ಬೆಳಗಾವಿ23 : ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕಾರ್ಯವ್ಯಾಪ್ತಿ ಹೊಂದಿರುವ ಕನರ್ಾಟಕ ಪತ್ರಕರ್ತರ ವಿವಿಧೋದ್ದೇಶಗಳ ಸಹಕಾರಿ ಸಂಘ ಕ್ಕೆ ಬೆಳಗಾವಿಯ ಮುರುಗೇಶ ಶಿವಪೂಜಿ ಅಧ್ಯಕ್ಷರಾಗಿ ಮತ್ತು ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಮಂಜುನಾಥ ನಾಯ್ಕ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಮುಂದಿನ ಐದು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ.
ಬೆಳಗಾವಿ ವಾತರ್ಾ ಇಲಾಖೆಯ ಸಭಾಗೃಹದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯ ನಂತರ ಸಹಕಾರಿ ಇಲಾಖೆಯ ಚುನಾವಣಾಧಿಕಾರಿ ಬಿ.ಜೆ.ಸಾಗರ ಅವರು ಅವಿರೋಧ ಆಯ್ಕೆಯನ್ನು ಘೋಶಿಸಿದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರಗಳನ್ನು ಸಲ್ಲಿಸಲಾಗಿತ್ತು.
ಇತ್ತಿಚೆಗೆ ನಡೆದ ಸಂಘದ ಚುನಾವಣೆಯಲ್ಲಿಯೂ ಎಲ್ಲ 19 ನಿದರ್ೆಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ನಿದರ್ೆಶಕರುಗಳಾಗಿ ರಾಜಶ್ರೀ ಹೊಸಮನಿ (ರಾಯಬಾಗ), ಸಿದ್ದಲಿಂಗಯ್ಯಾ ಹಿರೇಮಠ (ಹಾರೂಗೇರಿ), ಎಂ.ಎನ್.ಪಾಟೀಲ (ಬೆಳಗಾವಿ), ಎ.ಬಿ.ಧಾರವಾಡಕರ (ಬೆಳಗಾವಿ), ಈರಣ್ಣಾ ಬುಡ್ಡಾಗೋಳ (ರಾಮದುರ್ಗ), ಸಂಪತಕುಮಾರ ಮುಚಳಂಬಿ (ಬೆಳಗಾವಿ), ಗೌರಿಶ ಶಾಸ್ತ್ರಿ (ಹೊನ್ನಾವರ), ಎ.ಎಂ.ಕನರ್ಾಚಿ (ಯಮಕನಮರಡಿ) ಅಪ್ಪಾಸಾಹೇಬ ಕುರಣೆ (ಯಕ್ಸಂಬಾ), ಎಲ್.ಎಸ್.ಶಾಸ್ತ್ರಿ (ಬೆಳಗಾವಿ), ಶ್ರೀಶೈಲ ಮಠದ (ಬೆಳಗಾವಿ), ಲಕ್ಷ್ಮೀ ದಿನ್ನಿ (ಮಾರಿಹಾಳ), ಶೀತಲ ಜಕಾತಿ (ಕಬ್ಬೂರ), ಮುರುಗೇಶ ಶಿವಪೂಜಿ (ಬೆಳಗಾವಿ), ಪ್ರತಿಭಾ ಧೂಪದ(ಬೆಳಗಾವಿ) ಪ್ರೇಮಾ ಸಾಲಿಮಠ (ಬೆಳಗಾವಿ), ಪಿ.ಎಫ್.ಲೋಬೊ(ಬೆಳಗಾವಿ), ಮಂಜುನಾಥ ನಾಯ್ಕ (ಅಂಕೋಲಾ) ಮತ್ತು ರುದ್ರಪ್ಪ ಚಂದರಗಿ (ಬೆಳಗಾವಿ) ಮುಂತಾದವರು ಮುಂದಿನ ಐದು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ.
ನಂತರ ನಾಗನೂರು ರುದಾಕ್ಷಿ ಮಠದಲ್ಲಿ ಚುನಾವಣಾಧಿಕಾರಿಗಳಾದ ಬಿ.ಜೆ.ಸಾಗರ, ರವಿಕುಮಾ ಮತ್ತು, ವಾತರ್ಾಧಿಕಾರಿ ಗುರುನಾಥ ಕಡಬೂರ, ಅಧ್ಯಕ್ಷ-ಉಪಾಧ್ಯಕ್ಷರನ್ನು ಸತ್ಕರಿಸಿ ನೂತನ ನಿದರ್ೆಶಕ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ ಡಾ:ತೋಂಟದ ಸಿದ್ದರಾಮ ಸ್ವಾಮಿಜಿ ಅವರು ಅತ್ಯುತ್ತಮ ರೀತಿಯಲ್ಲಿ ಸಂಘವನ್ನು ಈ ಹಿಂದಿನಂತೆ ಮುಂದೆಯೂ ನಡೆಸಬೇಕು ಅಗತ್ಯವಿರುವವರಿಗೆ ಸಂಘದ ಲಾಭ ದೊರಕುವಂತೆ ಶ್ರಮಿಸಬೇಕು ಎಂದು ಸಲಹೆ ನೀಡಿದರು. ಎಲ್.ಎಸ್.ಶಾಸ್ತ್ರಿ ಮಾತನಾಡಿ ಹಿಂದೆಂದಿನಿಂದಲೂ ಸಂಘದ ಚಟುವಟಿಕೆಗಳಿಗೆ ಸ್ವಾಮಿಜಯವರ ಸಹಾಯ ಸಹಕಾರವನ್ನು ನೆನೆಪಿಸಿಕೊಂಡರಲ್ಲದೇ ಮುಂದೆಯೂ ಅದೇ ರೀತಿಯ ಆಶಿವರ್ಾದ ಇರಲೆಂದರು. ಪದನಿಮಿತ್ತ (ಸರಕಾರಿ ಪ್ರತಿನಿಧಿ) ನಿದರ್ೆಶಕ ವಾತರ್ಾ ಇಲಾಖೆಯ ಗುರುನಾಥ ಕಡಬೂರ ಮತ್ತು ಸಹಕಾರಿ ಇಲಾಖೆಯ ರವಿಕುಮಾರ ಚುನಾವಣಾ ಪ್ರಕ್ರಿಯೆಯಲ್ಲಿ ಉಪಸ್ಥಿತರಿದ್ದರು.