ಬಳ್ಳಾರಿ: ಸಮಾಜದ ಅಭಿವೃದ್ಧಿಯತ್ತ ಚಿಂತನೆ ಮಾಡಬೇಕು: ಎನ್.ತಿಪ್ಪಣ್ಣ

ಲೋಕದರ್ಶನ ವರದಿ

ಬಳ್ಳಾರಿ 18: ವಿರಶೈವ ಸಮಾಜವು ಸಂಘಟಿತವಾಗಿ ಸಮಾಜದ ಅಭಿವೃದ್ಧಿಯತ್ತ ಚಿಂತನೆ ಮಾಡಬೇಕು ಎಂದು ಅಖಿಲ ಭಾರತ ವಿರಶೆವ ಸಮಾಜದ ರಾಜ್ಯ ಅಧ್ಯಕ್ಷ ಎನ್.ತಿಪ್ಪಣ್ಣ ಹೇಳಿದರು.

ಹಾನಗಲ್ಲ ಕುಮಾರ ಮಹಾಸ್ವಾಮಿ 152ನೇ ಪುಣ್ಯ ಸ್ಮರಣೆ ನಿಮಿತ್ತ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ನಗರದ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನ ಮಠದಲ್ಲಿ ಭಾನುವಾರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ವರು, ಮುಖಂಡರು ಸಮಾಜದ ಹಿತದೃಷ್ಟಿ ಇಟ್ಟುಕೊಂಡು ಒಳ್ಳೆಯ ಕೆಲಸ ಮಾಡಬೇಕು. ಸಮಾಜದ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆಯಬೇಕು ಎಂಬ ಹಾನಗಲ್ ಕುಮಾರಸ್ವಾಮಿಗಳ ಅವರ ಚಿಂತನೆಗೆ ಇಂದು ಬಹುದೊಡ್ಡ ಬೆಂಬಲ ವ್ಯಕ್ತವಾಗುತ್ತಿದೆ. ಲಿಂಗಾಯತ ಒಳ ಪಂಗಡದಿಂದಾಗಿ ಶಾಸಕ ಸಂಖ್ಯೆ ಕಡಿಮೆಯಾಗಿದೆ. 90 ರಿಂದ 100 ರಷ್ಟು ಲಿಂಗಾಯತ ಶಾಸಕರು ಇದ್ದರು. ಆದರೆ ಈಗ 40-50 ಕ್ಕೆ ಇಳಿದಿದೆ. ವಿರಶೈವ ಲಿಂಗಾಯತ ಎಂದು ನಮ್ಮ ನಮ್ಮ ನಡುವೆ ಹೊಡೆಯುವ ಕಾರ್ಯ ನಡೆಯುತ್ತಿದೆ. ಇದನ್ನು ಎಚ್ಚೇತ್ತುಕೊಂಡು ಎಲ್ಲಾರೂ ಒಗ್ಗಟ್ಟಾಗಿ ವಿರಶೆವ ಸಮಾಜವು ಸಂಘಟಿಸಿ ಸಮಾಜದ ಅಭಿವೃದ್ಧಿಯತ್ತ ಚಿಂತನೆ ನಡೆಸಬೇಕು ಎಂದರು.

ಕೊಟ್ಟರುಸ್ವಾಮಿ ಸಂಸ್ಥಾನ ಮಠ ಡಾ.ಸಂಗನಬಸವ ಸ್ವಾಮಿ ಸಾನಿಧ್ಯವಹಿಸಿ ಮಾತನಾಡಿ, ಶರಣರು ಮತ್ತು ದಾರ್ಶನಿಕರಿಂದ ವಿಶ್ವದ ಭೂಪಟದಲ್ಲಿ ಗುರುತಿಸಿಕೊಂಡ ದೇಶಕ್ಕೆ ವಿಶಿಷ್ಟ ಧಾರ್ಮಿಕ ಪರಂಪರೆ ಇದೆ. ದಾಸೋಹ, ಶಿಕ್ಷಣ ಕ್ರಾಂತಿ ಮತ್ತು ಮಾನವಿಯ ಮೌಲ್ಯಗಳ ಪ್ರತಿಪಾದನೆಯಲ್ಲಿ ಹಾನಗಲ್ಲ ಕುಮಾರಸ್ವಾಮಿಗಳ ಬದುಕು ದಾರಿದೀಪವಾಗಿದೆ. ನಗರದಲ್ಲಿ ಎಚ್ಆರ್ ಗವಿಯಪ್ಪ ಎಂದು ವೃತ್ತಕ್ಕೆ ನಾಮಕರಣ ಮಾಡಲಾಗಿದೆ. ಆದರೆ ಅಲ್ಲಿ ಬಸವಣ್ಣನವರು ಮೂತರ್ಿ ಪ್ರತಿಷ್ಠಾಪನೆ ಮಾಡಲಾಗಿದೆ. ಆ ವೃತ್ತಕ್ಕೆ ಬಸವಣ್ಣ ವೃತ್ತ ಎಂದು ನಾಮಕರಣ ಮಾಡಬೇಕು. ಎಚ್.ಆರ್.ಗವಿಯಪ್ಪ ನವರ ಹೆಸರನ್ನು ಬೆರೆ ವೃತ್ತಕ್ಕೆ ನಾಮಕರಣ ಮಾಡಲಿ ಎಂದು ಒತ್ತಾಯಿಸಿದರು.

ಮುತ್ತಿನ ಬಸವಲಿಂಗ ಸ್ವಾಮಿ, ಕೊಟ್ಟರು ದೇಶಿಕೇಂದ್ರ ಸ್ವಾಮಿ, ರಾಷ್ಟ್ರೀಯ ಉಪಾಧ್ಯಕ್ಷೆ ಮಧುರಾ ಅಶೋಕಕುಮಾರ, ಜಿಲ್ಲಾಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ, ವಿವಿಸಂಘದ ಗುರುಸಿದ್ದಸ್ವಾಮಿ ಮಾತನಾಡಿ, ಎಸ್.ಕೆ.ವಿ.ವಿವಿಯ ಪ್ರಾಧ್ಯಾಪಕ ಬಸವರಾಜ್ ಬೆಣ್ಣೆ, ವಿವಿ ಸಂಘದ ಅಧ್ಯಕ್ಷ ಉಡೇದ ಬಸವರಾಜ್, ಕಸಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ, ಮುಖಂಡರಾದ ಆರ್.ಎಚ್.ಎಂ.ಚನ್ನಬಸವಸ್ವಾಮಿ, ಗೋನಾಳು ರಾಜಶೇಖರ ಗೌಡ, ಪಲ್ಲೇದ ಪಂಪಾಪಯಿ, ಆರ್.ರಾಮನಗೌಡ, ಅರವಿ ಬಸವನ ಗೌಡ, ಕೆ.ಎಂ.ಉಮಾಪತಿ ಗೌಡ, ಅಸುಂಡಿ ನಾಗರಾಜ್ ಮತ್ತಿತರರಿದ್ದರು.