ಬ್ಯಾಂಕ್ ಶಾಖೆ-ಎಟಿಎಂಗಳಲ್ಲಿ ಅಗತ್ಯ ಭದ್ರತಾ ವ್ಯವಸ್ಥೆ ಇರಬೇಕು -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ
ಹಾವೇರಿ 24: ಜಿಲ್ಲೆಯ ಎಲ್ಲ ಬ್ಯಾಂಕ್ ಶಾಖೆಗಳಲ್ಲಿ ಹಾಗೂ ಎಟಿಎಂಗಳಲ್ಲಿ ಸೈರನ್, ಸಿಸಿ ಕ್ಯಾಮರಾ, ಭದ್ರತಾ ಸಿಬ್ಬಂದಿ ನಿಯೋಜನೆ ಸೇರಿದಂತೆ ಆರ್.ಬಿ.ಐ.ಮಾರ್ಗಸೂಚಿ ಅನ್ವಯ ಅಗತ್ಯ ಭದ್ರತಾ ವ್ಯವಸ್ಥೆ ಇರಬೇಕು ಎಂದು ಬ್ಯಾಂಕರ್ಸಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ, ಜಿಲ್ಲಾ ಮಟ್ಟದ ಭದ್ರತಾ ಸಮಿತಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕ್ ಶಾಖೆಗಳಿಗೆ ದಿನನಿತ್ಯ ಸಾರ್ವಜನಿಕರು ಭೇಟಿ ನೀಡುತ್ತಾರೆ, ಈ ಪೈಕಿ ನಿಮ್ಮ ಬ್ಯಾಂಕ್ ಗ್ರಾಹಕರು ಹೊರತು ಪಡಿಸಿ ಅನ್ಯ ವ್ಯಕ್ತಿಗಳು ಪದೆ ಪದೆ ಆಗಮಿಸಿದರೆ, ಅವರ ಚಲನವಲಗಳನ್ನು ಗಮಸನಿಬೇಕು ಹಾಗೂ ಸದಾ ಜಾಗೃತರಾಗಿರಬೇಕು ಎಂದು ತಿಳಿಸಿದರು.
ಬ್ಯಾಂಕ್ ಶಾಖೆಗಳಿಗೆ ವಿವಿಧ ವಸ್ತುಗಳ ಮಾರಾಟಕ್ಕೆ ಬರುವ ಮಾರಾಟಗಾರರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಅವರು ಶಾಖೆಗೆ ಆಗಮಿಸಿದರೆ ಯಾರೂ ಏನು ಮಾಡುತ್ತಿರುತ್ತಾರೆ, ಲಾಕರ್ ಯಾವ ಸಮಯದಲ್ಲಿ ತೆರೆದಿರುತ್ತದೆ ಎಂಬ ಅಂಶಗಳನ್ನು ಗಮನಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಬ್ಯಾಂಕ್‌ಗಳಲ್ಲಿ ಇಂತಹವರಿಗೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು.
ಬ್ಯಾಂಕ್ ಶಾಖೆಗಳಲ್ಲಿ ಫೈರ್ ಎಷ್ಟಿಮೇಷರ್ ಹಾಗೂ ಫಾಗ್ ಡಿಡೆಕ್ಟರ್ ಇರಬೇಕು. ಎ.ಟಿ.ಎಂ.ಗಳಲ್ಲಿ ಅಳವಡಿಸಿದ ಸಿಸಿ ಕ್ಯಾಮರಾಗಳು ಸುಸ್ಥಿತಿಯಲ್ಲಿರಬೇಕು. ಎಟಿಎಂಗಳು ಜನನಿಬಿಡ ಪ್ರದೇಶಗಳಲ್ಲಿದ್ದರೆ ಸುರಕ್ಷಿತವಾಗಿರಬಹುದು. ಈ ಹಿನ್ನಲೆಯಲ್ಲಿ ಎಟಿಎಂಗಳನ್ನು ಜನವಸತಿ ಪ್ರದೇಶಗಳಲ್ಲಿ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.
ಇಂದು ಹಣಕಾಸು ವ್ಯವಹಾರದಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಈ ಕುರಿತು ಬ್ಯಾಂಕ್ ಅಧಿಕಾರಿಗಳಿಗೆ ಗ್ರಾಹಕರಿಗೆ ಸೈಬರ್ ಮೋಸದ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಅವರು ಮಾತನಾಡಿ, ಯಾವ ಶಾಖೆಯ ಸೆಕ್ಯೂರಿಟಿ ಗಾರ್ಡ್‌ಗಳ ಗನ್ ಲೈನ್ಸ್ ಅವಧಿ ಮುಗಿದಿದ್ದರೆ ಕೂಡಲೇ ಮಾಹಿತಿ ನೀಡಿದರೆ ಶೀಘ್ರಲ್ಲೇ ರಿನಿವಲ್ ಮಾಡಿ ಕೊಡಲಾಗುವುದು. ಗನ್ ಲೈನ್ಸ್ ಹೊಂದಿದ ಸೆಕ್ಯೂರಿಟಿ ಗಾರ್ಡ್‌ಗಳ ಪಟ್ಟಿಯನ್ನು ಪೊಲೀಸ್ ಇಲಾಖೆಗೆ ನೀಡಿದರೆ ಅವರಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಅಣ್ಣಯ್ಯ ಅವರು ಮಾತನಾಡಿ, ಸೈಬರ್ ಕ್ರೈಂ ಅಪರಾಧ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ಕೇಳುವ ಮಾಹಿತಿಯನ್ನು ಬ್ಯಾಂಕ್ ಅಧಿಕಾರಿಗಳು ನೀಡಬೇಕು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳು ನೀಡಿದ ಸೂಚನೆಗಳನ್ನು ಎಲ್ಲ ಬ್ಯಾಂಕ್ ಶಾಖೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.
ಹಾವೇರಿ ಸೈಬರ ಕ್ರೈಂ ವಿಭಾಗದ ಇನ್ಸಪೆಕ್ಟರ್ ಶಿವಶಂಕರ ಗಣಾಚಾರಿ ಅವರು ಮಾತನಾಡಿ, ಅನೇಕ ಆಸೆ ಆಮಿಷಗಳಿಗೆ ಒಳಗಾಗುವ ಸಾರ್ವಜನಿಕರು ಆ್ಯಪ್‌ಗಳು ನೀಡುವ ಮಾರ್ಗಸೂಚಿ ಅನ್ವಯ ಅವರು ನೀಡುವ ಸಂದೇಶ ಕ್ಲಿಕ್ ಮಾಡಿ ತಮ್ಮ ಖಾತೆಯಲ್ಲಿ ರುವ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ನಕಲಿ ಆ್ಯಪ್‌ಗಳ ಮೂಲಕ ಸೈಬರ್ ಕ್ರೈಮಗಳು ಹೆಚ್ಚಾಗಿ ನಡೆಯುತ್ತಿದ್ದು, ಗ್ರಾಹಕರು ಎಚ್ಚರವಾಗಿರಬೇಕು ಹಾಗೂ ಬ್ಯಾಂಕರ್ ಅಧಿಕಾರಿಗಳು ಈ ಕುರಿತು ಗಮನಹರಿಸಬೇಕು. ಗ್ರಾಹಕರು ಯಾವುದೇ ಹಣ ಡ್ರಾ ಮಾಡದೇ ತಮ್ಮ ಖಾತೆಯಿಂದ ಹಣ ವರ್ಗಾವಣೆಯಾಗಿದೆ ಎಂದು ಬ್ಯಾಂಕ್ ಶಾಖೆಗೆ ತಿಳಿಸಿದಾಗ ಕೂಡಲೇ ಸ್ಪಂದಿಸುವ ಕೆಲಸವಾಗಬೇಕು ಹಾಗೂ ಆ ಖಾತೆಯ ಹಣ ವರ್ಗಾವಣೆ ತಕ್ಷಣ ತಡೆಹಿಡಿಯಬೇಕು ಎಂದರು.
