ಲೋಕದರ್ಶನ ವರದಿ
ಹರಪನಹಳ್ಳಿ 20: ಅಖಿಲ ಭಾರತ ಯುವಜನ ಫೆಡರೇಷನ್ ಭಗತ್ ಸಿಂಗ್ ರವರ ಕನಸಿನಂತೆ ನಮ್ಮ ದೇಶವನ್ನು ಸಮ ಸಮಾಜವಾದಿ ಜಾತ್ಯತೀತ ಅನ್ನುವ ಭಾವನೆ ದೇಶದಲ್ಲಿ ನಾಶವಾಗುತ್ತಿದೆ ಎಂದು ಸಂತೋಷ ಹೇಳಿದರು
ಪಟ್ಟಣದ ತಾಲೂಕು ಪಂಚಾಯತಿಯ ಸಮರ್ಥ ಸೌಧದಲ್ಲಿ ಅಖಿಲ ಭಾರತ ಯುವಜನ ಫೆಡರೇಶನ್ ವತಿಯಿಂದ ಐದನೆಯ ಹರಪನಹಳ್ಳಿ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ
ನಮ್ಮ ದೇಶದ ಸಂವಿಧಾನದ ಆಶಯಗಳಿಗೆ ಗೌರವಿಸುತ್ತಾ, ಸಂಘಟನೆಯ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಆದರೆ ಇತ್ತೀಚೆಗೆ ಕೇಂದ್ರ ಸರಕಾರ ಸಂವಿಧಾನ ವನ್ನು ಗಾಳಿಗೆ ತೂರಿ ಕಾಶ್ಮೀರದ ಮೇಲೆ ಮಾಡಿದ ಅಧಿಕಾರದ ದಾಳಿಯನ್ನು ನಾವು ಖಂಡಿಸುತ್ತೇವೆ. ದೇಶದ ಯಾವುದೇ ಒಂದು ರಾಜ್ಯದ ಹಕ್ಕುಗಳ ಅಥವಾ ಗಡಿಗಳ ಬದಲಾವಣೆ ಪ್ರಶ್ನೆ ಬಂದರೆ ಆ ವಿಚಾರಗಳ ಮೇಲೆ ದೀರ್ಘಕಾಲದ ಚರ್ಚ ನಡೆಸಿದೆ ಉದಾಹರಣೆಗೆ ಆಂಧ್ರ ಪ್ರದೇಶ, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ಈ ರಾಜಗಳ ವಿಭಜನೆಯ ಸಂದರ್ಭದಲ್ಲಿ ಹಲವಾರು ವರ್ಷಗಳ ಕಾಲ ಚಚರ್ಿಸಿವೆ. ರಾಜ್ಯಗಳ ರಾಜ್ಯ ಶಾಸಕಾಂಗ ಅಭಿಪ್ರಾಯ, ಜನಾಭಿಪ್ರಾಯ ಪಡೆದ ನಂತರ ವಿಭಜನೆ ಮಾಡುವ ಮೂಲಕ ಸಂವಿಧಾನದ ಆಶಯದಂತೆ ನಡೆದಿದೆ. ಕೇಂದ್ರ ಸರಕಾರದ ವಸಾಹತುವಾಗಿ ಮಾಡಿಕಿಳ್ಳುವುದು ನಮ್ಮ ಸಂವಿಧಾನ ಒಕ್ಕೂಟ ರಚನೆಯ ಮೇಲೆಯೇ ಒಂದು ಹೊಡೆತವಾಗಿದೆ ಆದ್ದರಿಂದ ಗಣತಂತ್ರ ವ್ಯವಸ್ಥೆ ಉಳಿವಿಗಾಗಿ ಅಖಿಲ ಭಾರತ ಯುವಜನ ಫೆಡರೇಷನ್ ಕಾಶ್ಮೀರ ಉಳಿಸಿ,ಪ್ರಜಾತಂತ್ರ ಉಳಿಸಿ ಎಂದು ಒತ್ತಾಯಿಸುತ್ತದೆ.
ಸಮ್ಮೇಳನ ದಲ್ಲಿ ನೂತನ 19 ಜನರ ತಾಲೂಕು ಮಂಡಳಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಸುರೇಶ್.ಎಸ್, ಕಾರ್ಯದಶರ್ಿಯಾಗಿ ನಾಗರಾಜ್.ಜಿ
ಸಂಘಟನಾ ಕಾರ್ಯದರ್ಶಿಯಾಗಿ ಮುಜೀಬ್ ರೆಹಮಾನ್ ಉಪಾಧ್ಯಕ್ಷರು ಎಮ್.ಬಸವರಾಜ್,ಹೆಚ್. ನಿಂಗರಾಜ್, ಕಾಶಿನಾಥ್ ಸಹ ಕಾರ್ಯದರ್ಶಿಗಳಾಗಿ: ಮಹಬೂಬ್ ಬಾಷ,ಇಸ್ಮಾಯಿಲ್ ಜಬೀವುಲ್ಲಾ,ಕೆ. ರುದ್ರೇಶ್ ಕೋಶಾಧಿಕಾರಿಯಾಗಿ: ಪಿ.ಪ್ರಭುಗೌಡ ಆಯ್ಕೆಯಾದರು. ಈ ಸಂದರ್ಭದಲ್ಲಿ ಪ್ರಭುಗೌಡ. ಕಾಶಿನಾಧ .ಬಸವರಾಜ್. ಇಸ್ಮಾಯಿಲ್. ಉಪಸ್ಥಿತರಿದ್ದರು