ಬಿಜೆಪಿ ನನಗೆ ಮುಖ್ಯಮಂತ್ರಿ ಹುದ್ದೆಯ ಆಮಿಷ ಒಡ್ಡಿತ್ತು: ಸಿಸೋಡಿಯಾ

BJP lured me for CM post: Sisodia

ಹೊಸದಿಲ್ಲಿ 24ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ತಿಹಾರ್ ಜೈಲಿನಲ್ಲಿದ್ದಾಗ, ಪಕ್ಷ ಬಿಟ್ಟು ಬರಲು ಒಪ್ಪಿಕೊಂಡರೆ ಬಿಜೆಪಿ ತಮಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡುವುದಾಗಿ ಹೇಳಿತ್ತೆಂದು ಆಪ್ ನಾಯಕ ಸಿಸೋಡಿಯಾ  ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ದೆಹಲಿ ಆಪ್ ನಾಯಕ ಮನೀಶ್ ಸಿಸೋಡಿಯಾ ಅವರು ಹಲಿ ವಿಧಾನಸಭಾ ಚುನಾವಣೆಯಲ್ಲಿ ಜಂಗ್‌ಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ

“ಬಿಜೆಪಿಗೆ ಸೇರಿ, ನಾವು  ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ” ಎಂದು ಆಮಿಷ ಒಡ್ಡಿದ್ದರು , ಅರವಿಂದ್ ಕೇಜ್ರಿವಾಲ್ ಅವರನ್ನು ಬಿಟ್ಟು ಬಿಡಿ ಅಥವಾ ಜೈಲಿನಲ್ಲಿ ಕೊಳೆಯಿರಿ ಎಂದಿತ್ತು. ನಾನು ಕಷ್ಟಪಡುತ್ತಿದ್ದೇನೆ ಎಂದು ಅವರಿಗೆ ಈಗಾಗಲೇ ತಿಳಿದಿತ್ತು. ನನ್ನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ಅವರಿಗೆ ತಿಳಿದಿತ್ತು,  ಇದು ಅವರ ಕಾರ್ಯವಿಧಾನ, ಅವರು ಇತರ ಪಕ್ಷಗಳಿಂದ ನಾಯಕರನ್ನು ಖರೀದಿಸುತ್ತಾರೆ, ನಂತರ ಅವರು ಬಿಜೆಪಿಯ ವಾಷಿಂಗ್ ಮೆಷಿನ್ ಮೂಲಕ ಹೋಗುತ್ತಾರೆ ಎಂದು ಸಿಸೋಡಿಯಾ ಗಂಭೀರ ಆರೋಪ ಮಾಡಿದರು.

ವಿರೋಧ ಪಕ್ಷಗಳನ್ನು ಒಡೆಯಲು ಬಿಜೆಪಿ ಕಾರ್ಖಾನೆಯನ್ನು ಸ್ಥಾಪಿಸಿದೆ. ತಮ್ಮ ಮಾತು ಕೇಳದವರನ್ನು ಜೈಲಿಗೆ ಕಳುಹಿಸಲಾಗುತ್ತದೆ” ಎಂದು ಹೇಳಿದರು, ಬಿಜೆಪಿ ತನ್ನ ಕಾರ್ಯಸೂಚಿಯೊಂದಿಗೆ ಹೊಂದಿಕೊಳ್ಳಲು ನಿರಾಕರಿಸಿದ ವಿರೋಧ ಪಕ್ಷದ ನಾಯಕರನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡಿದೆ ಎಂದು ಅವರು ಆರೋಪಿಸಿದರು.