ಹಾಗೆಂದು ನಾನು ರಾಜ್ಯ ಸರಕಾರದ ಜೊತೆ ಸಂಘರ್ಷಕ್ಕೆ ಇಳಿಯಲ್ಲ
ಕೊಂಕಣ ರೈಲ್ವೆ ನಿರಾಶ್ರಿತರಲ್ಲಿ ಸಾವಿರ ಜನರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ
ಕಾರವಾರ 04: ಕೇಂದ್ರ ಸರ್ಕಾರದ ಯೋಜನೆಗಳಿಗೆ ರಾಜ್ಯ ಸರ್ಕಾರ ವೇಗವಾಗಿ ಸ್ಪಂದಿಸುತ್ತಿಲ್ಲ ಎಂದು ಸಂಸದ ಕಾಗೇರಿ ಆರೋಪ ಮಾಡಿದರು.ಅವರು ಮಂಗಳವಾರ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ದಿಶಾ ಸಭೆಯ ನಂತರ ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪತ್ರಿಕಾಗೋಷ್ಠಿ ಮಾಡಿದರು.
ನಾನು ರಾಜ್ಯ ಸರ್ಕಾರದ ಜೊತೆಗೆ ಸಂಘರ್ಷಕ್ಕೆ ಇಳಿಯಲ್ಲ .ಹೊಂದಾಣಿಕೆ ಯಿಂದ ಕೆಲಸ ಆಗಬೇಕಿದೆ. ಅದನ್ನು ನಾನು ಮಾಡುತ್ತಿರುವೆ ಎಂದರು. ಜನರ ಕೆಲಸ ಆಗಬೇಕು . ಹಾಗಾಗಿ ಸೌಹಾರ್ದಯುತ ವಾತಾವರಣ ಮುಖ್ಯ ಎಂದರು.ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಮಟಾ ,ಹೊನ್ನಾವರ, ಅರ್ಗಾ ಬಳಿ ಕೆಲಸ ಆರಂಭವಾಗಿದೆ. ಭಟ್ಕಳದ ಎರಡು ಕಡೆ, ಅಂಕೋಲಾ ಅಜ್ಜಿಕಟ್ಟಾ ಬಳಿ ಅಂಡರ್ ಪಾಸ್ ಕಾಮಗಾರಿ ಆಗಲಿದೆ. ಅಂಕೋಲಾ ಎಂಟ್ರನ್ಸ ಭಾಗದಲ್ಲಿ ರಾಜ್ಯ ಸರ್ಕಾರ ಭೂಮಿ ಸ್ವಾಧೀನ ಮಾಡಿಕೊಡಬೇಕು .ನಾನು ಸಹ ಕಾಮಗಾರಿಗಳು ನಡೆಯಲಿ ಎಂದು ರಾಜ್ಯ ಸರ್ಕಾರದ ಜೊತೆ ಸ್ನೇಹದಿಂದ ಹೋಗುತ್ತಿದ್ದೇನೆ ಎಂದರು. ಕೊಂಕಣ ರೈಲ್ವೆ ನಿರಾಶ್ರಿತರ ಸಮಸ್ಯೆ ಹಾಗೆ ಉಳಿದಿದೆ. ಇಷ್ಟು ವರ್ಷ ಯಾಕೆ ಉಳಿಯಿತು ಎಂದು ಕೆದಕಲಾರೆ. 28(ಎ) ಆಗದ ಪ್ರಕರಣ ಇವೆ.ಇದನ್ನು ರಾಜ್ಯ ಸರ್ಕಾರ ಮಾಡಬೇಕು. 28 (ಎ) ಆಗದಕೇಸ್ 1000 ಬಾಕಿ ಇವೆ. ಕೊಂ ಭೂ ಪರಿಹಾರಕ್ಕೆ ಮೊದಲ ಕೆಲಸ ಸಹಾಯಕ ಕಮಿಷನರ್ ಗಳಿಂದ ಕ್ಲಿಯರ್ ಆಗದೆ 25 ವರ್ಷದಿಂದ ಬಾಕಿ. ಇದಕ್ಕೆ ನಾನು ಯಾರನ್ನು ದೂರಲ್ಲ. ಈಗ ನನ್ನ ಜವಾಬ್ದಾರಿ ನಿರ್ವಹಿಸುವೆ ಎಂದರು.