಕೃಷಿ ಕಾಯ್ದೆ, ಎ.ಪಿ.ಎಂ.ಸಿ. ಕಾಯ್ದೆ, ಭೂ ಸ್ವಾಧೀನ ಕಾಯ್ದೆ ಇವುಗಳು ರೈತರಿಗೆ ಮಾರಕವಾದ ಕಾಯ್ದೆಗಳನ್ನು 2020ರಲ್ಲಿ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತರಲಾಯಿತು. ಇದರಿಂದ ಸುಮಾರು 10ಲಕ್ಷ ರೈತರು ಭೂಮಿಯನ್ನು ಕಳೆದುಕೊಂಡು ಬೀದಿಪಾಲು ಆಗಿದ್ದಾರೆ. ಈಗ 2023ರ ಚುನಾವಣೆಯ ಮುಂಚೆ ಸಿದ್ದರಾಮಯ್ಯ ರವರು ಹೇಳಿದಹಾಗೆ ಕಾಂಗ್ರೆಸ್ ಸರ್ಕಾರ ಬಂದ 24 ತಾಸಿನೊಳಗೆ ಈ ಕೃಷಿ ಕಾಯ್ದೆ, ಎ.ಪಿ.ಎಂ.ಸಿ. ಕಾಯ್ದೆ, ಭೂಸ್ವಾಧೀನ ಕಾಯ್ದೆಯನ್ನು ತೆಗೆದು ಹಾಕುತ್ತೇವೆ ಎಂದು ಮಾತುಕೊಟ್ಟಿದ್ದರು. ಆದರೆ ಸುಮಾರು 2.5ವರ್ಷ ಆದರೂ ಸಹ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲದಂತೆ ಆ ಕಾನೂನುಗಳನ್ನು ಯಥಾವತ್ತಾಗಿ ಮುಂದುವರೆಸಿಕೊಂಡು ಬಂದಿರುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ. ಆದ ಕಾರಣ ಈ ಕೂಡಲೇ ಈ ಮೂರು ಕಾಯ್ದೆಗಳನ್ನು ಕೈಬಿಡಬೇಕು. ಎಂ.ಜಡಿಯಪ್ಪ ಜಿಲ್ಲಾ ಕಾರ್ಯಧ್ಯಕ್ಷರು ಮಾತನಾಡಿ ಹಳ್ಳಿ ಬಾಗದಲ್ಲಿ ಕೆರೆ ತುಂಬಿಸುವ ವ್ಯವಸ್ಥೆ ಆಗಿರಬಹುದು ಇದು ಸುಮಾರು 2-3 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಯಾವುದೇ ರೀತಿಯ ಕಾಮಗಾರಿಯನ್ನು ಮಾಡಿರುವುದಿಲ್ಲ. ಆದರೆ ಈಗ ಇರುತಕ್ಕಂತ ಸರ್ಕಾರದಲ್ಲಿ ಯಾವುದೇ ಅನುದಾನ ಇಲ್ಲ ಎಂದು ಹೇಳಿ ಅಧಿಕಾರಿಗಳು ಸಬೂಬು ನೀಡುತ್ತಿದ್ದಾರೆ ಎಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಟಿ.