ಲೋಕದರ್ಶನ ವರದಿ
ಬಳ್ಳಾರಿ 15: ಗೋವಿಂದವಾಡ ಗ್ರಾಮದ ಪ್ರಗತಿಪರ ರೈತನಾದ ನಾಗರಾಜ್ ರವರ ಹೊದಲ್ಲಿ ಹತ್ತಿ ಬೆಳೆ ಕ್ಷೇತ್ರೋತ್ಸವ ನಡೆಯಿತು. ರಾಶಿ ಸೀಡ್ಸ್ ಕಂಪನಿಯ ಪ್ರಾದೇಶಿಕ ಅಧಿಕಾರಿ ಎಂ.ಉದಯಕುಮಾರ್ ಮತ್ತು ಪ್ರಭುಶಂಕರ ರವರು ಮಾತನಾಡಿ ರಾಶಿ ಸೀಡ್ಸ್ ಆರ್.ಸಿ.ಹೆಚ್. 659 ಹತ್ತಿಯ ತಳಿ 130 ರಿಂದ 140 ದಿನಗಳ ಅವಧಿಯಲ್ಲಿ ಪಸಲು ನೀಡುತ್ತದೆ. ಇದು ಒಣ ಬೇಸಾಯ ಮತ್ತು ನೀರಾವರಿ ಕ್ಷೇತ್ರ ಎರಡರಲ್ಲೂ ಸುಲಭವಾಗಿ ಬೆಳೆಯಬಹುದು ಎಂದು ಮನವರಿಕೆ ಮಾಡಿದರು.
ಒಂದು ಗಿಡದಲ್ಲಿ 80 ರಿಂದ 100 ಕಾಯಿಗಳು ಬಿಡುತ್ತವೆ. ಪ್ರತಿ ಕಾಯಿಯ ತೂಕ ಏಳರಿಂದ 8 ಗ್ರಾಂವರೆಗೆ ತೂಗುತ್ತದೆ. ವರ್ಷದಲ್ಲಿ 2 ಮಿಶ್ರ ಬೆಳೆಯಾಗಿ ಪಡೆಯುವ ಅವಕಾಶ ಇರುವ ಈ ಬೆಳೆಯನ್ನು ಬೆಳೆದು ರೈತರು ಇದರ ಪ್ರಯೋಜನೆ ಪಡೆದುಕೊಳ್ಳಬಹುದು ಎಂದು ಹೇಳಿದರು. ದೊಡ್ಡ ಕಾಯಿ ರಸ ಹೀರುವ ಕೀಟಗಳಿಂದ ರುಕ್ಷೆ ಶೀಗ್ರ ಮರು ಚಿಗುರು ಮಧ್ಯಮ ಅವಧಿ ಬೆಳೆಯಾಗಿದೆ ಎಂದು ರಾಶಿ ಸೀಡ್ಸ್ ಮಹತ್ವವನ್ನು ವಿವರಿಸಿದರು. ರಾಶಿ ಸೀಡ್ಸ್ ಕಂಪನಿಯ ಧನರಾಜ್.ಎಲ್ ತಿಪ್ಪೇಸ್ವಾಮಿ ರೈತರಾದ ನಾಗರಾಜ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು