ಪಾಕಿಸ್ತಾನದಲ್ಲಿ ರೂ.80 ಸಾವಿರ ಕೋಟಿ ಮೌಲ್ಯದ ಚಿನ್ನದ ನಿಕ್ಷೇಪ ಪತ್ತೆ?

Gold deposit worth Rs.80 thousand crore discovered in Pakistan?

ಇಸ್ಲಾಮಾಬಾದ್ 04: ಆರ್ಥಿಕವಾಗಿ ದಿವಾಳಿ ಅಂಚಿನಲ್ಲಿರುವ ಪಾಕಿಸ್ತಾನದಲ್ಲಿ ಪಂಜಾಬ್ ಪ್ರಾಂತ್ಯದ ಸಿಂಧು ನದಿ ದಡದ 32 ಕಿ.ಮೀ. ದೂರದಲ್ಲಿ ಚಿನ್ನದ ಬರೋಬ್ಬರಿ ರೂ.80 ಸಾವಿರ ಕೋಟಿ ಮೌಲ್ಯದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪಂಜಾಬ್ ಪ್ರಾಂತ್ಯದ ಅಟಾಕ್ ನಗರದ ಕಡೆಯಿಂದ ಹಾದು ಹೋಗುವ ಮಾರ್ಗದಲ್ಲಿ ನಿಕ್ಷೇಪ ಪತ್ತೆಯಾಗಿದೆ. 127 ಸ್ಥಳಗಳಲ್ಲಿನ ಮಾದರಿಯನ್ನು ಸಂಗ್ರಹಿಸಲಾಗಿ ಪರಿಶೀಲನೆ ನಡೆಸಿರುವ ಭೂವೈಜ್ಞಾನಿಕ ಸರ್ವೇಕ್ಷನಾ ಇಲಾಖೆ ಚಿನ್ನ ಇರುವುದನ್ನು ದೃಢಪಡಿಸಿದೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಾಜಿ ಗಣಿ ಸಚಿವ ಇಬ್ರಾಹಿಂ ಹಸನ್ ಮರಾದ್ ಹೇಳಿದ್ದರು. 

ಇದು ರಾಷ್ಟ್ರದ ಆರ್ಥಿಕ ಪ್ರಗತಿಗೆ ನೆರವಾಗಬಹುದು ಎಂದು ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಎಂಜಿನಿಯರಿಂಗ್ ಸೇವೆಗಳ ಪಾಕಿಸ್ತಾನ, ಪಂಜಾಬ್‌ನ ಗಣಿ ಮತ್ತು ಖನಿಜಗಳ ಇಲಾಖೆ ಅಂದಾಜಿಸಿದೆ.

ಹಿಮಾಲಯದಲ್ಲಿ ಹುಟ್ಟುವ ಸಿಂಧು ನದಿ ಭಾರತದ ಮೂಲಕ ಪಾಕಿಸ್ತಾನ ಪ್ರವೇಶಿಸುತ್ತದೆ. ಸಿಂಧು ನದಿ ಪ್ರವೇಶಿಸುವ ನಿಖರ ಸ್ಥಳದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ಭೂಗರ್ಭಶಾಸ್ತ್ರಜ್ಞರು ಹೇಳಿದ್ದಾರೆ.

ಐತಿಹಾಸಿಕವಾಗಿ ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಸಿಂಧು ಕಣಿವೆ ಪ್ರದೇಶದಲ್ಲಿ ಬಹಳ ಹಿಂದಿನಿಂದಲೂ ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.