ರಕ್ತದಲ್ಲಿ ಅಟಲ್ಜೀ ಭಾವಚಿತ್ರ ಬಿಡಿಸಿ ಶ್ರದ್ಧಾಂಜಲಿ


ಜಮಖಂಡಿ 17: ಅಜಾತಶತ್ರು, ಶಿಕ್ಷಣ ಪ್ರೇಮಿ ಅಟಲ್ ಬಿಹಾರಿ ವಾಜಪೇಯಿಯವರ ಭಾವಚಿತ್ರವನ್ನು ತಮ್ಮ ರಕ್ತದಲ್ಲಿ ಬಿಡಿಸಿ ವಿಭಿನ್ನ ರೀತಿಯಲ್ಲಿ ಕಲಾ ಶಿಕ್ಷಕರೊಬ್ಬರು ಶ್ರದ್ಧಾಂಜಲಿ ಅಪರ್ಿಸಿದ್ದಾರೆ. 

ತಾಲೂಕಿನ ತುಬಚಿ ಗ್ರಾಮದ ಸಕರ್ಾರಿ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ರಕ್ತ ಕಲಾವಿದರೆಂದೇ ಹೆಸರುವಾಸಿಯಾಗಿದ್ದಾರೆ. ಡಾ. ಸಂಗಮೇಶ ಬಗಲಿ ನಗರದಲ್ಲಿರುವ ತಮ್ಮ ಸಂಗಮೇಶ ಆಟರ್್ ಗ್ಯಾಲರಿಯಲ್ಲಿ ತಮ್ಮ ರಕ್ತದಿಂದ ದಿ. ಅಟಲ್ ಜೀ ಅವರ ಭಾವಚಿತ್ರ ಬಿಡಿಸಿದ್ದಾರೆ. 

ಭಾವಚಿತ್ರ ಬಿಡಿಸಿ ನಂತರ ಮಾತನಾಡಿದ ಅವರು, ಅಟಲ್ ಜೀಯವರ ಶಿಕ್ಷಣ ಪ್ರೇಮದಿಂದ ಇಂದು ಇಡೀ ರಾಷ್ಟ್ರದಲ್ಲಿನ ಶಾಲೆಗಳು ಹೊಸ ಕಟ್ಟಡ ಪಡೆದು ನಳ-ನಳಿಸುತ್ತಿರಲು ಕಾರಣವಾಗಿದೆ. ಅಟಲ್ರವರ ಕಲ್ಪನೆಯ ಕೂಸು ಸರ್ವ ಶಿಕ್ಷಣ ಅಭಿಯಾನ. ಇವರು ಪ್ರಧಾನಿಯಾಗುವದಕ್ಕಿಂತಲೂ ಪೂರ್ವದಲ್ಲಿ ಶಾಲೆಯ ಕಟ್ಟಡಗಳ ಪರಿಸ್ಥಿತಿ ಅಧೋಗತಿಯಲ್ಲಿದ್ದವು. ಮುರುಕಲು ಜೋಪಡಿಗಳು ಮಕ್ಕಳು ಕಲಿಯುವ ಪಾಠ ಶಾಲೆಯ ಕೋಣೆಗಳಾಗಿದ್ದವು. ಇದನ್ನು ಅರಿತ ಶಿಕ್ಷಣ ಪ್ರೇಮಿ ಅಟಲ್ ಜೀ ದೇಶದ ಪ್ರಧಾನಿಯಾದ ನಂತರ ನಮ್ಮ ಸಕರ್ಾರಿ ಶಾಲೆಗಳಿಗೆ ಹೊಸ ಕಟ್ಟಡಗಳನ್ನು ನೀಡಿದ್ದಾರೆ. ಮಕ್ಕಳಿಗೆ ಖುಷಿಯಿಂದ ಪಾಠ ಕಲಿಯಲು ಹೊಸ ವಾತಾವರಣ ಕಲ್ಪಿಸಿಕೊಟ್ಟ ಶಿಕ್ಷಣ ಪ್ರೇಮಿಗೆ ಇಡೀ ದೇಶದ ಶಿಕ್ಷಕರು ಹಾಗೂ ಸಕರ್ಾರಿ ಶಾಲೆಯ ಮಕ್ಕಳ ಪರವಾಗಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ ಎಂದರು.