ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ ಕ್ಯಾನ್ಸರ: ಡಾ. ಉಮೇಶ ಮಹಾಂತಶೆಟ್ಟಿ

Cancer is spreading like an epidemic: Dr. Umesh Mahantashetty

ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ ಕ್ಯಾನ್ಸರ: ಡಾ. ಉಮೇಶ ಮಹಾಂತಶೆಟ್ಟಿ 

ಬೆಳಗಾವಿ 12: ಕ್ಯಾನ್ಸರ ಜಗತ್ತಿನ ಯಾವುದೇ ದೇಶವನ್ನು ಬಿಟ್ಟಿಲ್ಲ. ಇದೊಂದು ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ. ವಿಶ್ವದ ಜನಸಂಖ್ಯೆ 9 ಬಿಲಿಯನ್ ಇದ್ದು, ವರ್ಷಕ್ಕೆ ಶೇ. 20ರಷ್ಟು ಕ್ಯಾನ್ಸರ ರೋಗಿಗಳು ಕಂಡುಬರುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಇಂದು ಶೇ. 50ರಷ್ಟು ಇದೆ. ಭಾರತ ಮತ್ತು ಇತರ ದೇಶಗಳಲ್ಲಿಯೂ ಕೂಡ ಅದೇ ಪರಿಸ್ಥಿತಿ ಇದ್ದು, ಅದರಲ್ಲಿಯೂ ಮುಖ್ಯವಾಗಿ  ಭಾರತದಲ್ಲಿ ಹೆಚ್ಚು ರೋಗಿಗಳು ಕ್ಯಾನ್ಸರನಿಂದ ಬಳಲುತ್ತಿದ್ದಾರೆ.  ಸರಿಯಾದ ಸಮಯಕ್ಕೆ ತಪಾಸಣೆಗೊಳ್ಪಡದ ಕಾರಣ ಉಲ್ಬಣಗೊಂಡ ಅಥವಾ ಮೆಟಾಸ್ಟಾಟಿಕ್ ಕಾಯಿಲೆಗಳು ಪತ್ತೆಯಾಗುತ್ತಿವೆ. ಆದರೆ ಚಿಕಿತ್ಸೆ ದುಬಾರಿಯಾಗಿ ಪರಿಣಮಿಸುತ್ತಿದೆ ಎಂದು ವಿಶಾಖಪಟ್ಟಣಮನ ಹೊಮಿ ಬಾಬಾ ಕ್ಯಾನ್ಸರ ಆಸ್ಪತ್ರೆ ಹಾಗೂ ರಿಸರ್ಚನ ನಿರ್ದೇಶಕ ಡಾ. ಉಮೇಶ ಮಹಾಂತಶೆಟ್ಟಿ ಅವರಿಂದಿಲ್ಲಿ ಹೇಳಿದರು.   

ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ವೈಜ್ಞಾನಿಕ ಸಂಸ್ಥೆಯ 43ನೇ ಮುಂದುವರೆದ ವೈದ್ಯಕೀಯ ಶಿಕ್ಷಣ (ಸಿಎಂಇ) ದಿ. 12ರಂದು ಏರಿ​‍್ಡಸಲಾದ ಡಿಫಾಯಿಂಗ ಕ್ಯಾನ್ಸರ ಎಂಪಾವರಮೆಂಟ ಆಫ್ ಲೈವ್ಸ್‌ ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನಕ್ಕಿಂತ ಮುಖ್ಯವಾಗಿ ಅದನ್ನು ಉಪಯೋಗಿಸುವ ಕೈಗಳು ಅದ್ಭುತಗಳನ್ನು ಸೃಷ್ಠಿಸಬಹುದು.  ಈ ಪ್ರದೇಶದ ಪ್ರತಿಯೊಬ್ಬ ಕ್ಯಾನ್ಸರ್ ರೋಗಿಗೂ ಕೈಗೆಟುಕುವ ದರದಲ್ಲಿ ಲಭ್ಯವಿರುವ ತಂತ್ರಜ್ಞಾನದೊಂದಿಗೆ ಗುಣಮಟ್ಟದ ಚಿಕಿತ್ಸೆಯನ್ನು ಕಲ್ಪಿಸಿ ಎಂದ ಅವರು, ಚಿಕಿತ್ಸೆ ಪಡೆಯುವಲ್ಲಿ ವಿಳಂಭ ಮಾಡುತ್ತಿರುವದು ಸಾವು ಹೆಚ್ಚದಾಗಲು ಕಾರಣ. ಕ್ಯಾನ್ಸರನ್ನು ಗುಣಪಡಿಸಬಹುದು. ಅದು ಬಹುಬೇಗ ಕಂಡು ಬರುತ್ತದೆ. ಕ್ಯಾನ್ಸರ ಪತ್ತೆ ಮಾಡಲು ವಿಳಂಬವಾಗುತ್ತಿರುವ ಕಾರಣ ಸಾವು ಅಧಿಕಗೊಳ್ಳುತ್ತಿವೆ. ಸರಿಯಾದ ಚಿಕಿತ್ಸೆ ನೀಡಿ ಸಾವು ಕಡಿಮೆ ಮಾಡಲು ಕಾರ್ಯಚಟುವಟಿಕೆ ತೀವ್ರಗೊಳಿಸಬೇಕಾಗಿದೆ ಎಂದು ಸಲಹೆವಿತ್ತರು.  

