ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ತಾಲೂಕಾ ಮತ್ತು ಅಳವಂಡಿ ಹೋಬಳಿ ಘಟಕ ರಚನೆ

Creation of Karnataka Madiga Defense Forum Taluka and Alawandi Hobli Unit

ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ತಾಲೂಕಾ ಮತ್ತು ಅಳವಂಡಿ ಹೋಬಳಿ ಘಟಕ ರಚನೆ

ಕೊಪ್ಪಳ 29: ಜಿಲ್ಲೆಯ ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರ ನಡೆದ ಸಭೆಯಲ್ಲಿ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಕೊಪ್ಪಳ ತಾಲೂಕಾ ಘಟಕ ಹಾಗೂ ಅಳವಂಡಿ ಹೋಬಳಿ ಘಟಕ ರಚಿಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು,  ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ಕೊಪ್ಪಳ ತಾಲೂಕಾ ಘಟಕದ ಅಧ್ಯಕ್ಷ ಮಂಜುನಾಥ ಎಮ್,ಮಳ್ಳನವರ ಆಯ್ಕೆ ಮಾಡಿ ಉಳಿದ ಪದಾಧಿಕಾರಿಗಳನ್ನು ಮುಂದಿನ ಸಭೆಯಲ್ಲಿ ಆಯ್ಕೆ ಮಾಡಲು ಸೂಚಿಸಲಾಯಿತು. ಶೀಘ್ರದಲ್ಲಿ ನಡೆಯುವ ಸಭೆಯಲ್ಲಿ ಯಲಬುರ್ಗಾ ಹಾಗೂ ಕುಕನೂರು ತಾಲೂಕಾಗಳ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು ಎಂದು ಜಿಲ್ಲಾ ಅಧ್ಯಕ್ಷ ಮುದುಕಪ್ಪ ಹೊಸಮನಿ ತಿಳಿಸಿದರು.  ಅಳವಂಡಿ ಹೋಬಳಿ ಘಟಕದ ಅಧ್ಯಕ್ಷರಾಗಿ ಶಿವಕುಮಾರ್ ಡಿ, ನಡುವಿನ ಮನಿ, ಉಪಾಧ್ಯಕ್ಷರಾಗಿ ಸುಭಾಷ್ ಎಮ್,ಹಕ್ಕಾಪುರ ಹನಕುಂಟಿ, ಕಾರ್ಯದರ್ಶಿ ವೆಂಕಟೇಶ್ ಎಲ್,ಮಳ್ಳನವರ, ಖಜಾಂಚಿಯಾಗಿ ಸಂತೋಷ ಆರ್,ಕಳಸಣನವರ,ಸಹ ಕಾರ್ಯದರ್ಶಿಗಳಾಗಿ ಪ್ರವೀಣ ಎಚ್,ನಡುವಿನ ಮನಿ ತಿಗರಿ,ನವೀನ್ ಎಚ್, ಪೂಜಾರ ರಘುನಾಥ ಹಳ್ಳಿ.ಕೋಟೇಪ್ಪ ಎನ್‌.ಡಂಬಳ ನೆಲೋಗಿಪುರ, ಬಸವರಾಜ್ ಬಿ,ದೊಡ್ಮನಿ,ಮಹಾಂತೇಶ್ ಪೂಜಾರ್ ಅಳವಂಡಿ,ಅಣ್ಣಪ್ಪ ಸೋಮಪ್ಪ ಪೂಜಾರ್  ಮುಂತಾದವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಆಯ್ಕೆ ಪ್ರಕ್ರಿಯೆ ನಡೆಸಿದ ಗುಡದಪ್ಪ ಎನ್, ಭಂಗಿ ಘೋಷಿಸಿದರು,  ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಮುದುಕಪ್ಪ ಹೊಸಮನಿ ವಹಿಸಿದ್ದರು.       ಮುಖ್ಯ ಅತಿಥಿಗಳಾಗಿ ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್,ಎ,ಗಫಾರ್ ಮಾತನಾಡಿ ಜನಾಂಗದ ಏಳಿಗೆಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.