ಹರಪನಹಳ್ಳಿ: ತಿಂಗಳು ಗತಿಸಿದರೂ ದುರಸ್ತಿಯಾಗದ ರಸ್ತೆ

ಲೋಕದರ್ಶನ ವರದಿ

ಹರಪನಹಳ್ಳಿ 22: ತಾಲ್ಲೂಕಿನ ದಡಗಾರನಹಳ್ಳಿ ರಸ್ತೆ ಮಳೆಯಿಂದ ಕೊಚ್ಚಿಕೊಂಡು ಹೋಗಿ ತಿಂಗಳುಗಲೇ ಉರಳಿದ್ದರೂ ದುರಸ್ಥಿತಿ ಕಾಣದೇ ಸಾರ್ವಜನಿಕರ ಸಂಚಾರಕ್ಕೆ ಕುತ್ತು ತಂದಿದೆ. ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ಈ ಗ್ರಾಮ ಪ್ರತಿ ದಿನ ವಿದ್ಯಾಥರ್ಿಗಳು, ರೈತರು, ಆಸ್ಪತ್ರೆಗೆ ತರಳುವ ರೋಗಿಗಳ ಗೋಳನ್ನು ಕೇಳೋರಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ. 

ತಿಂಗಳ ಹಿಂದೆ ಸುರಿದ ಮಳೆಗೆ ತಾಲ್ಲೂಕಿನ ದಡಗಾರನಹಳ್ಳಿಗೆ ಸಂಪರ್ಕಸುವ ಗ್ರಾಮೀಣ ಸಡಕ್ ರಸ್ತೆ ಹರಪನಹಳ್ಳಿಯಿಂದ 5ಕಿ.ಮೀ. ದೂರದಲ್ಲಿದೆ. ರಾಜ್ಯ ಹೆದ್ದಾರಿ ಹೊಸಪೇಟೆ ರಸ್ತೆಯಿಂದ ಹಾದು ಹೋಗಿ ಮುಂದೆ ಶೃಂಗಾರತೋಟ, ಕಾಯಕದಹಳ್ಳಿ, ಹೊಂಬಳಗಟ್ಟಿ ವರೆಗೂ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಇದನ್ನು ಗ್ರಾಮೀಣ ಸಡಕ ಯೋಜನೆಯಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಸುರಿದ ಮಳೆಗೆ ಕೊಚ್ಚಿ ಕೊರಕಲಾಗಿ ಹಾನಿಯಾಗಿ ವಾಹನಗಳ ಸಂಚಾರಕ್ಕೆ ದುಸಾಧ್ಯವಾಗಿದೆ. ವಿದ್ಯಾರ್ಥಿಗಳು, ರೈತರು, ಕೂಲಿಕಾರರು, ಗ್ರಾಮಸ್ಥರು ನಿತ್ಯ ತಮ್ಮ ದೈನಂದಿನ ಕೆಲಸಗಳಿಗೆ ಓಡಾಡಲು ಇದೆ ರಸ್ತೆಯನ್ನು ಅವಲಂಭಿಸಿದ್ದಾರೆ, ರಾತ್ರಿವೇಳೆ ಈ ರಸ್ತೆಯಲ್ಲಿ ಸಂಚಾರ ಮಾಡಿದರೆ ಅಪಘಾತ ಕಟ್ಟಿಟ್ಟ ಬುತ್ತಿಯಾಗಿದೆ. ಆಸ್ಪತ್ರೆಗೆ ಅಥವಾ ತುರ್ತು  ಪ್ರಯಾಣಕ್ಕೆ ಈ ರಸ್ತೆಯನ್ನು ಅವಲಂಬಿಸದೇ ಬೇರೆ ಸಂಪರ್ಕ ರಸ್ತೆಯ ಮೂಲಕ ಓಡಾಡುವ ಅನಿವಾರ್ಯ ಗ್ರಾಮಸ್ಥರಿಗೆ ಎದುರಾಗಿದೆ. ಕೂಡಲೇ ರಸ್ತೆ ದುರಸ್ಥಿ ಕಾರ್ಯ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. 

ಈ ರಸ್ತೆಯು ಹಿಂದೆ ಪಿಎಂಜಿಎಸ್ವೈ ಅಡಿಯಲ್ಲಿ ನಿರ್ಮಾಣಗೊಂಡಿದೆ. ಸುಮಾರು 1.5ಕಿ.ಮೀ. ರಸ್ತೆ ದುರಸ್ಥಿಗೆ ಶಾಸಕರ ಗಮನಕ್ಕೆ ತರಲಾಗಿದೆ. ಕ್ರಿಯಾಯೋಜನೆ ರೂಪಿಸಿ ಅನುಮೋದನೆಗೆ ಸಲ್ಲಿಸಿದ್ದು ಬಂದ ಕೂಡಲೇ ರಸ್ತೆಯನ್ನು ಪುನಃ ಅಭಿವೃದ್ಧಿಗೊಳಿಸಲಾಗುವುದೆಂದು ಸತೀಶಗೌಡ, ಇಂಜಿನಿಯರ್, ಪಿಆರ್ಡಿ ಉಪವಿಭಾಗ, ಹರಪನಹಳ್ಳಿ ತಿಳಿಸುತ್ತಾರೆ.