ಕಾಹೆರನ ಉಪಕುಲಪತಿ ಡಾ. ನಿತಿನ ಗಂಗಣೆ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕಾರ್ಯಾಗಾರಗಳು, ಸಾಮಾಜಿಕ ಮಾದ್ಯಮಗಳ ಮೂಲಕ ಬೋಧನೆಗೆ ಅನುಕೂಲ ಕಲ್ಪಿಸಬೇಕು. ಸ್ನಾತ್ತಕೋತ್ತರ ವಿದ್ಯಾರ್ಥಿಗಳನ್ನೋಳಗೊಂಡ ಸಂಶೋಧನಾ ಕಾರ್ಯ ನಿರಂತರವಾಗಿರಬೇಕು. ಕಾಹೆರನಲ್ಲಿ ಅನೇಕ ಸಂಶೋಧನಾ ಪ್ರೊಜೆಕ್ಟಗಳಿವೆ. ಅಲ್ಲದೇ ನಮ್ಮದೇ ಇನ್ಕ್ಯುಬೇಟರ ಇದ್ದು ವೈದ್ಯಕೀಯ ಆಧಾರಿತ ನವೋದ್ಯಮದಲ್ಲಿ ನಿರಂತರವಾಗಿ ಕಾರ್ಯಚಟುವಟಿಕೆಗಳಿಂದ ಯಶಸ್ವಿಗೊಳ್ಳಬೇಕೆಂದು ಕರೆ ನೀಡಿದರು.  

ಯುಎಸ್ ಎಂ ಕೆಎಲ್ ಇ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು ಮಾತನಾಡಿ, ಇಂದು ಕಲಿಸುವವರು ಕಲಿಯುತ್ತಿಲ್ಲ. ಅತ್ಯಂತ ಕಠಿಣವಾದ ವಿಭಾಗ ಕ್ಯಾನ್ಸರ. 43 ವರ್ಷಗಳ ಹಿಂದೆ ಕೇವಲ ಕೆಎಲ್‌ಇ ವೈದ್ಯರಿಗೆ ತರಬೇತಿ ನೀಡುವದಕ್ಕಾಗಿ ಕಾರ್ಯಗಾರಗಳನ್ನು ಏರಿ​‍್ಡಸಲಾಗುತ್ತಿತ್ತು.  ಅದರಂತೆ ಪ್ರೈಮರಿ ವೈದ್ಯರಿಗೆ ತರಬೇತಿ ನೀಡಲು ಯೋಚಿಸಿ. ವೈದ್ಯ ವಿಜ್ಞಾನದಲ್ಲಿ ತಂತ್ರಜ್ಞಾನ, ಮಾಹಿತಿ, ನೀತಿ ನಿರುಪಣೆ ಎಲ್ಲವೂ ಬದಲಾಗಿದೆ. 50 ವರ್ಷಗಳ ಹಿಂದೆ ಕ್ಯಾನ್ಸರ ಅಂದರೆ ಕೇವಲ ಸಾವು ಎಂದು ಬತಿಳಿಯಲಾಗಿತ್ತು. ಆದರೆ ಇಂದು ಅದನ್ನು ಗುಣಪಡಿಸುವದು ಸಾಧ್ಯ ಎಂಬುದನ್ನು ವೈದ್ಯ ವಿಜ್ಞಾನ ಸಾಬೀತು ಪಡಿಸಿದೆ ಎಂದು ಹೇಳಿದರು.  

ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ. ಉಮೇಶ ಮಹಾಂತಶೆಟ್ಟಿ ಅವರನ್ನು ಸತ್ಕರಿಸಲಾಯಿತು. ವೇದಿಕೆ ಮೇಲೆ ಉಪಪ್ರಾಚಾರ್ಯರಾದ ಡಾ. ರಾಜೇಶ ಪವಾರ, ಡಾ. ವಿ ಎಂ ಪಟ್ಟಣಶೆಟ್ಟಿ, ಡಾ. ಆರಿಫ್ ಮಾಲ್ದಾರ, ಡಾ. ಆರತಿ ಭೊಸ್ಲೆ ಡಾ. ರವಿ ಇಂಚಲಕರಂಜಿ ಉಪಸ್ಥಿರಿದ್ದರು. ಕ್ಯಾನ್ಸರ ಹಿರಿಯ ಶಸ್ತ್ರಚಿಕಿತ್ಸಕರಾದ ಡಾ. ಕುಮಾರ ವಿಂಚುರಕರ ಸ್ವಾಗತಿಸಿದರು. ಡಾ. ಆರ್ ಎಸ್ ಕಾಜಗಾರ ಅವರು ವಂದಿಸಿದರು. ಸುನಿತಾ ಪಾಟೀಲ ಹಾಗೂ ಅವರ ತಂಡ ಪ್ರಾರ್ಥಿಸಿದರು. ಡಾ. ಶೀತಲ ಪಟ್ಟಣಶೆಟ್ಟಿ ಹಾಗೂ ಡಾ. ಸೌಮ್ಯಾ ಮಾಸ್ತೆ ಅವರು ನಿರೂಪಿಸಿದರು.