ಬಳ್ಳಾರಿ 22: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗವು ಓರ್ವ ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಿಸಿದ್ದು, ಜಿಲ್ಲೆಗೆ ಆಗಮಿಸಿದ್ದಾರೆ. ದೆಹಲಿಯ ಐಆರ್ಎಸ್ ಅಧಿಕಾರಿ ಅಭಿಷೇಕ್ ಕುಮಾರ್ ಅವರು ವಿಜಯನಗರ ವಿಧಾನಸಭಾ ಕ್ಷೇತ್ರದ ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸಲಿದ್ದಾರೆ. ಇವರು ಹೊಸಪೇಟೆಯ ಸರಕಾರಿ ಅತಿಥಿಗೃಹ(ಐಬಿ)ದಲ್ಲಿ ತಂಗಲಿದ್ದು, ಅವರ ಮೊ:6366716826 ಇದೆ.
ಸಾರ್ವಜನಿಕರು ಚುನಾವಣಾ ಖರ್ಚು-ವೆಚ್ಚಗಳ ಕುರಿತು ದೂರು,ಮಾಹಿತಿಯನ್ನು ಮೊಬೈಲ್ ಮುಖಾಂತರ ಸಲ್ಲಿಸಬಹುದು. ದೂರು ಮತ್ತು ಮಾಹಿತಿ ನೀಡಲು ವೆಚ್ಚ ವೀಕ್ಷಕರನ್ನು ಪ್ರತಿದಿನ ಬೆಳಗ್ಗೆ 10ರಿಂದ 11ರ ಅವಧಿಯೊಳಗೆ ಅಥವಾ ಸಂಜೆ ಭೇಟಿ ಮಾಡಬಹುದು ಎಂದು ವಿಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶೇಖ್ ತನ್ವೀರ್ ಅಸೀಫ್ ತಿಳಿಸಿದ್ದಾರೆ.