ಬಳ್ಳಾರಿ: ಆರ್ಥಿಕ ಕುಸಿತ ಪ್ರಸಕ್ತ ವಿದ್ಯಮಾನ ಕಾರ್ಯಕ್ರಮ

ಲೋಕದರ್ಶನ ವದರಿ

ಬಳ್ಳಾರಿ 19: ನಗರದ ಸತ್ಯಂ ಶಿಕ್ಷಣಮಹಾವಿದ್ಯಾಲಯದಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆರ್ಥಿಕ ಕುಸಿತ ಎಂಬ ಪ್ರಸಕ್ತ ವಿದ್ಯಮಾನದ ಕುರಿತು ಕಾರ್ಯಕ್ರಮ ನಡೆಸಿಕೊಡಲಾಯಿತು. 

ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಆರ್.ಸೋಮಶೇಖರ ಗೌಡ ರವರು ಮಾತನಾಡಿ ಇಂದು ನಮ್ಮ ದೇಶದಲ್ಲಿ ಆರ್ಥಿಕತೆ ಹೇಗೆ ಕುಸಿಯುತ್ತಿದೆ, ಆಳುವ ಎಲ್ಲಾ ಸರ್ಕಾರಗಳು ಕೇವಲ ಬಂಡವಾಳಶಾಹಿ ಏಜೇಂಟರುಗಳಾಗಿ ಕೆಲಸಮಾಡುತ್ತಿವೆ ಎಂಬುದರ ಬಗ್ಗೆ ವಿವರಿಸುತ್ತಾ, ಸ್ವತಂತ್ರ ಬಂದಾಗಿನಿಂದಲೂ ಎಲ್ಲಾ ಸರ್ಕಾರಗಳು ಇದೇ ಕೆಲಸ ಮಾಡಿಕೊಂಡುಬಂದಿವೆ ದುಡಿಯುವ ಕೈಗಳಿಗೆ ಕೆಲಸ ಕೊಡದೆ ಎಲ್ಲ ಬಂಡವಾಳಶಾಹಿಗಳ ಪರವಾದ ನೀತಿಗಳನ್ನು ಅನುಸರಿಸುತ್ತಾಬಂದಿವೆ. 

ಕೆಲಸಗಳನ್ನು ಕಡಿತಗೊಳಿಸಿ ಎಲ್ಲಾ ಯಾಂತ್ರೀಕರಣಮಾಡುತ್ತಿವೆ. ಸಂಪತ್ತು ಸೃಷ್ಟಿಸುವ ಕಾರ್ಮಿಕರನ್ನು ಮೂಲೆಗೆ ತಳ್ಳಿ ಬಂಡವಾಳಿಗರೇ ಸಂಪತ್ತಿನ ಸೃಷ್ಟಿಕರ್ತರು ಎಂದು ಎಲ್ಲಾ ಸರ್ಕಾರಗಳು ಸುಳ್ಳು ಪ್ರಚಾರ ಮಾಡಿ ಜನರನ್ನು ವಂಚಿಸುತ್ತಿದೆ, ಆದ ಕಾರಣ ನಾವು ಇಂದು ಎಲ್ಲಾ ಸಮಸ್ಯೆಗಳಿಗೆ ವೈಜ್ಞಾನಿಕವಾಗಿ ಉತ್ತರ ಕಂಡುಕೊಳ್ಳಬೇಕು ಮತ್ತು ಇಂಥ ಜನ ವಿರೋಧಿ ನೀತಿಗಳ ವಿರುದ್ಧ ಹೋರಾಟ ಕಟ್ಟಬೇಕು ಎಂದು ಕರೆ ನೀಡಿದರು.

        ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ರವರು ವಹಿಸಿದದ್ದರು. ಕಾರ್ಯಕ್ರಮದಲ್ಲಿ ಎ.ಐ.ಡಿ.ವೈ.ಒ  ಜಿಲ್ಲಾ ಸಂಚಾಲಕ ಜಗದೀಶ್ ನೇಮಕಲ್ ಹಾಗೂ ಕಾಲೇಜಿನ ಉಪನ್ಯಾಸಕರುಗಳು ಮತ್ತು ವಿದ್ಯಾರ್ಥಿ-ಯುವಕರು ಭಾಗವಹಿಸಿದ್ದರು.