ಸಹಕಾರಿ ಸಂಘಕ್ಕೆ ಕರಿಬಸಪ್ಪ ಕಾತ್ರೀಕಿ ಆಯ್ಕೆ
ಹೂವಿನಹಡಗಲಿ 24 : ತಾಲೂಕಿನ ಹೊಳಗುಂದಿ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅದ್ಯಕ್ಷ ಕರಿಬಸವರಾಜ ಕಾತ್ರೀಕಿ. ಉಪಾದ್ಯಕ್ಷೆ ಎನ್.ಎಸ್.ಸುಮಂಗಲ ಶುಕ್ರವಾರ ಚುನಾಯಿತರಾಗಿದ್ದಾರೆಒಟ್ಟು 12 ಸದಸ್ಯರಿದ್ದು . ಅದ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕರಿಬಸವರಾಜ ಕಾತ್ರೀಕಿ ಮತ್ತು ಕಾಂಗ್ರೆಸ್ ಚಾವಡಿ ಗುಡದೀರ್ಪ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಕರಿಬಸಪ್ಪ ಕಾತ್ರೀಕಿ 8ಮತಗಳು ಪಡೆದು ವಿಜಯಿಯಾದರೆ.5ಮತಗಳು ಪಡೆದ ಗುಡದೀರ್ಪ ಸೋತರು. ಉಪಾಧ್ಯಕ್ಷ ಸ್ಥಾನಕ್ಕೆ ಎನ್.ಎಸ್.ಸುಮಂಗಲ ಹಾಗೂ ಮೃತ್ಯುಂಜಯ ನಾಮಪತ್ರ ಸಲ್ಲಿಸಿದ್ದು 8 ಮತ ಪಡೆದ ಸುಮಂಗಲ ವಿಜಯಿಯಾದರೆ, 5 ಮತ ಪಡೆದ ಮೃತ್ಯುಂಜಯ ಸೋತರು. ಚುನಾವಣಾಧಿಕಾರಿಯಾಗಿ ಪವನ್ ಕುಮಾರ ಕಾರ್ಯ ನಿರ್ವಹಿಸಿದರು .ನಂತರ ಎಲ್ಲಾ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಇದೇ ವೇಳೆ ಸಹಕಾರ ಸಂಘದ ಕಾರ್ಯ ದರ್ಶಿ ವೀರೇಶ್. ಗ್ರಾ.ಪಂ.ಅದ್ಯಕ್ಷ .ದಡಾರ್ಪ. ಬಿಜೆಪಿ ಇಟ್ಟಗಿ ಹೋಬಳಿ ಅದ್ಯಕ್ಷ ಹೆಚ್.ಕರಿಬಸಪ್ಪ.ಮುಖಂಡರಾದ ಮುದೇಗೌಡ್ರ್ರಕಾಶ. ಬಾಷಾ ಬಾವಿಹಳ್ಳಿ. ಮುದಿಮಲ್ಲಪ್ಪ.ಬಿ.ಮಲ್ಲಿಕಾರ್ಜುನ.ಹೆಚ್.ಕೊಟ್ರಬಸಪ್ಪ. ಹಾವನೂರು ರಾಜ.ಪೂಜಾರ ಸಿದ್ದೇಶ. ಟಿ.ಕೊಟ್ರೇಶ.