ವೀರಭದ್ರಮ್ಮ ಸ್ಮರಣಾರ್ಥ ದತ್ತಿ ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮ

Veerabhadramma memorial charity lecture and concert

ವೀರಭದ್ರಮ್ಮ ಸ್ಮರಣಾರ್ಥ ದತ್ತಿ ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮ  

ಹೂವಿನ ಹಡಗಲಿ 07 :  ಕೃಷಿಗೂ ಮತ್ತು ಕೌಟುಂಬಿಕ ಸಂಬಂಧಗಳಿಗೂ ಒಂದಕ್ಕೊಂದು ಪೂರಕವಾದ ಸಂಬಂಧವಿದೆ. ಕುಟುಂಬವನ್ನು ನಮ್ಮ ಬದುಕಿನ ಬಹುಮುಖ್ಯ ಆದ್ಯತೆಯಾಗಿಸಿಕೊಳ್ಳಬೇಕಿದೆ. ಕುಟುಂಬದ ಬಂಧಗಳು ದೀರ್ಘಾಯಸ್ಸನ್ನು ನೀಡುವುದಲ್ಲದೇ ಉತ್ತಮ ಮಾನಸಿಕ ಆರೋಗ್ಯ ಬದುಕಿಗೆ ಪೂರಕವಾಗಿದೆ ಎಂದು  ಶಿಕ್ಷಕ ಎಂ. ಶಿವಪ್ರಕಾಶ್ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಕೊಂಬಳಿ ಗ್ರಾಮದಲ್ಲಿ ಆಯೋಜಿಸಿದ್ದ ಷ.ಬ್ರ. ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಪೀಠಾರೋಹಣ ರಜತ ಮಹೋತ್ಸವದತ್ತಿ,  ಕಾಳಮ್ಮ  ಸಿದ್ದಪ್ಪ ಕರಿಶೆಟ್ಟಿ ಸ್ಮಾರಕದತ್ತಿ, ಸೊಪ್ಪಿನ ವೀರಮ್ಮ, ಹುಚ್ಚಮ್ಮ ಸ್ಮರಣಾರ್ಥ ದತ್ತಿ,  ಅಂಗಡಿ ವೀರಭದ್ರಮ್ಮ ಸ್ಮರಣಾರ್ಥ ದತ್ತಿ ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ’ಕೌಟುಂಬಿಕ ಸಂಬಂಧಗಳು’ ಹಾಗೂ ’ಕೃಷಿ ಪ್ರಗತಿಯಲ್ಲಿ ವಾಣಿಜ್ಯ ಬೆಳೆಗಳ ಅಗತ್ಯತೆ’ ವಿಷಯ ಕುರಿತು ಮಾತನಾಡಿದರು.  ನಿವೃತ್ತ ಯೋಧರಾದ ಕರಿಶೆಟ್ಟಿ ಮಹಾಬಲೇಶ್ವರ​‍್ಪ ಕಾರ್ಯಕ್ರಮ ಉದ್ಘಾಟಿಸಿ ಸಾಹಿತ್ಯಿಕ,ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಸ್ಕಾರ ಬೆಳಸಲು ಸಹಾಯಕವೆಂದರು. ಕಸಾಪ ಮಾಜಿ ಅಧ್ಯಕ್ಷ ಎಚ್‌.ಜಿ.ಪಾಟೀಲ್,ಟಿ.ಬಸವನಗೌಡ, ಪಿ.ಕೆ.ಎಂ.ರೇಣುಕಸ್ವಾಮಿ ಉಪಸ್ಥಿತರಿದ್ದರು.ಕಸಾಪ ತಾಲೂಕು ಘಟಕದ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿ. ಯುವರಾಜಗೌಡ ಪ್ರಾರ್ಥಿಸಿದರು. ಉಪನ್ಯಾಸಕ ಕರಿಶೆಟ್ಟಿ ಜಯಪ್ರಕಾಶ್ ಸ್ವಾಗತಿಸಿದರು. ದತ್ತಿ ದಾನಿಗಳು,ತಾಲೂಕು ಕಸಾಪ ಪ್ರಥಮ ಅಧ್ಯಕ್ಷರಾದ ಡಾ.ಕೆ. ರುದ್ರ​‍್ಪ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಹರಿಹರದ ತತ್ವಪದ, ಜಾನಪದ ಸಂಗೀತ ಕಲಾವಿದರಾದ ಜಿ. ಪರಮೇಶ್ವರ​‍್ಪ ಕತ್ತಿಗೆ ಹಾಗೂ ಯುವರಾಜಗೌಡ, ಎ.ಕೃಷ್ಣ ಇವರ ಸಂಗೀತ ಕಾರ್ಯಕ್ರಮ ಜನಮನ ಸೂರೆಗೊಂಡಿತು.ಕಸಾಪ ಗೌರವ ಕಾರ್ಯದರ್ಶಿ ಎ.ಎಂ.ಚನ್ನವೀರಸ್ವಾಮಿ ವಂದಿಸಿದರು. ಪ್ರಭು ಸೊಪ್ಪಿನ ಕಾರ್ಯಕ್ರಮ ನಿರ್ವಹಿಸಿದರು.