ಹಾವೇರಿ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಡಾ: ಸಂಜಯ ನಾಯ್ಕ ನಾಮಪತ್ರ ಸಲ್ಲಿಕೆ

Dr. Sanjay Naik files nomination for Haveri District Representative post

ಹಾವೇರಿ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಡಾ: ಸಂಜಯ ನಾಯ್ಕ ನಾಮಪತ್ರ ಸಲ್ಲಿಕೆ

ರಾಣೇಬೆನ್ನೂರು  24  : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಚುನಾವಣೆಯು ಏಪ್ರಿಲ್ 13, 2025 ರಂದು ನಡೆಯಲಿದೆ.      ನಗರದ ಖ್ಯಾತ ವೈದ್ಯ ಡಾ:ಸಂಜಯ್ ಎಂ. ನಾಯ್ಕ ಅವರು ಹಾವೇರಿ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಸ್ಪರ್ಧಿಸಿದ್ದು, ಸೋಮವಾರ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ, ಬೆಂಗಳೂರಿನ ಗಾಯತ್ರಿ ಭವನದಲ್ಲಿ  ಚುನಾವಣಾಧಿಕಾರಿಗಳಾದ, ವೆಂಕಟೇಶ್  ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಣೇಬೆನ್ನೂರಿನ ಬ್ರಾಹ್ಮಣ ಸಮಾಜದ ಮುಖಂಡರಾದ ಚಿದಂಬರ್ ಜೋಶಿ,ಸಂಜೀವ ಶಿರಹಟ್ಟಿ, ಸತ್ಯನಾರಾಯಣ ಹೊಳೆಬಾಗಿಲ, ಬದ್ರಿನಾಯ್ಕ ಪಂಪಾ ನಾಯ್ಕ, ಅನಿಲ್ ನಾಡಗೇರ್, ಸೇತುರಾಮ್ ಹಲಗೇರಿ, ಸಿ.ಕೆ. ಕುಲಕರ್ಣಿ, ಗಣೇಶ್ ಜೋಶಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು