ಹರಪನಹಳ್ಳಿ: ಕಂಚಿಕೇರಿ ಗ್ರಾಮದಲ್ಲಿ ಉಚಿತ ಆರೋಗ್ಯ ಮೇಳ ಉದ್ಘಾಟನೆ

ಹರಪನಹಳ್ಳಿ 27: ಗ್ರಾಮೀಣ ಜನರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಇಂತಹ ಉಚಿತ ಆರೋಗ್ಯ ಮೇಳವನ್ನು ಮನೆ ಬಾಗಿಲಿಗೆ ತಂದಿದ್ದೇವೆಂದು ಹದ್ರೋಗ ತಜ್ಞನ ಡಾ.ಮಹಾಂತೇಶ್ ಆರ್.ಚರಂತಿಮಠ ಹೇಳಿದರು. 

ಗಣರಾಜೋತ್ಸವ ಪ್ರಯುಕ್ತ ತಥಾಗತ್ ಮೆಡಿಕಲ್ ಟ್ರಸ್ಟ್ ಬೆಂಗಳೂರು ಹಾಗೂ ಎಂ.ಪಿ.ಪ್ರಕಾಶ ಸಮಾಜಮುಖಿ ಟ್ರಸ್ಟ್ ಸಹಯೋಗದಲ್ಲಿ ತಾಲ್ಲೂಕಿನ ಕಂಚಿಕೇರಿ ಗ್ರಾಮದಲ್ಲಿ ಉಚಿತ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸದೃಡ ಸಮಾಜ ನಿಮರ್ಾಣಕ್ಕೆ ಉತ್ತಮ ಆರೋಗ್ಯದ ಪ್ರಜೆಯ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಆರೋಗ್ಯದ ಬಗ್ಗೆ ಅರಿವನ್ನು  ಈ ಮೇಳದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಇಸಿಜಿ, ಎಕೋ, ಮಧುಮೇಹ, ರಕ್ತದೊತ್ತಡ ಸ್ತ್ರೀ ರೋಗಗಳಂತಹ ಪರೀಕ್ಷೆಗಳಿಗೆ ರೋಗಿಗಳು ಸಾವಿರಾರೂ ಹಣವನವನ್ನು ವೆಚ್ಚ ಮಾಡಬೇಕಾಗುತ್ತದೆ. ಆದ್ದರಿಂದು ಉತೃಷ್ಠ ಮಟ್ಟದ ಪರೀಕ್ಷೆಗಳನ್ನು ಈ ಮೇಳದಲ್ಲಿ ಸ್ಥಳದಲ್ಲೇ ಪರೀಕ್ಷಿಸಿ ಪತ್ತೆ ಹಚ್ಚಿ ಔಷಧಿಗಳನ್ನು ಹಾಗೂ ಹೆಚ್ಚಿನ ಚಿಕಿತ್ಸೆಗೆ ಸೌಲಭ್ಯವನ್ನು ನೀಡಲಾಗುತ್ತದೆ ಎಂದರು. 

ಎಂ.ಪಿ.ಪ್ರಕಾಶ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ.ವೀಣಾ ಮಾತನಾಡಿ, ಗ್ರಾಮೀಣ ಜನರಿಗೆ ವೈದ್ಯಕೀಯ ನೆರವು ನೀಡಲು ಆರೋಗ್ಯ ಮೇಳ ಸಹಕಾರಿಯಾಗಲಿದೆ. ಅದರಲೂ ಮಹಿಳೆಯರಿಗೆ ಸ್ರೀ ರೋಗ ತಜ್ಞರು ಹಳ್ಳಿ ಮಹಿಳೆಯರಿಗೆ ಉಚಿತ ತಪಾಸಣೆ ಹಾಗೂ ಆರೋಗ್ಯ ಸಲಹೆಗಳನ್ನು ನೀಡಲು ಉಪಯೋಕ್ತವಾಗಿದೆ. ಸ್ಥಳೀಯರ ಸಹಕಾರ ಮುಖ್ಯವಾಗಿದ್ದು ಈ ಶಿಬಿರದಲ್ಲಿ ನಿಸರ್ಗ ಯುವಕ ಸಂಘ ಒದಗಿಸಿದೆ. ಕಳೆದ 20 ವರ್ಷಗಳಿಂದ ಸಾವಿರಾರೂ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಇಂದಿನ ಅರೋಗ್ಯ ಮೇಳದಲ್ಲಿ 600ಕ್ಕೂ ಹೆಚ್ಚು ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದರು ಎಂದರು. 

ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ವಾಗೀಶ್, ಮಹಿಳಾ ಸಹಾಯವಾಣಿ ಲೀಲಾ ಲಿಂಗರಾಜ, ವಕೀಲ ಸಿದ್ದಲಿಂಗನಗೌಡ, ಡಾ.ಶ್ರೀನಿವಾಸ, ಡಾ.ಹೇಮಾ, ಡಾ.ನಾಗವೇಣಿ, ಡಾ.ಶಿವಶಂಕರ, ಡಾ.ಡಿ.ಕೊಟ್ರಪ್ಪ, ಮುಖಂಡರಾದ ಶೇಖರನಾಯ್ಕ್, ಲಿಂಗರಾಜ, ಶಿವರಾಜ, ಮಹಬೂಬ್ಸಾಬ್ ಹಾಗೂ ಇತರರು ಭಾಗವಹಿಸಿದ್ದರು.