ಜಿಲ್ಲಾಧಿಕಾರಿ, ಶಾಸಕ ಸೈಕಲ್ ಮೇಲೆ ವಾರ್ಡ ಪರೀಶೀಲನೆ
ಹೂವಿನಹಡಗಲಿ 07: ಪಟ್ಟಣದ ನಾನಾ ವಾರ್ಡ್‌ಗಳಿಗೆ ವಿಜಯನಗರ ಜಿಲ್ಲಾಧಿಕಾರಿಗಳಾದ ಎಂ.ಎಸ್ ದಿವಾಕರ್ ಹಾಗೂ ಶಾಸಕರಾದ ಕೃಷ್ಣನಾಯ್ಕ ಅವರು ಹಾಗೂ ತಾಲೂಕಿನ ಅಧಿಕಾರಿಗಳೊಡನೆ ತೆರಳಿ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಸ್ಮಶಾನ ಭೂಮಿ ಇತರೆ ಮೂಲಭೂತ ಸಮಸ್ಯೆಗಳ ಕುರಿತು ಸ್ಥಳ ಪರೀಶೀಲನೆ ನಡೆಸಿ ಕುಂದು ಕೊರತೆಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಪಟ್ಟಣದ ಕೆಲ ವಾರ್ಡ್‌ಗಳಲ್ಲಿ ಬೀದಿ ದೀಪ.ಚರಂಡಿ ಸ್ವಚ್ಛ ತೆ ಸೇರಿದಂತೆ ಜನರ ಸಮಸ್ಯೆಗಳನ್ನು ಅಲಿಸಿದರು. ಇದೇ ವೇಳೆ ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ.ತಹಶಿಲ್ದಾರರ ಸಂತೋಷ ಕುಮಾರ. ಪುರಸಭೆ ಮುಖ್ಯಾಧಿಕಾರಿ ಇಮಾಮ್ ಸಾಹೇಬ ಇದ್ದರು.