ಹಾರೂಗೇರಿಯಲ್ಲಿ ಮಾರುತಿ ದೇವರ ಭವ್ಯ ರಥೋತ್ಸವ
ಹಾರೂಗೇರಿ 12 : ಹಾರೂಗೇರಿ ಗ್ರಾಮದೇವರ ಮಾರುತಿ ಜಯಂತಿ ಉತ್ಸವ ನಿಮಿತ್ತ ಶನಿವಾರ ಸಂಜೆ ಸಾವಿರಾರು ಭಕ್ತಾಧಿಗಳ ಹರ್ಷೋದ್ಘಾರದ ಮದ್ಯೆ 25 ಅಡಿ ಎತ್ತರದ ಭವ್ಯ ರಥೋತ್ಸವ ನಡೆಯಿತು.
ಮಂದಿರದ ಪೂಜಾರಿಗಳು ರಥದಲ್ಲಿನ ಮಾರುತಿ ದೇವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಜೈಶ್ರೀರಾಮ, ಜೈ ಹನುಮಾನಜೀ ಎಂಬ ಮಂತ್ರ ಘೋಷಗಳೊಂದಿಗೆ ಮಾರುತಿ ದೇವಸ್ಥಾನದಿಂದ ರಾಮಲಿಂಗೇಶ್ವರ ದೇವಸ್ಥಾನ, ಬಸ್‌ನಿಲ್ದಾಣ ಮಾರ್ಗವಾಗಿ ಮುಖ್ಯರಸ್ತೆ ಮೂಲಕ ಶಂಕರಬಾವಿವರೆಗೆ ಮಾರುತಿ ದೇವರ ಮೂರ್ತಿಯನ್ನು ಹೊತ್ತ ರಥ ಗಾಂಭೀರ್ಯದಿಂದ ಸಾಗಿತು. ರಥ ಸಾಗುವಾಗ ಭಕ್ತಾಧಿಗಳು ಶ್ರೀರಾಮ ಭಕ್ತ ಹನುಮಂತನ ಜೈಕಾರ ಕೂಗುತ್ತ ಖಾರಿಕ್, ಬೇತ್ತಾಸ್, ಹೂವು, ಹಣ್ಣು-ಹಂಪಲು, ಕಾಯಿ, ಮುತ್ತುಗಳನ್ನು ಹಾರಿಸಿದರು. ಜಾಂಜ್ ಹಾಗೂ ಸಕಲ ವಾಧ್ಯಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ ಶ್ರೀ ಮಾರುತಿ ದೇವರ ಪಲ್ಲಕ್ಕಿ ಉತ್ಸವ, ಮಹಾಪೂಜೆ, ಅಭಿಷೇಕ ನೇರವೇರಿಸಲಾಯಿತು. ನಸುಕಿನಲ್ಲಿ ನೂರಾರು ಭಕ್ತಾಧಿಗಳು ಮಾರುತಿ ದೇವರಿಗೆ ಹರಕೆ ಹೊತ್ತು ಉರುಳು ಸೇವೆ ಸಮರ್ಿಸಿದರು. ಶನಿವಾರ ಭಕ್ತಾಧಿಗಳು ಎತ್ತಿನ ಗಾಡಿ ಮತ್ತು ಟ್ರ್ಯಾಕ್ಟರ್ ಮೂಲಕ ಕೊಂಡದಲ್ಲಿ ನೀರನ್ನು ತುಂಬಿದರು. ಮಧ್ಯಾಹ್ನ ಖ್ಯಾತ ನರರೋಗ ತಜ್ಞ ಡಾ.ರವಿ ಇಂಚಲಕರಂಜಿ ಅವರು ಭಕ್ತಾಧಿಗಳಿಗೆ ಮಹಾಪ್ರಸಾದ ಸೇವೆ ಸಲ್ಲಿಸಿದರು. ಸಂಜೆ ನಡುಓಕಳಿ (ನೀರೋಕಳಿ) ನಡೆಯಿತು.
ಗ್ರಾಮ ದೇವರ ಮಾರುತಿ ಜಯಂತಿ ಉತ್ಸವ ನಿಮಿತ್ತ ಗುರುವಾರ ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಯಿತು. ಸಂಜೆ ಪೂಜಾರಿಗಳು ಮತ್ತು ಮುಖಂಡರಿಂದ ಕೊಂಡಪೂಜೆ ಹಾಗೂ ಶ್ರೀ ಮಾರುತಿ ದೇವರ ಪಲ್ಲಕ್ಕಿ ಉತ್ಸವ ನಡೆಯಿತು. ರಾತ್ರಿ ಚಂದ್ರಕಾಂತ ಬಾಳಿಗೇರಿ ಹಾಗೂ ಯಲ್ಲವ್ವ ಕುಳ್ಳೂರ ಇವರಿಂದ ಗೀಗೀ (ಶಾವರಕಿ) ಪದಗಳು ನಡೆದವು. ಶನಿವಾರ ರಾತ್ರಿ ಶಿವಾನಂದ ಸವದಿ ಅವರಿಂದ ಶ್ರೀ ಕೃಷ್ಣ ಪಾರಿಜಾತ ಏರಿ್ಡಸಲಾಯಿತು.