ನಾಗರಾಜ್ ಜಿಲ್ಲಾಧ್ಯಕ್ಷರು ಮಾತನಾಡಿ, ಸಕ್ಕರೆ ಕಾರ್ಖಾನೆ ಮುಚ್ಚಿ ಸುಮಾರು 8ವರ್ಷಗಳು ಆಗಿದ್ದು, ಇಲ್ಲಿಯವರೆಗೂ ಯಾವುದೇ ಸರ್ಕಾರ ಆಗಲಿ, ಉಸ್ತುವಾರಿ ಮಂತ್ರಿಗಳಾಗಲಿ, ಶಾಸಕರಾಗಲಿ, ಜಿಲ್ಲಾ ಮಟ್ಟದ ಅಧಿಕಾರಿಗಳಾಗಿ ಇದರ ಬಗ್ಗೆ ಹಲವಾರು ಬಾರಿ ಮನವಿ ಕೊಟ್ಟರು ಸಹ ಯಾವುದೇ ರೀತಿಯಾಗಿ ಕಾರ್ಖಾನೆಯನ್ನು ಪುನರ್ ಆರಂಭ ಮಾಡಲು ಆಗಿರುವುದಿಲ್ಲ. ಇದು ಸಹ ಸರ್ಕಾರ ಬೇಜವಾಬ್ದಾರಿಯನ್ನು ತೋರಿಸುತ್ತಿದೆ. ಇಲ್ಲಿನ ರೈತರಿಗೆ ಪ್ರತಿಯೊಂದು ಟನ್ ಕಬ್ಬಿಗೆ 1000 ರಿಂದ 1200 ರವರೆಗೆ ನಷ್ಟ ಆಗಿರುತ್ತದೆ. ಆದ ಕಾರಣ ಈ ಕೂಡಲೇ ಸಂಬಂಧಪಟ್ಟ ಸಚಿವರಾಗಲಿ, ಅಧಿಕಾರಿಗಳಾಗಲಿ ಕೂಡಲೇ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಬೇಕು ಎಂದು ಸರ್ಕಾರದ ಮೇಲೆ ಒತ್ತಾಯ ಹೇರಿದರು. ಈ ವಿಷಯಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದ ಎಲ್ಲಾ ರೈತ ಚಳುವಳಿ, ದಲಿತ ಚಳುವಳಿ, ಕನ್ನಡ ಬಾಷಾ ಚಳುವಳಿ, ಕಾರ್ಮಿಕ ಚಳುವಳಿ, ಪರಿಸರ ಚಳುವಳಿ, ವಿದ್ಯಾರ್ಥಿ ಯುವಜನ ಚಳುವಳಿಗಳು ರೂಪಸಿರುವ ಪ್ರಾದೇಶಿಕ ರಾಜಕೀಯ ಪಕ್ಷದ ಮುನ್ನೋಟವನ್ನು ಈ ಎಲ್ಲಾ ಸಂಘಟನೆಗಳು ನವ ಕರ್ನಾಟಕ ನಿರ್ಮಾಣ ಆಂದೋಲನ ಅಡಿಯಲ್ಲಿ ಭಾಗವಹಿಸಲಿವೆ. ಈ ಸಂದರ್ಭದಲ್ಲಿ ನಾಗರಾಜ.ಟಿ ಜಿಲ್ಲಾಧ್ಯಕ್ಷರು, ಸಣ್ಣಕ್ಕಿ ರುದ್ರ್ಪ ತಾಲೂಕು ಅಧ್ಯಕ್ಷರು, ಎಂ.ಜಡಿಯಪ್ಪ ಕಾರ್ಯಧ್ಯಕ್ಷರು, ಆರ್.ಆರ್.ತಾಯಪ್ಪ ಜಿಲ್ಲಾ ಉಪಾಧ್ಯಕ್ಷರು, ರೇವಣಸಿದ್ದಪ್ಪ ಗೌರವಾಧ್ಯಕ್ಷರು, ಕೆ.ಮೂರ್ತಿ ತಾಲೂಕು ಉಪಾಧ್ಯಕ್ಷರು, ರಾಮಾಂಜಿನಿ ತಾಲೂಕು ಉಪಾಧ್ಯಕ್ಷರು, ಜೆ.ರಾಘವೇಂದ್ರ ತಾಲೂಕು ಉಪಾಧ್ಯಕ್ಷರು, ಕೆ.ಸುರೇಶ್, ನಗರಘಟಕ ಅಧ್ಯಕ್ಷರು, ಎಂ.ಜಹಿರುದ್ದೀನ್ ರಾಜ್ಯ ಸಂಚಾಲಕರು, ಜಾಕೀರ್ ಹುಸೇನ್ ತಾಲೂಕು ಉಪಾಧ್ಯಕ್ಷರು, ಅಯ್ಯಣ್ಣ, ಧರ್ಮಸಾಗರ ಮಲ್ಲಿಕಾರ್ಜುನ, ಸತೀಶ, ಹನುಮಂತರೆಡ್ಡಿ ಇನ್ನು ಮುಂತಾದವರು ಉಪಸ್ಥಿತರಿದ್ದರು.