ಲೋಕದರ್ಶನ ವರದಿ
ರಾಯಬಾಗ ತಾಲೂಕು ದೈಹಿಕ ಶಿಕ್ಷಕರ ತಂಡ ರಾಜ್ಯಮಟ್ಟಕ್ಕೆ ಆಯ್ಕೆ
ಹಾರೂಗೇರಿ 19: ಮಕ್ಕಳಲ್ಲಿ ಆಟ-ಪಾಠದ ಜೊತೆ ಕ್ರೀಡಾಸಕ್ತಿಯನ್ನು ಬೆಳೆಸುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿ, ಶೈಕ್ಷಣಿಕವಾಗಿ ಪ್ರಗತಿಯಾಗಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್ ಹೇಳಿದರು.
ಅವರು ಇತ್ತಿಚೆಗೆ ನಡೆದ ಚಿಕ್ಕೋಡಿ ಜಿಲ್ಲಾ ದೈಹಿಕ ಶಿಕ್ಷಕರ ಇಲಾಖಾ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ರಾಯಬಾಗ ತಾಲೂಕಿನ ದೈಹಿಕ ಶಿಕ್ಷಕರ ತಂಡವನ್ನು ಅಭಿನಂದಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ತಮ್ಮದೇ ಆದ ಕೌಶಲ್ಯಗಳಿರುತ್ತವೆ. ಅವುಗಳನ್ನು ಹೊರತಂದು ಅವರ ಪ್ರತಿಭೆ ಗುರುತಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕೆಂದು ಅವರು ಹೇಳಿದರು.
ತಾಲೂಕು ದೈಹಿಕ ಶಿಕ್ಷಣ ಪರೀವೀಕ್ಷಕ ಎಂ.ಪಿ.ಜಿರಗ್ಯಾಳೆ ಮತ್ತು ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಶ್ಯಾರಬಿದ್ರೆ ಅವರು ರಾಜ್ಯಮಟ್ಟದ ವಾಲಿಬಾಲ್ ತಂಡದ ಆಟಗಾರರಾದ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸರದಾರ ಜಮಾದಾರ, ಆನಂದ ಸನದಿ, ಭೀಮಪ್ಪ ಕಾಂಬಳೆ, ಧೀರೇಂದ್ರ ಜೋಡಟ್ಟಿ, ಸಚೀನ ದೇಶಿಂಗೆ, ಶಿವಾನಂದ ಕೊಪ್ಪದ, ಸಂತೋಷ ಪಟ್ಟಣಶೆಟ್ಟಿ, ಜೀವನ ಬಾಬಣ್ಣವರ, ಶಿವಾನಂದ ನಲವಡೆ ಅವರಿಗೆ ಪ್ರಶಸ್ತಿ ಪತ್ರ ಮತ್ತು ಮೆಡಲ್ ನೀಡಿ ಸತ್ಕರಿಸಿ, ಅಭಿನಂದಿಸಿದರು.
ತಾಲೂಕು ದೈಹಿಕ ಶಿಕ್ಷಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.