ಕೃಷ್ಣಾ ನದಿಯಿಂದ ಕಾಲುವೆಗಳಿಗೆ ನೀರು ಹರಿಸುವುದನ್ನು ಬಂದ್ ಮಾಡಲು ರೈತರ ಒತ್ತಾಯ
ಜಮಖಂಡಿ: 26: ಬೇಸಿಗೆ ಪ್ರಾರಂಭವಾಗಿದೆ, ನದಿಯಲ್ಲಿ ನೀರು ದಿನದಿಂದ ದಿನಕ್ಕೆ ಕಾಲಿಯಾಗುತ್ತಿದೆ, ಬೇಸಿಗೆಯಲ್ಲಿ ಕೃಷ್ಣಾ ನದಿ ತೀರದ ಜನ ಜಾನುವಾರಗಳಿಗೆ ಕುಡಿಯಲು ಸಹ ನೀರು ಉಳಿಯುವದಿಲ್ಲ, ಇಂತಹ ಪರಿಸ್ಥಿತಿ ಇದ್ದರು ಸಚಿವ ಎಂ.ಬಿ.ಪಾಟೀಲ ತಮ್ಮ ಪ್ರಭಾವವನ್ನು ಬಳಸಿ ನೀರು ಎತ್ತಿ ತಮ್ಮ ಮತಕ್ಷೇತ್ರಕ್ಕೆ ಒಯ್ಯುತ್ತಿರುವದು ಖಂಡನಿಯ ಎಂದು ರೈತ ಮುಖಂಡ ಬಿ,ಎಸ್,ಸಿಂಧೂರ, ಮಾಜಿ ಜಿಪಂ ಸದಸ್ಯ ಬಸವರಾಜ ಬಿರಾದಾರ ಹೇಳಿದರು.
ತಾಲ್ಲೂಕಿನ ಕವಟಗಿ ಗ್ರಾಮದ ಹತ್ತಿರ ಇರುವ ಕರ್ನಾಟಕ ನೀರಾವರಿ ನಿಗಮದ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯ ಪಂಪಹೌಸ್ ಘಟಕದ ಮುಂದೆ ಕೃಷ್ಣಾನದಿಯಿಂದ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯ ಮೂಲಕ ನೀರು ಎತ್ತುವದನ್ನು ಬಂದ ಮಾಡಬೇಕು ಎಂದು ಒತ್ತಾಯಿಸಿ ರೈತರ ಪ್ರತಿಭಟಣೆಯಲ್ಲಿ ಮಾತನಾಡಿದರು.
ಮುಖಂಡ ಅಣ್ಣಪ್ಪ ಪಾಟೀಲ ಮಾತನಾಡಿ, ಮಳೆಗಾಲದಲ್ಲಿ ಕೃಷ್ಣಾನದಿ ತುಂಬಿ ಹರಿಯುವಾಗ ನೀರು ಎತ್ತಿ ಕೆರೆ, ಬಾಂಧಾರ ತುಂಬಿಕೊಳ್ಳಬೇಕು, ಅದನ್ನು ಬಿಟ್ಟು ಬೇಸಿಗೆಯಲ್ಲಿ ನೀರು ಎತ್ತಿದರೆ ಇಲ್ಲಿನ ರೈತರು ಏನು ಮಾಡಬೇಕು, ನಮ್ಮ ಭಾಗದ ಜನರನ್ನು ಬಲಿಕೊಟ್ಟು ಇನ್ನೊಂದು ಭಾಗದ ರೈತರನ್ನು ಬದುಕಿಸುವದು ಯಾವ ನ್ಯಾಯ ಕೂಡಲೇ ಬಂದ ಮಾಡಬೇಕು ಇಲ್ಲದಿದ್ದರೆ ಹೋರಾಟ ಉಗ್ರ ರೂಪ ತಾಳುತ್ತದೆ, ಅಹಿತಕರ ಘಟನೆಯಾದರೆ ಸಚಿವರೆ ಕಾರಣರಾಗುತ್ತಾರೆ ಎಂದರು.
ನಾವು ಸಂಪೂರ್ಣವಾಗಿ ಕೃಷ್ಣಾ ನದಿಯ ಮೇಲೆ ಅವಲಂಬಿತರಾಗಿದ್ದೆವೆ, ನೀರಿನ ಅಭಾವ ಇದ್ದರು ಸಚಿವರು ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಹೀಗೆ ಮಾಡುವದು ಸರಿಯಾದ ವ್ಯವಸ್ಥೆಯಲ್ಲ, ಜೀವ ಕೊಟ್ಟು ನೀರು ಉಳಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಮಲ್ಲಪ್ಪಾ ಚಾಮೋಜಿ ಮಾತನಾಡಿ, ಮಳೆಗಾಲದಲ್ಲಿ ತುಬಚಿ ಬಬಲೇಶ್ವರ ಏತ ನೀರಾವರಿಯಿಂದ ಎಲ್ಲ ಕೆರೆಗಳನ್ನು ತುಂಬಿಕೊಂಡಿದ್ದಾರೆ, ಅವರಿಗೆ ಸಾಕಷ್ಟು ನೀರು ಇದ್ದರು ಇನ್ನೂ ಅತಿಯಾಸೆ ಮಾಡುತ್ತಿದ್ದಾರೆ, ಅವರ ಕೆರೆಗಳಲ್ಲಿ ಇದ್ದಷ್ಟು ನೀರು ನಮ್ಮ ನದಿಯಲ್ಲಿ ಉಳಿದಿಲ್ಲ ಎಂದರು.