ವಾಟ್ಸಾಪ್, ಇನ್ಸಾ-್ಟ್ರಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ಸುಳ್ಳು ಜಾಹೀರಾತು ನೀಡುವ ಮೂಲಕ ಸಾರ್ವಜನಿಕರ ಖಾತೆಯಲ್ಲಿರುವ ಹಣ ವರ್ಗಾವಣೆ ದಂದೆ ನಡೆಯುತ್ತಿದೆ. ಹಾಗಾಗಿ ಬ್ಯಾಂಕ್ ಅಧಿಕಾರಿಗಳು ತಮ್ಮ ಬ್ಯಾಂಕಿನ ಕಾರ್ಯವಿಧಾನ ಕುರಿತು ಗ್ರಾಹಕರಿಗೆ ತಿಳಿಸಬೇಕು.
ಅಪರಚಿತ ವ್ಯಕ್ತಿಗಳು ಕರೆ ಮಾಡಿ ನಿಮ್ಮ ಯಾವುದೇ ವಯಕ್ತಿಕ ಮಾಹಿತಿ ಕೇಳಿದರೂ ನೀಡಬಾರದು. ನಾವು ದೆಹಲಿ ಸಿಐಡಿ, ಸಿಒಡಿ, ಸಿಬಿಐ ಇಡಿ ಅಥವಾ ಕಸ್ಟಮ್ಸ್‌ನಿಂದ ಕರೆ ಮಾಡುತ್ತಿರುವುದಾಗಿ ಹೇಳಿ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕಾನೂನು ಬಾಹಿರ ಹಣ ವರ್ಗಾವಣೆಯಾಗಿದೆ, ಹಾಗಾಗಿ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡುತ್ತೇವೆಂದು ಹೆದರಿಸಿ ನಿಮ್ಮಿಂದ ಹಣ ಪಡೆಯುತ್ತಾರೆ. ಕಾನೂನಿನಲ್ಲಿ ಯಾರೇ ಪೊಲೀಸರು ಡಿಜಿಟಲ್ ಅರೆಸ್ಟ್ ಮಾಡುವುದಿಲ್ಲ. ಈ ಕುರಿತು ಎಲ್ಲರೂ ಎಚ್ಚರದಿಂದ ಇರಬೇಕು. ನಿಮ್ಮ ಇಮೇಲ್, ಫೇಸ್‌ಬುಕ್ ಮತ್ತು ಇನ್ಸಾ-್ಟ ಗ್ರಾಂ ಖಾತೆಗಳಿಗೆ ಸುಲಭ ಪಾಸ್‌ವರ್ಡ್ ಇಡಬಾರದು. ಯಾವಾಗಲೂ ಉದ್ದ ಹಾಗೂ ಕಠಿಣ ಪಾಸ್‌ವರ್ಡ್ ಹಾಕಬೇಕು ಹಾಗೂ ಪದೇ ಪದೇ ಬದಲಿಸಬೇಕು. ಒಂದು ವೇಳೆ ಸೈಬರ್ ಕ್ರೈಂ ವಂಚನೆಗೆ ಒಳಗಾದರೆ ಕೂಡಲೇ 1930ಕ್ಕೆ ಕರೆ ಮಾಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಎಸ್.ಬಿ.ಐ., ಯುನಿಯನ್, ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕೆವಿಜಿ ಬ್ಯಾಂಕ್ ಸೇರಿದಂತೆ , ಅರ್ಬನ್ ಕೋ. ಆಪರೇಟಿವ್, ಖಾಸಗಿ ಕಮರ್ಷಿಲ್ ಬ್ಯಾಂಕ್ ಪ್ರತಿನಿಧಿಗಳು