ಕೊಂಕಣ ರೈಲ್ವೆ ಯಿಂದಗೋಕರ್ಣ,ಕುಮಟಾ ಪ್ಲಾಟ್ ಫಾರಂ ಎತ್ತರಿಸಲು ಒಪ್ಪಿಗೆ ಸಿಕ್ಕಿದೆ. ಕಾರವಾರ ರೈಲು ನಿಲ್ದಾಣದಲ್ಲಿ ವಾಟರ್ ಸ್ಪೆಶಾಲಿಟಿ ಸೌಲಭ್ಯ ನೀಡಲು ಕೊಂಕಣ ರೈಲ್ವೆ ನಿಗಮ ಸಿದ್ಧವಿದೆ. ರಾಜ್ಯ ಸರ್ಕಾರ ನೀರು ಕೊಡಬೇಕು ಎಂದರು. ಕಾರವಾರ ನಿಲ್ದಾಣದಲ್ಲಿ ವಾಟರ್ ಸೌಲಭ್ಯ ಆದರೆ ಹೆಚ್ಚಿನ ರೈಲು ನಿಲ್ಲಲಿವೆ.ಕೊಂಕಣ ರೈಲ್ವೆ ಲಾಭದಲ್ಲಿದ್ದರೂ, ನಷ್ಟದಲ್ಲಿದೆ. ವ್ಯವಹಾರಿಕ ಚಟುವಟಿಕೆ ಲಾಭದಲ್ಲಿದೆ . ಆದರೆ ಕೆ.ಆರ್. ಸಿ .ಎಲ್ . ಮಾಡಿದ ಸಾಲಕ್ಕೆ ಬಡ್ಡಿ ಕಟ್ಟದ ಕಾರಣ , ನಷ್ಟದಲ್ಲಿದೆ. ನಮ್ಮವರೇ ರೈಲ್ವೆ ಸಚಿವ ಸೋಮಣ್ಣ ಇದಾರೆ. ಸಮಸ್ಯೆ ಬಗೆ ಹರಿಸಲು ಪ್ರಯತ್ನ ಮಾಡುವೆ ಎಂದರು. ಕೊಂಕಣ ರೈಲ್ವೆ ಡಬ್ಲಿಂಗ್ ಅಗತ್ಯವಿದೆ. ಆದರೆ ಸದ್ಯಕ್ಕೆ ಆ ಕೆಲಸ ಆಗಲ್ಲ. ಆರ್ಥಿಕ ಕೊರತೆ ಕಾರಣದಿಂದ ಅದು ಅಸಾಧ್ಯ .ಸದ್ಯ ಕೊಂಕಣ ರೈಲ್ವೆ ಯಲ್ಲಿ 85 ಟ್ರೇನ್ ಓಡಾಡುತ್ತಿವೆ ಎಂದರು.ಮುಂದೆ ಹುಬ್ಬಳ್ಳಿ ಅಂಕೋಲಾ ಲೈನ್ ಸಹ ಆಗಲಿದೆ. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಜ್ಞರಿಂದ ಹೊಸ ಸರ್ವೆ ನಡೆದಿದೆ.
ನಂತರ ಡಿಪಿಆರ್ ಸಲ್ಲಿಕೆಯಾಗಲಿದೆ ಎಂದರು.ಕೇಣಿ ಬಂದರು ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಅನುಮತಿ ನೀಡಿತ್ತು. ಈಗ ಕಾಂಗ್ರೆಸ್ ಶಾಸಕರು, ಬಿಜೆಪಿ ವಿಧಾನಪರಿಷತ್ ಸದಸ್ಯರು ವಿರೋಧಿಸುತ್ತಿದ್ದಾರೆ ಎಂಬ ಪ್ರಶ್ನೆಗೆ, ವಿರೋಧ ಯಾಕೆ ಎಂದು ವಿವರಿಸಿ ಎಂದು ಪ್ರತಿಭಟನೆ ಮಾಡುವವರಿಗೆ ಕೇಳಿದ್ದೇನೆ. ಯಾಕೆ ಮಾಡುತ್ತಿರಿ ಎಂದು ಜೆಎಸ್ ಡಬ್ಲು ಹೇಳಲಿದೆ. ಜನರಿಗೆ ತೊಂದರೆ ಇಲ್ಲ, ಲಾಭ ಇದೆ ಎಂದಾದರೆ ನನ್ನ ಸಹಕಾರ ಇದೆ ಎಂದರು. ಸುಮ್ಮನೆ ವಿರೋಧ ಮಾಡಬಾರದು. ಅದಕ್ಕೆ ಸಕಾರಣ ಬೇಕು ಎಂದರು. ಪರಿಷತ್ ಸದಸ್ಯ ಉಳ್ವೇಕರ್, ದಿಶಾ ಸಮಿತಿಗೆ ನೇಮಕವಾದ ಸದಸ್ಯರು ಉಪಸ್ಥಿತರಿದ್ದರು.....