ಕೂಲಿ ಕಾರ್ಮಿಕರಿಗೆ ಕೂಲಿ ಕೆಲಸಕ್ಕೆ ನರೇಗಾ ಬಲ
NREGA forces wage laborers to work for wages
ಕೂಲಿ ಕಾರ್ಮಿಕರಿಗೆ ಕೂಲಿ ಕೆಲಸಕ್ಕೆ ನರೇಗಾ ಬಲ
ಬ್ಯಾಡಗಿ 4: ಏಪ್ರಿಲ್ 1 ರಿಂದ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ಕೂಲಿ ಕೆಲಸಕ್ಕೆ ನಮೂನೆ 6 ರಲ್ಲಿ ಅರ್ಜಿ ಸಲ್ಲಿಸಿದರೆ ನರೇಗಾ ಯೋಜನೆ ಅಡಿ ಕೂಲಿ ಕೆಲಸ ನೀಡಲಾಗುವುದು ಕೂಲಿ ಕಾರ್ಮಿಕರಿಗೆ ಕೂಲಿ ಕೆಲಸಕ್ಕೆ ನರೇಗಾ ಬಲ ನೀಡಿದೆ ಎಂದು ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಕೆ ಎಮ್ ಮಲ್ಲಿಕಾರ್ಜುನ ಕರೆ ನೀಡಿದರು. ಅವರು ತಾಲೂಕಿನ ಇಂದು ಬೆಳಿಗ್ಗೆ 10 ಗಂಟೆಗೆ ಘಾಳಪೂಜಿ ಮತ್ತು ಚಿಕ್ಕ ಬಾಸೂರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಕೂಲಿ ಕಾರ್ಮಿಕರು ಕೂಲಿ ಕೆಲಸಕ್ಕೆ ನಮೂನೆ 6 ರಲ್ಲಿ ಅರ್ಜಿ ಸಲ್ಲಿಸಿದ ಕೂಲಿ ಕಾರ್ಮಿಕರು ಕೂಲಿ ಕೆಲಸ ಮಾಡುತ್ತಿರುವ ಕಾಮಗಾರಿಯನ್ನು ವೀಕ್ಷಣೆ ಮಾಡಿ ಮಾತನಾಡುತ್ತ ಯಾರೂ ಕೂಲಿ ಕೆಲಸವಿಲ್ಲವೆಂದು ವಲಸೆ ಹೋಗಬೇಡಿ ಸ್ಥಳೀಯವಾಗಿಯೇ ನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿ ಮೂಲಕ ಕೂಲಿ ಕೆಲಸ ನೀಡಲಾಗುವುದು ಎಂದು ತಿಳಿಸಿದರು.
ಅವರು ಮುಂದುವರೆದು ಮಾತನಾಡುತ್ತ ಏಪ್ರಿಲ್ 1 ರಿಂದ ಕೂಲಿ ವೇತನ ದಿನಕ್ಕೆ ಗಂಡು ಹೆಣ್ಣಿಗೆ ಸಮನಾಗಿ 370 ರೂಗಳಾಗಿದ್ದು ಏಪ್ರಿಲ್, ಮೇ ಮತ್ತು ಜೂನ್ ಈ 3 ತಿಂಗಳ ಬೇಸಿಗೆ ಅವಧಿಯಲ್ಲಿ ಪ್ರತಿಯೊಂದು ಕುಟುಂಬ 100 ದಿನ ಕೂಲಿ ಕೆಲಸ ಮಾಡಿದರೆ ಪ್ರತಿ ಕುಟುಂಬಕ್ಕೆ ನರೇಗಾ ಯೋಜನೆಯಡಿ ಒಟ್ಟು 37000 ಕೂಲಿ ಪಡೆಯಲು ಸಾಧ್ಯ ಎಂದು ತಿಳಿಸಿದರು.ಇ ಸಂದರ್ಭದಲ್ಲಿ ಚಿಕ್ಕಬಾಸುರ ಠಿಜಠ ಅವರಾದ ಗೋಪಾಲಸ್ವಾಮಿ ಹಾಗೂ ಘಾಳಪೂಜಿ ಗ್ರಾಮ ಪಂಚಾಯತಿ ಠಿಜಠ ಅವರಾದ ಗೌಸಮುದ್ದಿನ ತಹಶೀಲ್ದಾರ್ ತಾಂತ್ರಿಕ ಸಂಯೋಜಕರಾದ ಸಂತೋಷ್ ನಾಯ್ಕ್ ಜಛಿ ಸಂಯೋಜಕರಾದ ಅಕ್ಷಯ್ ತಾಂತ್ರಿಕ ಸಹಾಯಕರಾದ ಹಾಳಪ್ಪ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮೆಟಿಗಳು ಕೊಲಿ ಕಾರ್ಮಿಕರು ಉಪಸ್ಥಿತರಿದ್ದರು..
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 