ಬೆಳಗಾವಿಯಲ್ಲಿ 30ಕ್ಕೂ ಅಧಿಕ ಬಣವೆಗಳಿಗೆ ಬೆಂಕಿ ಲಕ್ಷಾಂತರ ರೂ ಹಾನಿ

Fire damages more than 30 piles in Belgaum worth lakhs of rupees

ಬೆಳಗಾವಿ : ಜಾನುವಾರುಗಳಿಗಾಗಿ ಸಂಗ್ರಹಿಸಿ ಇರಿಸಲಾಗಿದ್ದ 30ಕ್ಕೂ ಅಧಿಕ ಹುಲ್ಲಿನ ಬಣವೆಗಳಿಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿಯಾಗಿರುವ ಘಟನೆ ಬೆಳಗಾವಿ ತಾಲೂಕಿನ ಕೊಳ್ಳಿಕೊಪ್ಪ  ಗ್ರಾಮದ ಹೊರವಲಯದಲ್ಲಿ ನಡೆದಿದೆ. 

   ಈ ಬೆಂಕಿ ಅವಘಡದಲ್ಲಿ ಕೊಳಿಕೊಪ್ಪ ಗ್ರಾಮದ ರಾಜು ಜಾಧವ್  ಎಂಬುವವರಿಗೆ ಸೇರಿದ 30ಕ್ಕೂ ಅಧಿಕ ಹುಲಿನ ಬಣವೆಗಳು ಸುಟ್ಟು ಭಸ್ಮವಾಗಿವೆ.

   ಆಕಸ್ಮಿಕವಾಗಿ ಗುಡ್ಡಕ್ಕೆ ಬೆಂಕಿ ತಗುಲಿ ಹುಲ್ಲಿನ ಬಣವೆಗಳು ಬೆಂಕಿಗೆ ಆಹುತಿಯಾಗಿರುವ ಶಂಕೆ ವ್ಯಕ್ತವಾಗಿದೆ. ಬೆಳಗಾವಿ ತಾಲೂಕಿನ ಹಿರೇಬಾಗೆವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.