ವಾಷಿಂಗ್ಟನ್ 24: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭರವಸೆಯ ಸಾಮೂಹಿಕ ಗಡಿಪಾರು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ನೂರಾರು ವಲಸಿಗರನ್ನು ಗುರುವಾರ ಬಂಧಿಸಲಾಯಿತು ಮತ್ತು ಇತರರನ್ನು ಮಿಲಿಟರಿ ವಿಮಾನಗಳ ಮೂಲಕ ದೇಶದಿಂದ ಹೊರಗೆ ಕಳುಹಿಸಲಾಯಿತು ಎಂದು ಶ್ವೇತಭವನ ತಿಳಿಸಿದೆ.
ಟ್ರಂಪ್ ಅವರು ಎರಡನೇ ಬಾರಿ ಅಧಿಕಾರಕ್ಕೆ ಮರಳಿದ ನಂತರ ಮೊದಲ ಪ್ರವಾಸದಲ್ಲಿ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿರುವ ಕ್ಯಾಲಿಫೋರ್ನಿಯಾ ಮತ್ತು ಉತ್ತರ ಕೆರೊಲಿನಾಗೆ ಶುಕ್ರವಾರ ತೆರಳಲು ಸಿದ್ಧರಾಗುತ್ತಿದ್ದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಟ್ರಂಪ್ ಆಡಳಿತವು ಗುರುವಾರ 538 ಅಕ್ರಮ ವಲಸೆ ಅಪರಾಧಿಗಳನ್ನು ಬಂಧಿಸಿದೆ ಮತ್ತು ನೂರಾರು ಜನರನ್ನು ಮಿಲಿಟರಿ ವಿಮಾನಗಳ ಮೂಲಕ ಗಡಿಪಾರು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಗುರುವಾರ, ನ್ಯೂಜೆರ್ಸಿಯ ನ್ಯೂವಾರ್ಕ್ ನಗರದ ಡೆಮಾಕ್ರಟಿಕ್ ಮೇಯರ್ ರಾಸ್ ಬರಾಕಾ ಅವರು, ವಲಸೆ ಮತ್ತು ಕಸ್ಟಮ್ಸ್ ಜಾರಿ ಏಜೆಂಟ್‌ಗಳು "ಸ್ಥಳೀಯ ಸಂಸ್ಥೆಯ ಮೇಲೆ ದಾಳಿ ನಡೆಸಿದ್ದಾರೆ... ದಾಖಲೆರಹಿತ ನಿವಾಸಿಗಳು ಮತ್ತು ನಾಗರಿಕರನ್ನು ವಾರಂಟ್ ನೀಡದೆ ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ದಾಳಿಯ ಸಮಯದಲ್ಲಿ ಬಂಧಿಸಲ್ಪಟ್ಟವರಲ್ಲಿ ಒಬ್ಬರು ಯುಎಸ್ ಮಿಲಿಟರಿ ಮಾಜಿ ಅಧಿಕಾರಿ ಎಂದು ಬರಾಕಾ ತಿಳಿಸಿದ್ದಾರೆ.