ಕೂಲಿ ಕಾರ್ಮಿಕರಿಗೆ ಕೂಲಿ ಕೆಲಸಕ್ಕೆ ನರೇಗಾ ಬಲ

NREGA forces wage laborers to work for wages

ಕೂಲಿ ಕಾರ್ಮಿಕರಿಗೆ ಕೂಲಿ ಕೆಲಸಕ್ಕೆ ನರೇಗಾ ಬಲ 

ಬ್ಯಾಡಗಿ  4:       ಏಪ್ರಿಲ್ 1 ರಿಂದ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ಕೂಲಿ ಕೆಲಸಕ್ಕೆ ನಮೂನೆ 6 ರಲ್ಲಿ ಅರ್ಜಿ ಸಲ್ಲಿಸಿದರೆ ನರೇಗಾ ಯೋಜನೆ ಅಡಿ ಕೂಲಿ ಕೆಲಸ ನೀಡಲಾಗುವುದು  ಕೂಲಿ ಕಾರ್ಮಿಕರಿಗೆ ಕೂಲಿ ಕೆಲಸಕ್ಕೆ ನರೇಗಾ ಬಲ ನೀಡಿದೆ ಎಂದು ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಕೆ ಎಮ್ ಮಲ್ಲಿಕಾರ್ಜುನ ಕರೆ ನೀಡಿದರು.        ಅವರು ತಾಲೂಕಿನ ಇಂದು ಬೆಳಿಗ್ಗೆ 10 ಗಂಟೆಗೆ ಘಾಳಪೂಜಿ ಮತ್ತು ಚಿಕ್ಕ ಬಾಸೂರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಕೂಲಿ ಕಾರ್ಮಿಕರು ಕೂಲಿ ಕೆಲಸಕ್ಕೆ ನಮೂನೆ 6 ರಲ್ಲಿ ಅರ್ಜಿ ಸಲ್ಲಿಸಿದ ಕೂಲಿ ಕಾರ್ಮಿಕರು ಕೂಲಿ ಕೆಲಸ ಮಾಡುತ್ತಿರುವ ಕಾಮಗಾರಿಯನ್ನು ವೀಕ್ಷಣೆ ಮಾಡಿ ಮಾತನಾಡುತ್ತ ಯಾರೂ ಕೂಲಿ ಕೆಲಸವಿಲ್ಲವೆಂದು ವಲಸೆ ಹೋಗಬೇಡಿ ಸ್ಥಳೀಯವಾಗಿಯೇ ನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿ ಮೂಲಕ ಕೂಲಿ ಕೆಲಸ ನೀಡಲಾಗುವುದು ಎಂದು ತಿಳಿಸಿದರು.     

           ಅವರು ಮುಂದುವರೆದು ಮಾತನಾಡುತ್ತ ಏಪ್ರಿಲ್ 1 ರಿಂದ ಕೂಲಿ ವೇತನ ದಿನಕ್ಕೆ ಗಂಡು ಹೆಣ್ಣಿಗೆ ಸಮನಾಗಿ 370 ರೂಗಳಾಗಿದ್ದು ಏಪ್ರಿಲ್, ಮೇ ಮತ್ತು ಜೂನ್ ಈ 3 ತಿಂಗಳ ಬೇಸಿಗೆ ಅವಧಿಯಲ್ಲಿ ಪ್ರತಿಯೊಂದು ಕುಟುಂಬ 100 ದಿನ ಕೂಲಿ ಕೆಲಸ ಮಾಡಿದರೆ ಪ್ರತಿ ಕುಟುಂಬಕ್ಕೆ ನರೇಗಾ ಯೋಜನೆಯಡಿ ಒಟ್ಟು 37000 ಕೂಲಿ ಪಡೆಯಲು ಸಾಧ್ಯ ಎಂದು ತಿಳಿಸಿದರು.ಇ ಸಂದರ್ಭದಲ್ಲಿ ಚಿಕ್ಕಬಾಸುರ ಠಿಜಠ ಅವರಾದ ಗೋಪಾಲಸ್ವಾಮಿ ಹಾಗೂ ಘಾಳಪೂಜಿ ಗ್ರಾಮ ಪಂಚಾಯತಿ ಠಿಜಠ ಅವರಾದ ಗೌಸಮುದ್ದಿನ ತಹಶೀಲ್ದಾರ್  ತಾಂತ್ರಿಕ ಸಂಯೋಜಕರಾದ ಸಂತೋಷ್ ನಾಯ್ಕ್‌ ಜಛಿ ಸಂಯೋಜಕರಾದ ಅಕ್ಷಯ್ ತಾಂತ್ರಿಕ ಸಹಾಯಕರಾದ  ಹಾಳಪ್ಪ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮೆಟಿಗಳು ಕೊಲಿ ಕಾರ್ಮಿಕರು ಉಪಸ್ಥಿತರಿದ್ದರು..