ಗವಾಯಿಗಳಿಗೆ ಭಾರತರತ್ನ ಪ್ರಶಸ್ತಿ ಸರಕಾರ ನೀಡಲಿ: ಪಿ.ಜಿ.ಆರ್‌.ಸಿಂಧ್ಯಾ

Govt should award Bharat Ratna to Gawais: PGR Scindia


ಗವಾಯಿಗಳಿಗೆ ಭಾರತರತ್ನ ಪ್ರಶಸ್ತಿ ಸರಕಾರ ನೀಡಲಿ: ಪಿ.ಜಿ.ಆರ್‌.ಸಿಂಧ್ಯಾ 

ಕೊಪ್ಪಳ: ವಿಕಲಚೇತನರಾಗಿದ್ದರೂ ಕೂಡಾ ಸಂಗೀತ ಕ್ಷೇತ್ರದಲ್ಲಿ ಸಾಮಾನ್ಯರಿಗಿಂತ ಹೆಚ್ಚಿನ ಸಾಧನೆ ಮಾಡಿದ ಹಾಗೂ ವಿಕಲಚೇತನರ ಬದುಕಿಗೆ ಆಶಾಕಿರಣವಾಗಿದ್ದ ಪಂಡಿತ ಪುಟ್ಟರಾಜ ಗವಾಯಿಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿಯ  ನೀಡುವ ಕಾರ್ಯವನ್ನು ಸರಕಾರ ಮಾಡಬೇಕು ಎಂದು ಮಾಜಿ ಗೃಹ ಸಚಿವರಾದ ಪಿ.ಜಿ.ಆರ್‌.ಸಿಂಧ್ಯಾ ಹೇಳಿದರು. 

  ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರ​‍್ಪ ಅಂಡಗಿ ಚಿಲವಾಡಗಿ ಮಾತನಾಡಿ,ವಿಕಲಚೇತನ ನೌಕರರಿಗೆ 7ನೇ ವೇತನ ಆಯೋಗದ ಪ್ರಕಾರ ಅವರ ಮೂಲ ವೇತನದ ಶೇ.6 ರಷ್ಟು ಸಂಚಾರಿ ಭತ್ಯೆ,ಪೋಷಣಾ ಭತ್ಯೆ ಜಾರಿಗೆ ಮಾಡುವಂತೆ ಆಯೋಗ ವರದಿ ಕೊಟ್ಟು 2 ತಿಂಗಳು ಕಳೆದರೂ ಸರಕಾರ ಮಾತ್ರ ಆದೇಶ ಜಾರಿಗೆ ಮಾಡಿರುವುದಿಲ್ಲ ಹಾಗೂ ನಿರುದ್ಯೋಗಿ ವಿಕಲಚೇತನರ ಅಂಗವೈಕಲ್ಯತೆಯ ಭತ್ಯೆಯನ್ನು ಹೆಚ್ಚಳ ಮಾಡುವುದು, ಶಕ್ತಿ ಯೋಜನೆಯ ಅಡಿಯಲ್ಲಿ ಪುರುಷ ವಿಕಲಚೇತನರಿಗೆ ಉಚಿತ ಪ್ರಯಾಣ,ವಿ.ಆರ್‌.ಡಬ್ಲೂ ಹಾಗೂ ಎಂ.ಆರ್‌.ಡಬ್ಲೂ ಗಳನ್ನು ಆಯಂ ಮಾಡುವುದು,ವಿಕಲಚೇತನ ಮಕ್ಕಳಿಗೆ ನೀಡಲಾಗುವ ವಿದ್ಯಾರ್ಥಿ ವೇತನ ಹೆಚ್ಚಳ ಮಾಡುವುದು ಸೇರಿದಂತೆ ಅನೇಕ ವಿಕಲಚೇತನರ ಬೇಡಿಕೆಗಳನ್ನು ಸರಿಯಾದ ಸಮಯದಲ್ಲಿ ಈಡೇರಿಸಿದಾಗ ಮಾತ್ರ ದಿನಾಚರಣೆಗೆ ಮಹತ್ವ ಬರುತ್ತದೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಮಂಜುನಾಥ ಕುರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ನ ಜಿಲ್ಲಾ ಕಾರ್ಯದರ್ಶಿ ಮಾರುತಿ ಆರೇರ,ತಾಲೂಕ ಕಾರ್ಯದರ್ಶಿ ಮಲ್ಲಪ್ಪ ಗುಡದನ್ನವರ,ಸಹ ಸಂಘಟನಾ ಆಯುಕ್ತರಾದ ಶರೀಫಸಾಬ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪೂರ್ಣಿಮಾ ತುಪ್ಪದ,ಶಾಲಾ ಅಭಿವೃದ್ದಿ ಸಮಿತಿಯ ಸದಸ್ಯರಾದ ಬಾಬಾ ಕಿಲ್ಲೇದಾರ,ಬಸಣ್ಣ ಕಬ್ಬೇರ,ದರಿಯಾಸಾಬ ಕಾತರಕಿ,ಉರ್ದು ಶಾಲಾ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಹುಸೇನಸಾಬ ಕಮ್ಮಾರಶಿಕ್ಷಕರಾದ ಭಾರತಿ ಹವಳೆ,ಮಮತ,ಹನುಮವ್ವ,ಮೇರಾಜುನ್ನಿಸಾ,ಭಾರತಿ ಉಪಾಧ್ಯ, ಗೀತಾ ಕುರಿ, ಜಲಜಾಕ್ಷಿ, ನಗ್ಮಾ, ಹನುಮಂತಪ್ಪ, ರಾಜಾ ಹುಸೇನ ಸೇರಿದಂತೆ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಮಮತಾ ನಿರೂಪಿಸಿದರು. ಬಹಹದ್ದೂರಬಂಡಿ ಕ್ಲಸ್ಟರ್ ನ ಸಿ.ಆರ್‌.ಪಿ.ಹನುಮಂತಪ್ಪ ಕುರಿ ಸ್ವಾಗತಿಸಿ,ಶಿಕ್ಷಕಿ ಗಂಗಮ್ಮ ಕಪರಶೆಟ್ಟಿ ವಂದಿಸಿದರು.