ಏ, 15 ರಿಂದ 30 ವರಗೆ ವಚನ ಜಾತ್ರಾ ಮಹೋತ್ಸವ
ಜಮಖಂಡಿ 12: 12 ನೇ ಶತಮಾನದಲ್ಲಿ ಹುಟ್ಟಿರುವ ಮಠ ಓಲೇಮಠವಾಗಿದೆ. ಬಸವಾದಿ ಶರಣರು, ಶಿವಯೋಗಿ ಶರಣರು ನಡೆದಾಡಿದ ನೆಲವಾಗಿದೆ. ಇಂತಹ ಮಠದಲ್ಲಿ ವಚನ ಜಾತ್ರಾ ಮಹೋತ್ಸವ ಏ, 15 ರಿಂದ 30 ವರಗೆ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಮಠದ ಪೀಠಾಧಿಕಾರಿಗಳಾದ ಆನಂದ ದೇವರು ಹೇಳಿದರು.
ನಗರದ ಓಲೇಮಠದ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕ ವಯಸ್ಸಿನ ಮಕ್ಕಳು ದುಶ್ಚಟಗಳನ್ನು ಮಾಡುತ್ತಿದ್ದಾರೆ. ಸ್ಮಾರಕವಾಗಿ ಬೆಳಯಬೇಕಾದ ಯುವಕರು ಮಾರಕವಾಗಿ ಬೆಳೆಯುತ್ತಿದ್ದಾರೆ. ನಗರದ ಪ್ರತಿ ವಾರ್ಡಗಳಲ್ಲಿ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ಭಿಕ್ಷೆ, ರುದ್ರಾಕ್ಷಿ ಧಾರಣ ಸದ್ಬಾವನ ಪಾದಯಾತ್ರೆ ಮಾಡಲಾಗುತ್ತದೆ ಎಂದರು.
ಏ, 16 ರಿಂದ 29 ವರಗೆ ಬಸವ ಜಯಂತಿ ನಿಮಿತ್ತ ಶರಣರ ವಚನ ಪ್ರವಚನ ಪ್ರತಿದಿನ ಸಂಜೆ 6-30 ಕ್ಕೆ ನಡೆಯುವುದು. ಹಾಗೂ ನಗರದ ಪ್ರತಿ ವಾರ್ಡಗಳಲ್ಲಿ ಬೆಳಗ್ಗೆ 6 ಗಂಟೆಯಿಂದ 9 ಗಂಟೆಗೆವರೆಗೆ ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಹಾಗೂ ರುದ್ರಾಕ್ಷಿ ಧಾರಣ ಸದ್ಬಾವನ ಪಾದಯಾತ್ರೆ ಮಾಡಲಾಗುತ್ತದೆ. ಏ, 29 ರಂದು ಸಂಜೆ 6-30 ಕ್ಕೆ ಶರಣರ ವಚನ ಪ್ರವಚನ ಮಹಾಮಂಗಲ ಜರುಗುವುದು. 28 ರಂದು ಮಕ್ಕಳಿಂದ ತಂದೆ, ತಾಯಿಗಳ ಪಾದಪೂಜೆಯನ್ನು ನಡೆಯುತ್ತದೆ. 30 ರಂದು ಬೆಳಗ್ಗೆ 8 ಗಂಟೆಗೆ ಜಗಜ್ಯೋತಿ ಬಸವೇಶ್ವರ ಭಾವಚಿತ್ರದ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ವಚನದ ಪುಸ್ತಕವನ್ನು ತಲೆ ಮೇಲೆ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿವರು. ಸಂಜೆ 5 ಗಂಟೆಗೆ ಬಸವ ಜಯಂತಿ ನಿಮಿತ್ತ ಭವ್ಯ ರಥೋತ್ಸವ ಸಾಯಂಕಾಲ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಬವರಾಜ ಬಳಗಾರ, ಬಸವರಾಜ ಸಿದ್ದಗೀರಿಮಠ, ಎಸ್,ವಾಯ್, ಪಾಟೀಲ ಮಾತನಾಡಿದರು. ಶ್ರೀಶೈಲ ಗೊಂಗನ್ನವರ, ಸದಾನಂದ ಬಾಗೇವಾಡಿ, ಮಲ್ಲು ಮುದ್ದಕನ್ನವರ, ಎಮ್,ಕೆ,ಹಿಟ್ಟಿಮಠ, ಸಿದ್ದಯ್ಯ ಕಲ್ಲಕತ್ತಿಮಠ, ಸದು ನ್ಯಾಮಗೌಡ, ಮಹೇಶ ಕಲಕತ್ತಿಮಠ, ರಾಚಯ್ಯ ಮಠಪತಿ, ಶ್ರೀಕಾಂತ ನ್ಯಾಮಗೌಡ, ನಿಂಗನಗೌಡ ಪಾಟೀಲ, ಮಲ್ಲಪ್ಪ ದೇಸಾಯಿ, ಶಿವಾನಂದ ಕೊಣ್ಣೂರ ಸೇರಿದಂತೆ ಕಡಕೋಳ, ಕಂಕಣವಾಡಿ, ಹುನ್ನೂರ ಗ್ರಾಮಸ್ಥರು ಸುದ್ದಿಗೋಷ್ಠಿಯಲ್ಲಿ ಇದ್ದರು. ಓಲೇಮಠದ ವಚನ ಜಾತ್ರಾ ಮೋಹೋತ್ಸವದ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆಗೊಳಿಸಿದರು.